Maldives: ಮೇ 10ರೊಳಗೆ ದೇಶ ಬಿಟ್ಟು ಹೋಗಿ: ಭಾರತೀಯ ಮಿಲಿಟರಿಗೆ ಮಾಲ್ಡೀವ್ಸ್ ಅಧ್ಯಕ್ಷರಿಂದ ಡೆಡ್​ಲೈನ್

ಮೇ 10ರೊಳಗೆ ಭಾರತೀಯ ಮಿಲಿಟರಿಯವರು ನಾಗರಿಕರ ಪೋಷಾಕಿನಲ್ಲಿರಲಿ, ಹೇಗೇ ಇರಲಿ, ಮಾಲ್ಡೀವ್ಸ್​ನಿಂದ ಜಾಗ ಖಾಲಿ ಮಾಡಬೇಕು ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಜು ಹೇಳಿದ್ದಾರೆ. ಮಾಲ್ಡೀವ್ಸ್​ನಲ್ಲಿ ಭಾರತದ 88 ಮಿಲಿಟರಿ ಸಿಬ್ಬಂದಿ ಮಾಲ್ಡೀವ್ಸ್​ನಲ್ಲಿ ಎರಡು ಹೆಲಿಕಾಪ್ಟರ್ ಮತ್ತು ಒಂದು ವಿಮಾನವನ್ನು ನಿರ್ವಹಿಸುತ್ತಿದ್ದಾರೆ. ಇವುಗಳು ಮಾನವೀಯ ರಕ್ಷಣಾ ಕಾರ್ಯಗಳಿಗೆ ಬಳಸಲಾಗುತ್ತಿದೆ. ಈ ಯಾವ 88 ಭಾರತೀಯ ಸೈನಿಕರು ಮಾಲ್ಡೀವ್ಸ್​ನಲ್ಲಿ ಇರುವಂತಿಲ್ಲ ಎಂದು ಮುಯಿಜು ಮಾಡುತ್ತಿರುವ ತಾಕೀತಾಗಿದೆ.

Maldives: ಮೇ 10ರೊಳಗೆ ದೇಶ ಬಿಟ್ಟು ಹೋಗಿ: ಭಾರತೀಯ ಮಿಲಿಟರಿಗೆ ಮಾಲ್ಡೀವ್ಸ್ ಅಧ್ಯಕ್ಷರಿಂದ ಡೆಡ್​ಲೈನ್
ಮೊಹಮ್ಮದ್ ಮುಯಿಜು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 05, 2024 | 4:29 PM

ನವದೆಹಲಿ, ಮಾರ್ಚ್ 5: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu) ಅವರ ಭಾರತ ವಿರೋಧಿ ಮಾತು ಎಗ್ಗಿಲ್ಲದೇ ಮುಂದುವರಿಯುತ್ತಿದೆ. ಮೇ 10ರೊಳಗೆ ಎಲ್ಲಾ ಭಾರತೀಯ ತುಕಡಿಗಳು ಮಾಲ್ಡೀವ್ಸ್ ನೆಲದಿಂದ ಕಾಲ್ತೆಗೆಯಬೇಕು ಎಂದು ಅವರು ಮತ್ತೆ ತಾಕೀತು ಮಾಡಿದ್ದಾರೆ. ಬಾ ಅತೋಲ್ (Ba Atoll) ಎಂಬಲ್ಲಿ ಸಾರ್ವಜನಿಕ ಸಮಾವೇಶದ ವೇಳೆ ಮುಯಿಜು ಅವರ ಭಾರತ ವಿರೋಧಿ ಮಾತುಗಳು ಕೇಳಿಬಂದವು. ಮೇ 10ರ ನಂತರ ಯಾವ ಭಾರತೀಯ ಮಿಲಿಟರಿ ಸಿಬ್ಬಂದಿಯೂ ಮಾಲ್ಡೀವ್ಸ್​ನಲ್ಲಿ ಇರುವುದಿಲ್ಲ. ನಾಗರಿಕ ಪೋಷಾಕಿನಲ್ಲಿರುವವರೂ ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ಮೊಹಮ್ಮದ್ ಮುಯಿಜು ಎಚ್ಚರಿಕೆ ನೀಡಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಭಾರತದ ಮಿಲಿಟರಿ ವತಿಯಿಂದ ಎರಡು ಹೆಲಿಕಾಪ್ಟರ್ ಮತ್ತು ಒಂದು ಏರ್​ಕ್ರಾಫ್ಟ್​ನ ನಿರ್ವಹಣೆ ಆಗುತ್ತಿದೆ. ಒಟ್ಟು 88 ಮಂದಿ ಸಿಬ್ಬಂದಿ ಇದರಲ್ಲಿ ತೊಡಗಿದ್ದಾರೆ. ಮಾನವ ರಕ್ಷಣಾ ಕಾರ್ಯಗಳಿಗೆ ಇವುಗಳ ಬಳಕೆ ಆಗುತ್ತದೆ. ಈ ಎಲ್ಲಾ 88 ಭಾರತೀಯ ಮಿಲಿಟರಿ ಸಿಬ್ಬಂದಿಯಲ್ಲಿ ಒಬ್ಬರೂ ಕೂಡ ಇರಬಾರದು ಎಂದು ಮೊಹಮ್ಮದ್ ಮುಯಿಜು ಮಾಲ್ಡೀವ್ಸ್ ಅಧ್ಯಕ್ಷರಾಗಿ ಬಂದ ದಿನವೇ ಘಂಟಾಘೋಷವಾಗಿ ಆಜ್ಞೆ ಮಾಡಿದ್ದಾರೆ.

ಇದನ್ನೂ ಓದಿ: ಮಾರಿಷಸ್​ನಲ್ಲಿ ಶಿವರಾತ್ರಿ ಮುನ್ನ ನಡೆದ ಆಚರಣೆ ವೇಳೆ ಅಗ್ನಿ ಅವಘಡ, 6 ಮಂದಿ ಸಾವು

ಕಳೆದ ವಾರವಷ್ಟೇ ಒಂದು ಹೆಲಿಕಾಪ್ಟರ್​ಗೆ ನಿಯೋಜಿಸಿದ್ದ ಮಿಲಿಟರಿ ಸಿಬ್ಬಂದಿಯನ್ನು ಕರೆಸಿಕೊಂಡು, ಅವರ ಜಾಗಕ್ಕೆ ನುರಿತ ನಾಗರಿಕರನ್ನು ಭಾರತ ಕಳುಹಿಸಿದೆ. ಆದರೆ, ನಾಗರಿಕರ ವೇಷ ಹಾಕಿ ಮಿಲಿಟರಿ ಸಿಬ್ಬಂದಿಯನ್ನೇ ಭಾರತ ಕಳುಹಿಸಿದೆ ಎಂಬರ್ಥದಲ್ಲಿ ಅಧ್ಯಕ್ಷರು ಹೇಳಿದ್ದಾರೆ.

ಮೊಹಮ್ಮದ್ ಮುಯಿಜು ಅಧ್ಯಕ್ಷರಾದ ಬಳಿಕ ಚೀನಾ ಜೊತೆ ಹೆಚ್ಚು ಸ್ನೇಹ ಸಂಪಾದನೆ ಮಾಡುತ್ತಿದ್ದಾರೆ. ಮಾಲ್ಡೀವ್ಸ್​ಗೆ ಚೀನಾ ಉಚಿತ ಮಿಲಿಟರಿ ಸಹಾಯ ಮಾಡುವ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿವೆ. ಅದರ ಬೆನ್ನಲ್ಲೇ ಮುಯಿಜು ತಮ್ಮ ಭಾರತ ವಿರೋಧಿ ಹೇಳಿಕೆಯನ್ನು ಇನ್ನಷ್ಟು ಗಟ್ಟಿಯಾಗಿ ನೀಡುತ್ತಿದ್ದಾರೆ.

ಇದನ್ನೂ ಓದಿ: ಒಂದು ತಿಂಗಳೊಳಗೆ ಕ್ಷಮೆಯಾಚಿಸಿ, ಹಣ ಕಟ್ಟಲು ಸಿದ್ಧರಾಗಿ, ಮೊದಲ ಪತಿಯಿಂದ ಸೀಮಾ ಹೈದರ್​ಗೆ ನೋಟಿಸ್​

ವೈದ್ಯಕೀಯ ಕಾರ್ಯಾಚರಣೆಗೆ ಫ್ಲೈಟ್​ಗಳನ್ನು ನಿರ್ವಹಿಸಲು ಶ್ರೀಲಂಕಾ ಜೊತೆ ಮಾಲ್ಡೀವ್ಸ್ ಒಪ್ಪಂದ ಮಾಡಿಕೊಂಡಿರುವುದೂ ಕೂಡ ಗಮನಾರ್ಹ. ಇವೆಲ್ಲಾ ಬೆಳವಣಿಗೆಯೂ ಭಾರತವನ್ನು ಆದಷ್ಟೂ ದೂರ ಇಡುವ ಮಾಲ್ಡೀವ್ಸ್​ನ ಪ್ರಯತ್ನದ ಭಾಗಗಳೇ ಆಗಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ