Cooking Tips: ಬೆಂಡೆಕಾಯಿಯನ್ನು ಲೋಳೆಯಾಗದಂತೆ ಫ್ರೈ ಮಾಡುವುದು ಹೇಗೆ?; ಸುಲಭದ ಉಪಾಯ ಹೀಗಿದೆ

Okra Tips: ನೀವು ಬೆಂಡೆ ಕಾಯಿಯನ್ನು ಬೇಯಿಸುವಾಗ ಲೋಳೆಯಿಂದಾಗಿ ನಿಮ್ಮ ಪಾತ್ರೆಯೆಲ್ಲ ಅಂಟಂಟಾಗುತ್ತದೆಯೇ? ಎಷ್ಟೇ ಪ್ರಯತ್ನಿಸಿದರೂ ಬೆಂಡೆಕಾಯಿಯ ಲೋಳೆ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲವೇ? ಹಾಗಾದರೆ, ಇಲ್ಲಿದೆ ಸರಳ ಉಪಾಯ.

Cooking Tips: ಬೆಂಡೆಕಾಯಿಯನ್ನು ಲೋಳೆಯಾಗದಂತೆ ಫ್ರೈ ಮಾಡುವುದು ಹೇಗೆ?; ಸುಲಭದ ಉಪಾಯ ಹೀಗಿದೆ
ಬೆಂಡೆಕಾಯಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 28, 2022 | 7:25 PM

ಬೆಂಡೆಕಾಯಿ (Lady Finger) ಎಂದರೆ ಬಹುತೇಕರಿಗೆ ಇಷ್ಟ. ಆದರೆ, ಅದರಲ್ಲಿ ಲೋಳೆ ಇರುವುದರಿಂದ ಬೆಂಡೆಕಾಯಿಯ (Okra)  ಪದಾರ್ಥವನ್ನು ಮಾಡುವುದು ತುಸು ಕಿರಿಕಿರಿಯ ಕೆಲಸ. ವರ್ಷಪೂರ್ತಿ ಲಭ್ಯವಿರುವ ಬಹುಮುಖ ತರಕಾರಿಗಳಲ್ಲಿ ಒಂದಾಗಿದೆ. ಬೆಂಡೆಕಾಯಿಯನ್ನು ಸಾಂಬಾರ್, ಗ್ರೇವಿ, ಪಲ್ಯ, ಸಾಸಿವೆ, ಫ್ರೈ ಹೀಗೆ ನಾನಾ ರೀತಿಯಲ್ಲಿ ಬಳಸಲಾಗುತ್ತದೆ. ನೀವು ಪ್ರತಿ ಬಾರಿ ಬೆಂಡೆ ಕಾಯಿಯನ್ನು ಬೇಯಿಸುವಾಗ ಅದರಲ್ಲಿರುವ ಲೋಳೆಯಿಂದಾಗಿ ನಿಮ್ಮ ಪಾತ್ರೆಯೆಲ್ಲ ಅಂಟಂಟಾಗುತ್ತದೆಯೇ? ಎಷ್ಟೇ ಪ್ರಯತ್ನಿಸಿದರೂ ಬೆಂಡೆಕಾಯಿಯ ಲೋಳೆ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲವೇ? ಹಾಗಾದರೆ, ಇಲ್ಲಿದೆ ಸರಳ ಉಪಾಯ.

ಬೆಂಡೆಕಾಯಿಯ ಪದಾರ್ಥವನ್ನು ತಯಾರಿಸುವ ಮೊದಲು ನೀವು ಅನುಸರಿಸಬೇಕಾದ 4 ಸುಲಭ ಕ್ರಮಗಳು ಇಲ್ಲಿವೆ:

1. ಹುಣಸೆ ಹಣ್ಣು/ ಲಿಂಬೆ ಹಣ್ಣು ಹಾಕಿ: ಬೆಂಡೆಕಾಯಿಯನ್ನು ಫ್ರೈ ಮಾಡುವಾಗ ಅದರ ಜೊತೆ ಲಿಂಬೆಹಣ್ಣು, ಹುಣಸೆ ಹಣ್ಣು ಅಥವಾ ಮೊಸರನ್ನು ಕೊಂಚ ಹಾಕುವುದರಿಂದ ಅದು ಲೋಳೆಯ ಅಂಶವನ್ನು ಬಿಡುವುದಿಲ್ಲ. ಆಮ್ಲೀಯ ಗುಣವುಳ್ಳ ವಸ್ತುಗಳನ್ನು ಹಾಕುವುದರಿಂದ ಬೆಂಡೆಕಾಯಿಯ ಲೋಳೆ ಕಡಿಮೆಯಾಗುತ್ತದೆ. ಬೆಂಡೆಕಾಯಿ ಫ್ರೈ ಮಾಡುವಾಗ ಅಥವಾ ಬೇಯಿಸುವಾಗ ಆಮ್ಲೀಯ ಅಂಶಗಳನ್ನು ಸೇರಿಸುವುದರಿಂದ ಜಿಗುಟುತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Lady Finger Benefits: ಬೆಂಡೆಕಾಯಿಯಿಂದ ಮಧುಮೇಹ ನಿಯಂತ್ರಣ ಸಾಧ್ಯ, ಇತರೆ ಪ್ರಯೋಜನಗಳನ್ನು ತಿಳಿಯಿರಿ

2. ಅಡುಗೆ ಮಾಡುವಾಗ ಮುಚ್ಚಿಡಬೇಡಿ: ಬೆಂಡೆಕಾಯಿಯ ಅಡುಗೆ ಮಾಡುವ ಸಮಯದಲ್ಲಿ ಯಾವುದೇ ಹಂತದಲ್ಲಿ ಬೆಂಡೆಕಾಯಿಯ ಹೋಳುಗಳಿರುವ ಪಾತ್ರೆಯನ್ನು ಮುಚ್ಚಿಡಬೇಡಿ. ಬಿಸಿ ಶಾಖದಲ್ಲಿ ಬೆಂಡೆಕಾಯಿಯನ್ನು ಬೇಯಿಸುವಾಗ ಆ ಪಾತ್ರೆ ಓಪನ್ ಆಗಿರಲಿ.

3. ಉಪ್ಪನ್ನು ಸೇರಿಸಬೇಡಿ: ಬೆಂಡೆಕಾಯಿ ಬೇಯಿಸುವಾಗ ಅದಕ್ಕೆ ಬೇಗ ಉಪ್ಪು ಸೇರಿಸಬೇಡಿ. ಆ ಬೆಂಡೆಕಾಯಿ ಸಂಪೂರ್ಣವಾಗಿ ಬೆಂದ ನಂತರ ಅಥವಾ ಫ್ರೈ ಆದ ನಂತರವೇ ಉಪ್ಪು ಸೇರಿಸಿ. ಬೇಗ ಉಪ್ಪು ಸೇರಿಸುವುದರಿಂದ ಬೆಂಡೆಕಾಯಿ ಲೋಳೆಯಾಗುತ್ತದೆ.

ಇದನ್ನೂ ಓದಿ: Lady Finger Benefits: ಬೆಂಡೆಕಾಯಿ ತಿನ್ನುವುದರಿಂದಾಗುವ ಅದ್ಭುತ ಪ್ರಯೋಜನಗಳನ್ನು ತಿಳಿಯಿರಿ

4. ಕಡಲೆ ಹಿಟ್ಟು ಬಳಸಿ: ಬೆಂಡೆಕಾಯಿ ಬೇಯಿಸುವಾಗ ಅಥವಾ ಹುರಿಯುವಾಗ ಅದಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಸೇರಿಸಿದರೆ ಅದು ಲೋಳೆಯಾಗುವುದಿಲ್ಲ. ಕಡಲೆ ಹಿಟ್ಟು ಸೇರಿಸಿದ ನಂತರ ಬೆಂಡೆಕಾಯಿಯನ್ನು ಕೆಲವು ನಿಮಿಷಗಳ ಕಾಲ ಹುರಿಯಿರಿ. ಆಗ ಲೋಳೆಯ ಅಂಶ ಸಂಪೂರ್ಣವಾಗಿ ಹೋಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ