ಬತುವಾ ಸೊಪ್ಪುಗಳು ಚಳಿಗಾಲದಲ್ಲಿ ಭಾರತದಲ್ಲಿ ಲಭ್ಯವಿದೆ. ಪಾಕಶಾಲೆಯ ಬಹುಪ್ರಾಮುಖ್ಯತೆ ಜೊತೆಗೆ, ಹೆಚ್ಚಿನ ಪೌಷ್ಠಿಕಾಂಶವನ್ನು ಹೊಂದಿದೆ. ಬತುವಾ ಪರಾಟವನ್ನು ಆರೋಗ್ಯಕರವಾಗಿಸಲು ನಾವು ನಿಮಗೆ ಸುಲಭ ಸಲಹೆಗಳನ್ನು ಕಂಡುಕೊಂಡಿದ್ದೇವೆ. ಹಾಗೂ ಬತುವಾ ಎಲೆಗಳಿಂದ ಮಾಡಿದ ರುಚಿಕರವಾದ ಹಸಿರು ಪರಾಠ ಪಾಕ ವಿಧಾನವನ್ನು ತಿಳಿಸಿಕೊಡುತ್ತೇವೆ. ಆಲೂ ಪರಾಟ, ಪನೀರ್ ಪರಾಟ ಹಾಗೂ ಹೆಚ್ಚಿನವು ಬೆಣ್ಣೆಯೊಂದಿಗೆ ಸವಿಯಲು ಉತ್ತಮವಾಗಿರುತ್ತದೆ. ಬಾಯಲ್ಲಿ ನೀರುರಿಸುವಂತೆ ಮಾಡುವ ಪರಾಟವು ನಮ್ಮೆಲ್ಲರ ಉಪಹಾರದ ಆಯ್ಕೆಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮೂಲಂಗಿ, ಕ್ಯಾರೆಟ್, ಮೆಂತ್ಯೆ ಹಾಗೂ ಇನ್ನಿತರ ಸೀಸನಲ್ ತರಕಾರಿಗಳಿಂದ ಪರಾಟವನ್ನು ತಯಾರು ಮಾಡುತ್ತೇವೆ. ಈ ಬಾರಿ ನಿಮಗೆ ಬತುವಾ ಎಲೆಗಳಿಂದ ಮಾಡುವ ರುಚಿಕರವಾದ ಹಸಿರು ಪರಾಟವನ್ನು ಪರಿಚಯಿಸುತ್ತೇವೆ.
ಇಂಗ್ಲೀಷ್‌ನಲ್ಲಿ ಗ್ರೀನ್ಸ್ ಲ್ಯಾಂಬ್ಸ್ ಕ್ವಾರ್ಟರ್ಸ್ ಎಂದು ಕರೆಯಲ್ಪಡುವ ಬತುವಾ ಎಲೆಗಳು ಚಳಿಗಾಲದಲ್ಲಿ ಭಾರತದಲ್ಲಿ ಲಭ್ಯವಿದೆ. ಆದ್ದರಿಂದ ಈ ಎಲೆಗಳನ್ನು ನಮ್ಮ ಆಹಾರದಲ್ಲಿ ಸೇರಿಸುವ ಮೂಲಕ ನಮ್ಮ ಆರೋಗ್ಯವನ್ನು ಉತ್ತಮವಾಗಿಸಲು ಪ್ರಯತ್ನಿಸುತ್ತೇವೆ. ಪಾಕಶಾಲೆಯ ಬಹುಪ್ರಾಮುಖ್ಯತೆ ಜೊತೆಗೆ ಬತುವಾ ಅದರ ಹೆಚ್ಚಿನ ಪೌಷ್ಠಿಕಾಂಶದ ಮೌಲ್ಯಕ್ಕೂ ಹೆಸರುವಾಸಿಯಾಗಿದೆ. ಇದು ಜೀವಸತ್ವಗಳು, ಖನಿಜಗಳು, ಆಂಟಿಆಕ್ಸಿಡೆಂಟ್ ಹಾಗೂ ಹೆಚ್ಚಿನ ಪೌಷ್ಠಿಕಾಂಶಗಳಿಂದ ತುಂಬಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಒಳಗಿನಿಂದ ನಮ್ಮನ್ನು ಪೋಷಿಸಲು ಸಹಾಯ ಮಾಡುತ್ತದೆ. ಅನಿವಾರ್ಯವಾಗಿ ಈ ಅಂಶಗಳು ಬತುವಾ ಪರಾಠವನ್ನು ಜನಪ್ರಿಯ ಆಯ್ಕೆಯನ್ನಾಗಿ ಮಾಡುತ್ತವೆ.
ಬತುವಾ ಪರಾಟ ಮಾಡಲು ನಿಮಗೆ ಬತುವಾ ಎಲೆಗಳು, ಆಲೂಗಡ್ಡೆ, ಎಣ್ಣೆ, ಮೈದಾ ಮತ್ತು ಕೆಲವೊಂದು ಮಸಾಲೆ ಪದಾರ್ಥಗಳು ಬೇಕಾಗುತ್ತದೆ. ನೀವು ಹೂರಣವನ್ನು ತಯಾರಿಸಿ ಅದನ್ನು ಪರಾಟ ಹಿಟ್ಟಿನಲ್ಲಿ ತುಂಬಿಸಿ ಚೆನ್ನಾಗಿ ಲಟ್ಟಿಸಿ, ದೇಸಿ ತುಪ್ಪದಲ್ಲಿ ಬೇಯಿಸಬೇಕು. ಇದು ತಿನ್ನಲು ಬಲು ರುಚಿಕರವಾಗಿರುತ್ತದೆ.
ಬತುವಾವು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ ಮತ್ತು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದೆ. ಇದು ನಿಮ್ಮ ತೂಕ ನಷ್ಟ ಆಹಾರದಲ್ಲಿ ಸೇರಿಸಲು ಉತ್ತಮ ತರಕಾರಿಯಾಗಿದೆ. ಇದಲ್ಲದೆ ಹೆಚ್ಚಿನ ಫೈಬರ್ ಅಂಶದಿಂದಾಗಿ, ಮಧುಮೇಹ ಹೊಂದಿರುವ ಜನರಿಗೆ ಬತುವಾ ಉತ್ತಮ ಆಯ್ಕೆಯಾಗಿದೆ.
ಆರೋಗ್ಯಕರ ಹಿಟ್ಟನ್ನು ತಯಾರಿಸಿ: ಪರಾಟದ ತಳವು ಭಕ್ಷ್ಯದ ಪೌಷ್ಠಿಕಾಂಶದ ಮೌಲ್ಯದಲ್ಲಿ ಭಾರಿ ವ್ಯತ್ಯಾಸವನ್ನು ಉಂಟು ಮಾಡುತ್ತದೆ. ಇಲ್ಲಿ ಮೈದಾದ ಬದಲು ಮಲ್ಟಿಗ್ರೇನ್ ಆಟ್ಟಾವನ್ನು ಬಳಸಿ. ಮತ್ತು ಹಿಟ್ಟನ್ನು ಬೆರೆಸುವಾಗ ಮೊಸರನ್ನು ಸೇರಿಸಿ. ಇದು ಹಿಟ್ಟನ್ನು ಮೃದುವಾಗಿಸುತ್ತದೆ. ಅಲ್ಲದೆ ಇದರಲ್ಲಿ ಹೆಚ್ಚಿನ ಪ್ರೋಬಯೋಟಿಕ್ ಅಂಶಗಳು ಕೂಡಾ ಇರುತ್ತದೆ.
ಇದನ್ನು ಓದಿ: ಬೆಂಡೆಕಾಯಿಯನ್ನು ಲೋಳೆಯಾಗದಂತೆ ಫ್ರೈ ಮಾಡುವುದು ಹೇಗೆ?; ಸುಲಭದ ಉಪಾಯ ಹೀಗಿದೆ
ಆರೋಗ್ಯಕರ ಸ್ಟಫಿಂಗ್‌ನ್ನು ತಯಾರಿಸಿ: ಬತುವಾ ಆರೋಗ್ಯಕರ ಭಕ್ಷ್ಯದ ಆಯ್ಕೆಯಾಗಿದೆ. ಅದಕ್ಕೆ ಆಲೂಗಡ್ಡೆ ಅಥವಾ ಎಣ್ಣೆಯನ್ನು ಸೇರಿಸುವುದು ಋಣಾತ್ಮಕ ಪರಿಣಾಮವನ್ನು ಬೀರಬಹುದು. ಆದ್ದರಿಂದ ಬತುವಾವನ್ನು ಕತ್ತರಿಸಿ, ಅವುಗಳನ್ನು ಕುದಿಸಿ ನೇರವಾಗಿ ಹಿಟ್ಟಿನೊಂದಿಗೆ ಬೆರೆಸಿ ಮತ್ತು ನಿಮ್ಮ ಆಯ್ಕೆಯ ಮಸಾಲದೊಂದಿಗೆ ಸ್ಟಫಿಂಗ್ ಮಾಡಿಕೊಳ್ಳಿ.
ದೇಸಿ ತುಪ್ಪವನ್ನು ಬಳಸಿ: ಸಾಂಪ್ರದಾಯಿಕವಾಗಿ, ನಾವು ಪರಾಟವನ್ನು ಎಣ್ಣೆಯಲ್ಲಿ ಬೇಯಿಸುತ್ತೇವೆ ನಂತರ ತುಪ್ಪವನ್ನು ಅದರ ಮೇಲೆ ಸುರಿಯುತ್ತೇವೆ. ಇದರ ಬದಲು ಪರಾಠವನ್ನು ತುಪ್ಪದಲ್ಲಿ ಟೋಸ್ಟ್ ಮಾಡಿ. ಇದು ನಿಮ್ಮ ಅಹಾರದಲ್ಲಿ ಆರೋಗ್ಯಕರ ಕೊಬ್ಬನ್ನು ಒಳಗೊಂಡಿರುತ್ತದೆ. ಮತ್ತು ಈ ಪರಾಟವು ಗರಿಗರಿಯಾಗಿ ಮತ್ತು ಕಡಿಮೆ ಕ್ಯಾಲೋರಿಯಿಂದ ಕೂಡಿರುತ್ತದೆ.
ಸ್ಟಫಿಂಗ್‌ನಲ್ಲಿ ಬೀಜಗಳನ್ನು ಸೇರಿಸಿ: ನೀವು ಚೀಯಾ ಸೀಡ್ಸ್, ಸೂರ್ಯಕಾಂತಿ ಬೀಜ, ಅಗಸೆಬೀಜ, ಕುಂಬಳಕಾಯಿ ಬೀಜ ಹಾಗೂ ಇತ್ಯಾದಿಗಳನ್ನು ಸ್ಟಫಿಂಗ್ ಅಥವಾ ಹಿಟ್ಟಿಗೆ ಸೇರಿಸಬಹುದು. ಮತ್ತು ಕೆಲವು ಪೋಷಕಾಂಶಯುಕ್ತ ಪದಾರ್ಥಗಳನ್ನು ಸೇರಿಸಬಹುದು.
ಭಾಗ ನಿಯಂತ್ರಣ: ನಿಮ್ಮ ಆಹಾರವನ್ನು ಆರೋಗ್ಯಕರವಾಗಿರಿಸಲು ನಿಮ್ಮ ಆಹಾರದ ಭಾಗವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅತಿಯಾಗಿ ತಿನ್ನುವುದು ಮತ್ತು ಅಸಮರ್ಪಕವಾಗಿ ತಿನ್ನುವುದು ಎರಡೂ ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಆರೋಗಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Fri, 30 December 22