AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್​ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಇಸ್ರೇಲ್ ಮತ್ತು ಹಮಾಸ್ ನಡುವೆ ಸಂಘರ್ಷ ಆರಂಭವಾಗಿ ಐದು ತಿಂಗಳುಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಇಲ್ಲಿಯವರೆಗೆ ಉಭಯ ದೇಶಗಳ ನಡುವಿನ ಕದನ ವಿರಾಮದ ಪ್ರಯತ್ನಗಳು ನಿರಂತರವಾಗಿ ವಿಫಲವಾಗಿವೆ. ಏತನ್ಮಧ್ಯೆ, ಇಸ್ರೇಲ್ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ದಾಳಿಯನ್ನು ಎದುರಿಸುತ್ತಿದೆ. ಮಂಗಳವಾರ ನಡೆದ ಇಂತಹ ಒಂದು ದಾಳಿಯಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅದೇ ವೇಳೆ ಇಬ್ಬರು ಭಾರತೀಯರೂ ಗಾಯಗೊಂಡಿದ್ದಾರೆ. ಲೆಬನಾನ್‌ನಿಂದ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ಇಸ್ರೇಲ್​ನಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿ ಸಾವು, ಇಬ್ಬರಿಗೆ ಗಾಯ
ಕ್ಷಿಪಣಿ ದಾಳಿImage Credit source: Jansatta
ನಯನಾ ರಾಜೀವ್
|

Updated on: Mar 05, 2024 | 8:56 AM

Share

ಇಸ್ರೇಲ್​(Israel) ಹಾಗೂ ಹಮಾಸ್(Hamas)​ ನಡುವಿನ ಸಂಘರ್ಷ ಶಾಂತವಾಗುವಂತೆ ಕಾಣುತ್ತಿಲ್ಲ. ಲೆಬನಾನ್ ಇಸ್ರೇಲ್​ ಮೇಲೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಭಾರತ ಮೂಲದ ಇನ್ನಿಬ್ಬರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಸ್ರೇಲ್​ನ ಉತ್ತರ ಗಡಿಯಲ್ಲಿರುವ ಮಾರ್ಗಲಿಯೊಟ್​ನಲ್ಲಿರುವ ಹಣ್ಣಿನ ತೋಟದ ಮೇಲೆ ಕ್ಷಿಪಣಿ ಬಿದ್ದಿದೆ.

ಇಸ್ರೇಲಿ ರಕ್ಷಣಾ ಸೇವೆಯ ವಕ್ತಾರ ಮಾಜೆನ್ ಡೇವಿಡ್ ಅಡೋಮ್ ಅವರು ಸೋಮವಾರ ಬೆಳಗ್ಗೆ 11 ಗಂಟೆಗೆ ಗಲಿಲಿ ಪ್ರದೇಶದ ಮಾರ್ಗಲಿಯೋಟ್ ಉದ್ಯಾನದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಇದರಲ್ಲಿ ಕೇರಳದ ಕೊಲ್ಲಂ ನಿವಾಸಿ ಪಟ್ನಿಬೆನ್ ಮ್ಯಾಕ್ಸ್ ವೆಲ್ ಪ್ರಾಣ ಕಳೆದುಕೊಂಡಿದ್ದಾರೆ. ಅವರ ದೇಹವನ್ನು ಜೀವಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಗಾಯಗೊಂಡಿರುವ ಬುಷ್ ಜೋಸೆಫ್ ಜಾರ್ಜ್ ಅವರನ್ನು ಪೇಟಾ ಟಿಕ್ವಾದ ಬೆಲಿನ್ಸನ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅವರ ಮುಖ ಮತ್ತು ದೇಹದ ಮೇಲೆ ಹಲವು ಗಾಯಗಳಾಗಿವೆ. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ.

ಗಾಯಗೊಂಡಿರುವ ಇನ್ನೊಬ್ಬ ವ್ಯಕ್ತಿ, ಪಾಲ್ ಮೆಲ್ವಿನ್, ಸಣ್ಣ ಗಾಯಗಳಿಂದ ಬಳಲುತ್ತಿದ್ದು, ಇಸ್ರೇಲಿ ನಗರದ ಸಫೆದ್‌ನಲ್ಲಿರುವ ಝಿವ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರು ಕೇರಳದ ಇಡುಕ್ಕಿ ಜಿಲ್ಲೆಯಿಂದ ಬಂದವರು. ಈ ಘಟನೆಯಲ್ಲಿ ಒಬ್ಬ ವಿದೇಶಿ ಪ್ರಜೆ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಏಜೆನ್ಸಿ ಈ ಹಿಂದೆ ಹೇಳಿತ್ತು.

ಮತ್ತಷ್ಟು ಓದಿ:ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜನ್ಮ ಜಾತಕ ವಿಶ್ಲೇಷಣೆ ಏನು ಹೇಳುತ್ತದೆ?

ಇರಾನ್ ಬೆಂಬಲಿತ ಹಿಜ್ಬುಲ್ಲಾ ಲೆಬನಾನ್​ನಿಂದ ಈ ದಾಳಿ ನಡೆದಿದೆ. ಗಾಜಾದಲ್ಲಿ ಇಸ್ರೇಲ್‌ನ ಯುದ್ಧದ ವಿರುದ್ಧ ಪ್ರತಿಭಟಿಸಿ ಅಕ್ಟೋಬರ್ 8 ರಿಂದ ಹಿಜ್ಬುಲ್ಲಾ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳೊಂದಿಗೆ ಪ್ರತಿದಿನ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಇಸ್ರೇಲ್ ಸೇನೆಯೂ ಸಾಕಷ್ಟು ನಷ್ಟ ಅನುಭವಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ