ಒಂದು ತಿಂಗಳೊಳಗೆ ಕ್ಷಮೆಯಾಚಿಸಿ, ಹಣ ಕಟ್ಟಲು ಸಿದ್ಧರಾಗಿ, ಮೊದಲ ಪತಿಯಿಂದ ಸೀಮಾ ಹೈದರ್​ಗೆ ನೋಟಿಸ್​

ಸೀಮಾ ಹೈದರ್ ಅವರ ಮಾಜಿ ಪತಿ ಗುಲಾಮ್ ಹೈದರ್ ಅವರು ಸೀಮಾ ಮತ್ತು ಅವರ ಪತಿ ಸಚಿನ್ ಮೀನಾಗೆ ತಲಾ 3 ಕೋಟಿ ರೂಪಾಯಿ ನೋಟಿಸ್ ಕಳುಹಿಸಿದ್ದಾರೆ. ತನ್ನ ಮಕ್ಕಳನ್ನು ಮರಳಿ ಕರೆತರಲು ಭಾರತೀಯ ವಕೀಲರನ್ನು ನೇಮಿಸಿದ ಗುಲಾಮ್ ಹೈದರ್, ಸೀಮಾ ಹೈದರ್ ಪರ ವಕೀಲ ಡಾ.ಎಪಿ ಸಿಂಗ್​ಗೂ 5 ಕೋಟಿ ರೂ. ನೋಟಿಸ್ ಕಳುಹಿಸಿದ್ದಾರೆ.

ಒಂದು ತಿಂಗಳೊಳಗೆ ಕ್ಷಮೆಯಾಚಿಸಿ, ಹಣ ಕಟ್ಟಲು ಸಿದ್ಧರಾಗಿ, ಮೊದಲ ಪತಿಯಿಂದ ಸೀಮಾ ಹೈದರ್​ಗೆ ನೋಟಿಸ್​
ಸೀಮಾ ಹೈದರ್Image Credit source: Business Today
Follow us
ನಯನಾ ರಾಜೀವ್
|

Updated on:Mar 05, 2024 | 12:07 PM

ಒಂದು ತಿಂಗಳೊಳಗೆ ಕ್ಷಮೆಯಾಚಿಸಿ, ಹಣ ಕಟ್ಟಲು ಸಿದ್ಧರಾಗಿ ಎಂದು  ಸೀಮಾ ಹೈದರ್​(Seema Haider)ನ ಪತಿ ಪಾಕಿಸ್ತಾನದಿಂದ ನೋಟಿಸ್​ ಕಳುಹಿಸಿದ್ದಾರೆ. ಪ್ರೇಮಿಯನ್ನು ಅರಸಿ ಮಕ್ಕಳನ್ನು ಕಳೆದುಕೊಂಡು ಪಾಕಿಸ್ತಾನದಿಂದ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದ ಸೀಮಾ ಹೈದರ್​ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೀಮಾ ಹೈದರ್ ಅವರ ಮಾಜಿ ಪತಿ ಗುಲಾಮ್ ಹೈದರ್ ಆಕೆಗೆ ಹಾಗೂ ಸಚಿನ್ ಮೀನಾಗೆ ತಲಾ 3 ಕೋಟಿ ರೂಪಾಯಿ ನೋಟಿಸ್ ಕಳುಹಿಸಿದ್ದಾರೆ.

ಗುಲಾಮ್ ಹೈದರ್ ಇತ್ತೀಚೆಗೆ ತನ್ನ ಮಕ್ಕಳನ್ನು ಮರಳಿ ಪಡೆಯಲು ಭಾರತೀಯ ವಕೀಲರನ್ನು ನೇಮಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಗುಲಾಮ್ ಹೈದರ್ ಸೀಮಾ ಪರ ವಕೀಲ ಎಪಿ ಸಿಂಗ್ ಅವರಿಗೂ 5 ಕೋಟಿ ರೂಪಾಯಿ ನೋಟಿಸ್ ಕಳುಹಿಸಿದ್ದಾರೆ. ಗುಲಾಮ್ ಹೈದರ್ ಪರ ವಕೀಲ ಅಲಿ ಮೊಮಿನ್ ಅವರು ಸೀಮಾ ಮತ್ತು ಸಚಿನ್ ಕ್ಷಮೆಯಾಚಿಸಿ ಒಂದು ತಿಂಗಳೊಳಗೆ ದಂಡವನ್ನು ಠೇವಣಿ ಮಾಡುವಂತೆ ಹೇಳಿದ್ದಾರೆ, ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಇದಕ್ಕೂ ಮೊದಲು, ಪಾಕಿಸ್ತಾನದ ಉನ್ನತ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸಾರ್ ಬರ್ನಿ ಅವರನ್ನು ಗುಲಾಮ್ ಹೈದರ್ ತನ್ನ ನಾಲ್ಕು ಮಕ್ಕಳ ಪಾಲನೆ ಪಡೆಯಲು ಸಹಾಯಕ್ಕಾಗಿ ಸಂಪರ್ಕಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ದೃಢಪಡಿಸಿದೆ.

ಮತ್ತಷ್ಟು ಓದಿ: ಅಕ್ರಮವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್​ಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸೋ ಚಾನ್ಸ್​

30 ವರ್ಷದ ಸೀಮಾ ಹೈದರ್ ಪಾಕಿಸ್ತಾನಿ ಪ್ರಜೆ. ಅವರು ಮೂಲತಃ ಪಾಕಿಸ್ತಾನದ ಸಿಂಧ್ ಪ್ರಾಂತ್ಯದವರಾಗಿದ್ದು, ನಾಲ್ಕು ಮಕ್ಕಳ ತಾಯಿಯಾಗಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಗ್ರೇಟರ್ ನೋಯ್ಡಾದಲ್ಲಿ ವಾಸಿಸುವ ಸಚಿನ್ ಮೀನಾ ಅವರೊಂದಿಗೆ ಮದುವೆಯಾಗಲು ಅಕ್ರಮವಾಗಿ ಭಾರತಕ್ಕೆ ಬಂದಿದ್ದರು. ಜೊತೆಗೆ ತನ್ನ ನಾಲ್ಕು ಮಕ್ಕಳನ್ನೂ ಕರೆದುಕೊಂಡು ಬಂದಿದ್ದರು.

ಸೀಮಾ ಮತ್ತು ಸಚಿನ್ ಮೊದಲ ಬಾರಿಗೆ ಆನ್‌ಲೈನ್ ಮಾಧ್ಯಮದ ಮೂಲಕ ಸಂಪರ್ಕಕ್ಕೆ ಬಂದರು. ಸೀಮಾ ಹೈದರ್ ಅವರು ಗೂಢಚರ್ಯೆಯ ಆರೋಪದ ಮೇಲೆ ಮುಖ್ಯಾಂಶಗಳಲ್ಲಿ ಮುಂದುವರಿದರು ಮತ್ತು ಭದ್ರತಾ ಏಜೆನ್ಸಿಗಳ ತನಿಖೆಯನ್ನು ಎದುರಿಸಬೇಕಾಯಿತು. ಸೀಮಾ ಹೈದರ್ ಅವರ ಮಾಜಿ ಪತಿ ಗುಲಾಮ್ ಹೈದರ್ ಸೌದಿ ಅರೇಬಿಯಾದಲ್ಲಿ ವಾಸಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:06 pm, Tue, 5 March 24

ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ