Sign In

By signing in or creating an account, you agree with Associated Broadcasting Company's Terms & Conditions and Privacy Policy.

Spiritual Reason: ಈ ಗ್ರಾಮದಲ್ಲಿ ಮೊದಲ ಮಹಡಿ ಮನೆ ಕಟ್ಟುವುದಕ್ಕೆ ಗ್ರಾಮಸ್ಥರು ಬಿಲ್ಕುಲ್​ ಒಪ್ಪುವುದಿಲ್ಲ! ಯಾಕೆ ಗೊತ್ತಾ?

Patha singarayakonda Village: ಇಡೀ ಗ್ರಾಮದ ಜನರಿಗೆ ಒಳ್ಳೆಯದಾಗಲಿ ಎಂಬ ಬಲವಾದ ನಂಬಿಕೆಯಿದೆ. ಮನೆಗಳು, ಸರ್ಕಾರಿ ಕಚೇರಿಗಳು ನೆಲಮಹಡಿ ಎತ್ತರಕ್ಕೆ ನಿಲ್ಲಬೇಕು. ಈ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡರೆ ಮನೆ ಕಟ್ಟುವ ಕುಟುಂಬದವರು ಅಕಾಲಿಕ ಮರಣ ಹೊಂದುತ್ತಾರೆ ಎನ್ನುತ್ತಾರೆ ಸ್ಥಳೀಯರು.

Spiritual Reason: ಈ ಗ್ರಾಮದಲ್ಲಿ ಮೊದಲ ಮಹಡಿ ಮನೆ ಕಟ್ಟುವುದಕ್ಕೆ ಗ್ರಾಮಸ್ಥರು ಬಿಲ್ಕುಲ್​ ಒಪ್ಪುವುದಿಲ್ಲ! ಯಾಕೆ ಗೊತ್ತಾ?
ಒಮ್ಮೆ ಈ ಗ್ರಾಮದ ಪಕ್ಷಿನೋಟ ನೋಡಿ, ಮೊದಲ ಮಹಡಿಯಿರುವ ಮನೆ ಎಲ್ಲೂ ಇಲ್ಲ!
Follow us
ಸಾಧು ಶ್ರೀನಾಥ್​
|

Updated on: Mar 05, 2024 | 1:43 PM

ಇತ್ತೀಚೆಗೆ ಯಾವ ಊರು ನೋಡಿದರೂ ಅಕ್ಷರಶಃ ಎತ್ತರೆತ್ತಕ್ಕೆ ಬೆಳೆಯುತ್ತಿದೆ. ಎಲ್ಲಿ ನೋಡಿದರೂ ಎತ್ತರದ ಕಟ್ಟಡಗಳು (House) ಕಾಣುತ್ತವೆ. ಹಣ ತೋರಿಸಿದರೆ ಸಾಕು ಬಿಲ್ಡರ್ ಗಳು ಅದ್ಭುತ ಕಟ್ಟಡಗಳನ್ನು ನಿರ್ಮಿಸಿಕೊಡುತ್ತಿದ್ದಾರೆ. ಆದರೆ ಇಲ್ಲೊಂದು ಗ್ರಾಮವಿದೆ. ಗ್ರಾಮದಲ್ಲಿ ಒಂದೇ ಒಂದು ಮಹಡಿ ಮನೆ ಇಲ್ಲ. ಗ್ರಾಮಸ್ಥರು ಮೊದಲ ಮಹಡಿ ಕಟ್ಟಡವನ್ನು ನಿರ್ಮಿಸುವುದಿಲ್ಲವಂತೆ. ಈಗಿನ ಪೀಳಿಗೆಯಲ್ಲಿ ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಲು ಹಾತೊರೆಯುತ್ತಾರೆ. ಈಗಾಗಲೇ ಮನೆ ಹೊಂದಿರುವವರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ ನೆತ್ತಿ ಮೇಲೆ ಇನ್ನೊಂದು ಸೂರು, ಅಂತಸ್ತು ನಿರ್ಮಿಸುತ್ತಾ ಹೋಗುತ್ತಾರೆ. ಆದರೆ ಈ ಗ್ರಾಮದ (Patha singarayakonda Village, Prakasam District) ನಿವಾಸಿಗಳು ಹಣಕಾಸಿನ ವಿಷಯದಲ್ಲಿ ಸ್ಥಿತಿವಂತರೇ ಆಗಿದ್ದರೂ ಮೇಲ್ಮಹಡಿ ನಿರ್ಮಿಸಲು ಸುತರಾಂ ಸಿದ್ಧರಿಲ್ಲ! ಇದಕ್ಕೆ ಕಾರಣ ಏನು ಎಂದು ಈಗ ನೋಡೋಣ (Spiritual Reason).

ಇಂದಿನ ದಿನಗಳಲ್ಲಿ ಸಣ್ಣ ಹಳ್ಳಿ, ದೊಡ್ಡ ಪಟ್ಟಣ ಎಂಬ ಭೇದವಿಲ್ಲ. ಎಲ್ಲೆಂದರಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಆದರೆ ಪ್ರಕಾಶಂ ಜಿಲ್ಲೆಯ ಪಥಸಿಂಗರಕೊಂಡ ಗ್ರಾಮದಲ್ಲಿ ಮನೆ ಮೇಲೆ ಮತ್ತೊಂದು ಮೊದಲ ಮಹಡಿ ನಿರ್ಮಿಸಲು ಗ್ರಾಮಸ್ಥರು ಬಿಡುತ್ತಿಲ್ಲ. ಸುಮಾರು 700 ಜನಸಂಖ್ಯೆಯ ಈ ಗ್ರಾಮದಲ್ಲಿ ವರ್ಷದಿಂದ ವರ್ಷಕ್ಕೆ ಮನೆಗಳು ಬೆಳೆಯುತ್ತಿದ್ದರೂ ಅವುಗಳ ಮೇಲೆ ಇನ್ನೊಂದು ಮತ್ತೊಂದು ಮಹಡಿ ಕಟ್ಟಲು ಮನಸ್ಸು ಮಾಡುತ್ತಿಲ್ಲ. ಅಗತ್ಯ ಬಿದ್ದರೆ ಅಕ್ಕಪಕ್ಕದಲ್ಲಿಯೇ ಇನ್ನೊಂದು ಮನೆ ಕಟ್ಟಿದರೂ ಪರವಾಗಿಲ್ಲ, ಈಗಿರುವ ಮನೆಯ ಮೇಲೆಯೇ ಮೊದಲ ಮಹಡಿ ಕಟ್ಟುವುದಿಲ್ಲ ಎನ್ನುತ್ತಿಲ್ಲ. ಹಾಗಂತ ಇದು ಸರ್ಕಾರವಾಗಲೀ ಅಥವಾ ಸ್ಥಳೀಯ ಆಡಳಿತಗಾರರು ಹೊರಡಿಸಿರುವ ಆದೇಶವಲ್ಲ. ಗ್ರಾಮಸ್ಥರೆಲ್ಲರೂ ಸೇರಿ ತೆಗೆದುಕೊಂಡ ಮಹತ್ವದ ನಿರ್ಧಾರ! ಇದು ತಲೆಮಾರುಗಳಿಂದ ಬಂದಿರುವ ಸಂಪ್ರದಾಯ ಎಂಬುದು ಕುತೂಹಲಕಾರಿ ಸಂಗತಿ.

ಮತ್ತಷ್ಟು ಓದಿ: ಹೀರಾನಂದಾನಿ ಗ್ರೂಪ್​ನ ನಾಲ್ಕು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದಿಂದ ದಾಳಿ; ಫೆಮಾ ನಿಯಮ ಉಲ್ಲಂಘನೆ ಆರೋಪ; ದಾಖಲೆಗಳ ಪರಿಶೀಲನೆ

ಇದಕ್ಕೆ ಕಾರಣ ಆ ಊರಿನಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ. ಈ ಗುಡಿಯಲ್ಲಿರುವ ದೇವರ ದರ್ಶನ ಮಾಡಿ ಮನಃಪೂರ್ವಕವಾಗಿ ಪ್ರಾರ್ಥಿಸಿದರೆ ಯಾವುದೇ ರೀತಿಯ ತೊಂದರೆ ಕಾಡುವುದಿಲ್ಲ. ದೇವರ ಕೃಪಾಕಟಾಕ್ಷದಿಂದ ಯಾವುದೇ ತೊಂದರೆ ಬಾಧಿಸುವುದಿಲ್ಲ, ಆತ ನಮ್ಮನ್ನು ಕಣ್ಣಿನರೆಪ್ಪೆಯಂತೆ ಕಾಪಾಡುತ್ತಾರೆ ಎಂಬುದು ಈ ಜನರ ಗಾಢವಾದ ನಂಬಿಕೆ! ಆದುದರಿಂದಲೇ ತಮ್ಮ ಮನೆ ದೇವಸ್ಥಾನಕ್ಕಿಂತ ಎತ್ತರವಾಗಿರಬಾರದು ಎಂದು ನಿರ್ಧರಿಸಿ, ಅದಕ್ಕೆ ತಕ್ಕಂತೆ ಜೀವಿಸುತ್ತಿದ್ದಾರೆ ಎಲ್ಲರೂ.

ಇದರ ಜೊತೆಗೆ ಇಡೀ ಗ್ರಾಮದ ಜನರಿಗೆ ಒಳ್ಳೆಯದಾಗಲಿ ಎಂಬ ಬಲವಾದ ನಂಬಿಕೆಯಿದೆ. ಮನೆಗಳು, ಸರ್ಕಾರಿ ಕಚೇರಿಗಳು ನೆಲಮಹಡಿ ಎತ್ತರಕ್ಕೆ ನಿಲ್ಲಬೇಕು. ಮೊದಲ ಮಹಡಿ ನಿರ್ಮಿಸಲು ಗ್ರಾಮಸ್ಥರು ಒಪ್ಪುತ್ತಿಲ್ಲ. ಈ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡರೆ ಮನೆ ಕಟ್ಟುವ ಕುಟುಂಬದವರು ಅಕಾಲಿಕ ಮರಣ ಹೊಂದುತ್ತಾರೆ ಎನ್ನುತ್ತಾರೆ ಸ್ಥಳೀಯರು. ಇದರಿಂದ ಮೇಲ್ಮಹಡಿ ನಿರ್ಮಿಸುವುದಿಲ್ಲ ಎಂಬುದು ಈ ಗ್ರಾಮದ ವಿಶೇಷ ಎನಿಸಿಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್