AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್ ಮಗುವಿಗೆ ತಾಯಿಯಾಗಲಿದ್ದಾರೆ ಪಾಕಿಸ್ತಾನದ ಸೀಮಾ ಹೈದರ್

ಪ್ರಿಯಕರನನ್ನು ಅರಸಿ ಮಕ್ಕಳ ಜತೆಗೆ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್(Seema Haider), ಸಚಿನ್ ಮೀನಾ ಅವರ ಮಗುವಿಗೆ ತಾಯಿಯಾಗಲಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೀಮಾ ಮತ್ತು ಸಚಿನ್ ಈ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾಗೆ ಇದು ಐದನೇ ಮಗು. ಇದಕ್ಕೂ ಮೊದಲು, ಅವರು ತಮ್ಮ ಮೊದಲ ಪತಿಯಿಂದ ನಾಲ್ಕು ಮಕ್ಕಳನ್ನು ಹೊಂದಿದ್ದರು. ಈ ಮಕ್ಕಳು ಕೂಡ ಸೀಮಾ ಜೊತೆ ಭಾರತಕ್ಕೆ ಬಂದು ಗ್ರೇಟರ್ ನೋಯ್ಡಾದಲ್ಲಿರುವ ಸಚಿನ್ ಮನೆಯಲ್ಲಿ ನೆಲೆಸಿದ್ದಾರೆ.

ಸೀಮಾ ಹೈದರ್Image Credit source: India Today
ನಯನಾ ರಾಜೀವ್
|

Updated on: Jan 02, 2024 | 7:58 AM

Share

ಪ್ರಿಯಕರನನ್ನು ಅರಸಿ ಮಕ್ಕಳ ಜತೆಗೆ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್(Seema Haider), ಸಚಿನ್ ಮೀನಾ ಅವರ ಮಗುವಿಗೆ ತಾಯಿಯಾಗಲಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೀಮಾ ಮತ್ತು ಸಚಿನ್ ಈ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾಗೆ ಇದು ಐದನೇ ಮಗು. ಇದಕ್ಕೂ ಮೊದಲು, ಅವರು ತಮ್ಮ ಮೊದಲ ಪತಿಯಿಂದ ನಾಲ್ಕು ಮಕ್ಕಳನ್ನು ಹೊಂದಿದ್ದರು. ಈ ಮಕ್ಕಳು ಕೂಡ ಸೀಮಾ ಜೊತೆ ಭಾರತಕ್ಕೆ ಬಂದು ಗ್ರೇಟರ್ ನೋಯ್ಡಾದಲ್ಲಿರುವ ಸಚಿನ್ ಮನೆಯಲ್ಲಿ ನೆಲೆಸಿದ್ದಾರೆ.

ಪಾಕಿಸ್ತಾನದ ನಿವಾಸಿ ಸೀಮಾ ಹೈದರ್ ಮತ್ತು ಯುಪಿ ನಿವಾಸಿ ಸಚಿನ್ ಮೀನಾ ಅವರ ಪ್ರೇಮಕಥೆ ಕಳೆದ ವರ್ಷ ಹೆಚ್ಚು ಚರ್ಚೆಯಲ್ಲಿತ್ತು. ಇಬ್ಬರೂ ಆನ್‌ಲೈನ್ PUBG ಗೇಮ್ ಆಡುವಾಗ ಪರಿಚಯವಾಯಿತು. ಇದಾದ ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ನೇಪಾಳದಲ್ಲಿ ಮತ್ತೆ ಭೇಟಿಯಾದರು. ಸೀಮಾ ಮತ್ತು ಸಚಿನ್ ಇಬ್ಬರೂ ನೇಪಾಳದಲ್ಲಿ ಮದುವೆಯಾಗಿದ್ದರು ಎಂದು ಹೇಳಲಾಗಿದೆ.

ಇದಾದ ನಂತರ ಕಳೆದ ವರ್ಷ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಪಲಾಯನ ಮಾಡಿ ಗ್ರೇಟರ್ ನೋಯ್ಡಾದಲ್ಲಿರುವ ಸಚಿನ್ ಮನೆಗೆ ಅಕ್ರಮವಾಗಿ ಬಂದಿದ್ದರು.

ಮತ್ತಷ್ಟು ಓದಿ: Seema Haider: ಉತ್ತಮ ಪ್ರಜೆಯಾಗುತ್ತೇನೆ, ದೇಶಕ್ಕೆ ಎಂದೂ ದ್ರೋಹ ಮಾಡುವುದಿಲ್ಲ, ಭಾರತದ ಪೌರತ್ವ ನೀಡುವಂತೆ ರಾಷ್ಟ್ರಪತಿಗೆ ಸೀಮಾ ಮನವಿ

ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದರು. ಆದರೆ, ನಂತರ ಅವರಿಗೆ ಜಾಮೀನು ಮಂಜೂರಾಗಿತ್ತು. ಈ ವಿಷಯ ಉಭಯ ದೇಶಗಳ ನಡುವೆ ಚರ್ಚೆಗೆ ಗ್ರಾಸವಾಗಿತ್ತು.

ಸಾಮಾನ್ಯ ಜನರಿಂದ ಹಿಡಿದು ರಾಜಕಾರಣಿಗಳವರೆಗೆ ಎಲ್ಲರೂ ಈ ವಿಷಯದಲ್ಲಿ ಆಸಕ್ತಿ ವಹಿಸಿದರು. ಸೀಮಾ ಹೈದರ್ ಸಚಿನ್ ಮನೆಯಲ್ಲಿ ವಾಸವಾಗಿದ್ದಾಗಿನಿಂದಲೂ ಅವರು ಕರ್ವಾ ಚೌತ್ ಉಪವಾಸ ಮತ್ತು ಇತರ ಹಿಂದೂ ಹಬ್ಬಗಳನ್ನು ಆಚರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ

ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!