AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Acute Hunger: 2023ರಲ್ಲಿ ವಿಶ್ವದಲ್ಲಿ 28 ಕೋಟಿ​ ಜನರು ಹಸಿವಿನಿಂದ ನರಳಿದ್ದಾರೆ: ವಿಶ್ವಸಂಸ್ಥೆ

2023ರಲ್ಲಿ ವಿಶ್ವದಾದ್ಯಂತ ಆಹಾರ ಭದ್ರತೆ ಹದಗೆಟ್ಟಿದ್ದು 28 ಕೋಟಿ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ವಿಶ್ವದಾದ್ಯಂತ ಆಹಾರ ಭದ್ರತೆ ತೀವ್ರ ಹದಗೆಟ್ಟಿತ್ತು, ಗಾಜಾ ಹಾಗೂ ಸುಡಾನ್ ಸಂಘರ್ಷದಿಂದಾಗಿ 282 ಮಿಲಿಯನ್ ಜನರು ಹಸಿವಿನಿಂದ ನರಳಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಸತತ ಐದನೇ ವರ್ಷ 2023ರಲ್ಲಿ ಆಹಾರ ಅಭದ್ರತೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ, ಜೀವಕ್ಕೆ ಅಪಾಯಕಾರಿ ಪ್ರಮಾಣದಲ್ಲಿ ಆಹಾರ ಅಲಭ್ಯತೆಯನ್ನು ತೀವ್ರ ಅಭದ್ರತೆ ಎಂದು ಪರಿಗಣಿಸಲಾಗಿದೆ.

Acute Hunger: 2023ರಲ್ಲಿ ವಿಶ್ವದಲ್ಲಿ 28 ಕೋಟಿ​ ಜನರು ಹಸಿವಿನಿಂದ ನರಳಿದ್ದಾರೆ: ವಿಶ್ವಸಂಸ್ಥೆ
ನಯನಾ ರಾಜೀವ್
|

Updated on: Apr 25, 2024 | 9:29 AM

Share

ವಿಶ್ವದಾದ್ಯಂತ 2023ರಲ್ಲಿ 28 ಕೋಟಿ ಜನರು ಹಸಿವಿ(Hunger)ನಿಂದ ಬಳಲಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಕಳೆದ ವಿಶ್ವದಾದ್ಯಂತ ಆಹಾರ ಭದ್ರತೆ ತೀವ್ರ ಹದಗೆಟ್ಟಿತ್ತು, ಗಾಜಾ ಹಾಗೂ ಸುಡಾನ್ ಸಂಘರ್ಷದಿಂದಾಗಿ 282 ಮಿಲಿಯನ್ ಜನರು ಹಸಿವಿನಿಂದ ನರಳಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಸತತ ಐದನೇ ವರ್ಷ 2023ರಲ್ಲಿ ಆಹಾರ ಅಭದ್ರತೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ, ಜೀವಕ್ಕೆ ಅಪಾಯಕಾರಿ ಪ್ರಮಾಣದಲ್ಲಿ ಆಹಾರ ಅಲಭ್ಯತೆಯನ್ನು ತೀವ್ರ ಅಭದ್ರತೆ ಎಂದು ಪರಿಗಣಿಸಲಾಗಿದೆ. ಎಲ್ ನಿನೊ ಹವಾಮಾನ ವಿದ್ಯಮಾನವು ಪಶ್ಚಿಮ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತೀವ್ರ ಬರಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು.

ಗಾಜಾದಲ್ಲಿ 6 ಲಕ್ಷ ಜನರು ಸೇರಿದಂತೆ ಸುಮಾರು 7 ಲಕ್ಷ ಜನರು ಕಳೆದ ವರ್ಷ ತೀವ್ರ ಹಸಿವಿನಿಂದ ಬಳಲಿದ್ದಾರೆ. ಪ್ಯಾಲೆಸ್ತೀನ್ ಪ್ರದೇಶದಲ್ಲಿ ಈ ಸಂಖ್ಯೆ 1.1 ಲಕ್ಷಕ್ಕೇರಿದೆ. ಈ ಜಾಗತಿಕ ವರದಿಯನ್ನು 2016ರಲ್ಲಿ ಆರಂಭಿಸಿದ ಬಳಿಕ ಇದುವರೆಗೆ ಆಹಾರ ಅಭದ್ರತೆ ಎದುರಿಸುತ್ತಿರುವವರ ಸಂಖ್ಯೆ 108 ಮಿಲಿಯನ್​ನಿಂದ 282 ಮಿಲಿಯನ್​ಗೆ ಏರಿಕೆಯಾಗಿದೆ.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಉಕ್ರೇನ್ ಸೇರಿದಂತೆ 17 ದೇಶಗಳಲ್ಲಿ 2023 ರಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ವರದಿ ಹೇಳಿದೆ.

ಮತ್ತಷ್ಟು ಓದಿ: ಆಹಾರ ಭದ್ರತೆ ಸಾಧನೆಗೆ ಆಹಾರ ಭವಿಷ್ಯತ್: ಇಲ್ಲಿದೆ ತಜ್ಞರ ಸಲಹೆ

ಅಫ್ಘಾನಿಸ್ತಾನ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಇಥಿಯೋಪಿಯಾ, ನೈಜೀರಿಯಾ, ಸಿರಿಯಾ ಮತ್ತು ಯೆಮೆನ್‌ನಲ್ಲಿ ದೀರ್ಘಕಾಲದ ಪ್ರಮುಖ ಆಹಾರ ಬಿಕ್ಕಟ್ಟುಗಳು ನಡೆಯುತ್ತಿವೆ.ಜಗತ್ತಿನಲ್ಲಿ ಸಾಕಷ್ಟು ಮಕ್ಕಳು ಅಪೌಷ್ಠಿಕತೆ, ಹಸಿವಿನಿಂದ ಸಾಯುತ್ತಿದ್ದಾರೆ. ಯುದ್ಧ, ಹವಾಮಾನ ಅವ್ಯವಸ್ಥೆ ಮತ್ತು ಜೀವನ ವೆಚ್ಚದ ಬಿಕ್ಕಟ್ಟಿನಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ