Women Health: ಒಂದೇ ತಿಂಗಳಲ್ಲಿ ಎರಡು ಬಾರಿ ಮುಟ್ಟಾಗುತ್ತಿದೆಯೇ? ಅಪಾಯದ ಬಗ್ಗೆ ಇರಲಿ ಎಚ್ಚರ

| Updated By: preethi shettigar

Updated on: Dec 11, 2021 | 7:35 AM

ಕೆಲವು ಮಹಿಳೆಯರು ನಿಯಮಿತವಾಗಿ ಎರಡು ವಾರಗಳ ಋತುಚಕ್ರವನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಿಗೆ ಇದು ತಾತ್ಕಾಲಿಕ ಸಮಸ್ಯೆಯಾಗಿದೆ. ಇದು ನಿಮಗೆ ಮತ್ತೆ ಮತ್ತೆ ಸಂಭವಿಸುತ್ತಿದ್ದರೆ ಖಂಡಿತವಾಗಿಯೂ ನಿಮ್ಮ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ.

Women Health: ಒಂದೇ ತಿಂಗಳಲ್ಲಿ ಎರಡು ಬಾರಿ ಮುಟ್ಟಾಗುತ್ತಿದೆಯೇ? ಅಪಾಯದ ಬಗ್ಗೆ ಇರಲಿ ಎಚ್ಚರ
ಪ್ರಾತಿನಿಧಿಕ ಚಿತ್ರ
Follow us on

ಮುಟ್ಟು ಯಾವಾಗಲೂ 25 ರಿಂದ 28 ದಿನಗಳ ಮಧ್ಯಂತರದಲ್ಲಿ ಮಹಿಳೆಯರಲ್ಲಿ ಸಂಭವಿಸುತ್ತದೆ. ಹೀಗಾಗಿ 35 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಆಗುವ ಮುಟ್ಟನ್ನು(Periods) ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ಮಹಿಳೆಯು ತನ್ನದೇ ಆದ ಹಾರ್ಮೋನುಗಳನ್ನು ಹೊಂದಿರುತ್ತಾಳೆ ಮತ್ತು ಅದರ ಮೇಲೆ ಮುಟ್ಟಾಗುವುದು ಅವಲಂಬಿಸಿರುತ್ತದೆ ಅಥವಾ ಕೆಲವೊಮ್ಮೆ ಮುಟ್ಟು ತಿಂಗಳಿಗೆ ಎರಡು ಬಾರಿ ಸಂಭವಿಸುತ್ತದೆ. ಮಹಿಳೆಗೆ ತಿಂಗಳಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಮುಟ್ಟಾದರೆ ಅದನ್ನು ಅನಿಯಮಿತ ಮುಟ್ಟು ಎಂದು ಕರೆಯಲಾಗುತ್ತದೆ.

ಈ ರೀತಿಯ ಗಂಭೀರ ಸಮಸ್ಯೆ ಸಂಭವಿಸುತ್ತಿದ್ದರೆ ಅದರ ಬಗ್ಗೆ ಎಚ್ಚರದಿಂದಿರುವುದು ಅವಶ್ಯಕ. ಏಕೆಂದರೆ ವಿವಾಹಿತ ಹುಡುಗಿಯರು ಸುಲಭವಾಗಿ ತಾಯಂದಿರಾಗಲು ಸಾಧ್ಯವಿಲ್ಲ. ಇದರೊಂದಿಗೆ ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳು ಸಹ ಮುಂಚೂಣಿಗೆ ಬರಬಹುದು. ಆದ್ದರಿಂದ ಅನಿಯಮಿತ ಮುಟ್ಟಾಗುವ ಸಮಸ್ಯೆಯಿಂದ ಹೊರಬರಬೇಕು. ಕೆಲವು ಮಹಿಳೆಯರು ನಿಯಮಿತವಾಗಿ ಎರಡು ವಾರಗಳ ಋತುಚಕ್ರವನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಿಗೆ ಇದು ತಾತ್ಕಾಲಿಕ ಸಮಸ್ಯೆಯಾಗಿದೆ. ಇದು ನಿಮಗೆ ಮತ್ತೆ ಮತ್ತೆ ಸಂಭವಿಸುತ್ತಿದ್ದರೆ ಖಂಡಿತವಾಗಿಯೂ ನಿಮ್ಮ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ.

ತಿಂಗಳಿಗೆ ಎರಡು ಬಾರಿ ಮುಟ್ಟಾಗಲು ಕಾರಣಗಳು
ನಿಮ್ಮ ಕುಟುಂಬದಲ್ಲಿ ಯಾರಾದರೂ ಫೈಬ್ರಾಯ್ಡ್‌ಗಳು ಹಾಗೂ ಆರಂಭಿಕ ಋತುಬಂಧವನ್ನು ಹೊಂದಿದ್ದರೆ ನೀವು ತಿಂಗಳಿಗೆ ಎರಡು ಬಾರಿ ಮುಟ್ಟಾಗುವ ಸಾಧ್ಯತೆ ಹೆಚ್ಚು. ತಾಯಂದಿರು ಅನಿಯಮಿತ ರಕ್ತಸ್ರಾವ ಹೊಂದಿದ್ದರೆ ಕೆಲವೊಮ್ಮೆ ಮಕ್ಕಳಿಗೂ ಬರುವ ಸಾಧ್ಯತೆ ಇದೆ. ಅತಿಯಾದ ರಕ್ತಸ್ರಾವ ಉಂಟಾದರೂ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತಹೀನತೆಯ ರೂಪದಲ್ಲಿಯೂ ಈ ಸಮಸ್ಯೆ ಕಂಡುಬರುತ್ತದೆ.

ಹುಣ್ಣುಗಳು ಕಾರಣವಾಗಿರಬಹುದು
ಮುಟ್ಟಿನ ಸಮಯದಲ್ಲಿ ಅಲ್ಸರ್ ಸಮಸ್ಯೆ ತೀವ್ರವಾಗುತ್ತದೆ. ಈ ಕಾರಣದಿಂದ ರಕ್ತಸ್ರಾವ ಹೆಚ್ಚಾಗುತ್ತದೆ. ಕೆಲವೊಮ್ಮೆ ಗರ್ಭಕೋಶದ ಸಮಸ್ಯೆಯಿಂದಲೂ ರಕ್ತಸ್ರಾವ ಹೆಚ್ಚಾಗುತ್ತದೆ.

ಗರ್ಭಪಾತ
ಅನೇಕ ಬಾರಿ ಮಹಿಳೆಯರು ಗರ್ಭಪಾತ ಮಾಡುತ್ತಾರೆ. 15 ರಿಂದ 18 ರಷ್ಟು ಗರ್ಭಧಾರಣೆಗಳು ಗರ್ಭಪಾತದಲ್ಲಿ ಕೊನೆಗೊಳ್ಳುತ್ತವೆ. ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಯೋನಿ ರಕ್ತಸ್ರಾವವನ್ನು ಅನುಭವಿಸುವುದು ಸಾಮಾನ್ಯವಾಗಿದೆ. ಆದರೆ ಇದು ಗರ್ಭಪಾತದ ಸಂಕೇತವೂ ಆಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.

ಹೆಚ್ಚು ಒತ್ತಡ
ಮಹಿಳೆಯು ಹೆಚ್ಚಿನ ಒತ್ತಡದಲ್ಲಿದ್ದರೆ, ಅದು ನೇರವಾಗಿ ಮುಟ್ಟಿನ ಮೇಲೆ ಬೀಳುತ್ತದೆ. ವಾಸ್ತವವಾಗಿ ಒತ್ತಡದಿಂದಾಗಿ ಹಾರ್ಮೋನುಗಳು ರಕ್ತದಲ್ಲಿ ಹೆಚ್ಚಾಗುತ್ತವೆ. ಒತ್ತಡದಿಂದಾಗಿ ಮುಟ್ಟು ನಿರಂತರವಾಗಿರಬಹದು ಅಥವಾ ಬೇಗ ಮುಗಿಯಬಹುದು. ಕೆಲಸದ ಒತ್ತಡ ಅಥವಾ ಮಾನಸಿಕ ಸಮಸ್ಯೆಗಳಿಂದಾಗಿ ಅನಿಯಮಿತ ಮುಟ್ಟಿನ ಸಮಸ್ಯೆ ಎದುರಾಗಬಹದು.

ಇದನ್ನೂ ಓದಿ:
Women Health: ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿನ ಪರಿಹಾರಕ್ಕೆ ಹೀಗೆ ಮಾಡಿ

Women Health: ಪಿಸಿಒಡಿ ಸಮಸ್ಯೆ ಯುವತಿಯರಲ್ಲಿ ಹೆಚ್ಚುವಿಕೆಗೆ ಕಾರಣವೇನು? ಸಮಸ್ಯೆಯ ಲಕ್ಷಣಗಳು ಮತ್ತು ಪರಿಹಾರ ವಿಧಾನ ಹೀಗಿದೆ