Instant Coffee: ನೀವು ಇನ್ಸ್​​​ಟೆಂಟ್​​​ ಕಾಫಿ ಪ್ರಿಯರೇ? ಹಾಗಾದರೆ ನೀವು ಇದನ್ನು ತಿಳಿದಿರಲೇಬೇಕು

ತತ್‌ಕ್ಷಣದ ಕಾಫಿಯಲ್ಲಿ ಕೊಬ್ಬಿನಾಂಶ ಅಧಿಕವಾಗಿರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಲಿನ ಅಲರ್ಜಿ ಇರುವವರು ಇನ್ ಸ್ಟಂಟ್ ಕಾಫಿ ಕುಡಿಯಬಾರದು. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕಾಫಿ ಬದಲಿಗೆ ಕೆಲವು ಆರೋಗ್ಯಕರ ಪಾನೀಯಗಳನ್ನು ಪ್ರಯತ್ನಿಸಿ.

Instant Coffee: ನೀವು ಇನ್ಸ್​​​ಟೆಂಟ್​​​ ಕಾಫಿ ಪ್ರಿಯರೇ? ಹಾಗಾದರೆ ನೀವು ಇದನ್ನು ತಿಳಿದಿರಲೇಬೇಕು
ನೀವು ಇನ್ಸ್​​​ಟೆಂಟ್​​​ ಕಾಫಿ ಪ್ರಿಯರೇ? ಹಾಗಾದರೆ ನೀವು ಇದನ್ನು ತಿಳಿಯಿರಿ

Updated on: Jan 17, 2024 | 6:06 AM

ಇಂದಿನ ಒತ್ತಡದ ಜೀವನಶೈಲಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಯಾವುದೇ ಕೆಲಸವನ್ನು ಕ್ಷಣಾರ್ಧಲ್ಲಿ ಮಾಡಬೇಕೆಂದು ಬಯಸುತ್ತಾನೆ. ಕೊನೆಗೆ ತಾನು ಸೇವಿಸುವ ಆಹಾರದಿಂದ ಹಿಡಿದು, ಎಲ್ಲವನ್ನೂ ತ್ವರಿತವಾಗಿ ಮಾಡಬೇಕೆಂದು ಬಯಸುತ್ತಾನೆ. ಉದಾಹರಣೆಗೆ ಫಾಸ್ಟ್ ಇನ್‌ಸ್ಟಂಟ್‌ ಫುಡ್‌, ಇನ್‌ಸ್ಟಂಟ್‌ ಕಾಫಿ, ರೆಡಿ ಮೇಡ್​​ ಬಟ್ಟೆ ಧರಿಸಲು ಸಹ ಹೆಚ್ಚು ಇಷ್ಟಡುತ್ತಾರೆ. ಆದರೆ ಇನ್ ಸ್ಟಂಟ್ ಫುಡ್ ಮತ್ತು ಇನ್ ಸ್ಟಂಟ್ ಕಾಫಿ ಆರೋಗ್ಯಕ್ಕೆ ಒಳ್ಳೆಯದಾ? ಮಾರಕವಾ ಎಂಬ ಅನುಮಾನ ನಿಮ್ಮಲ್ಲಿ ಮೂಡಿದೆಯೇ? ಆದರೆ ಈ ತ್ವರಿತ (ಇನ್ಸ್​​​ಟೆಂಟ್​​​) ಕಾಫಿ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ..

ಮಾರುಕಟ್ಟೆಯಲ್ಲಿ ಇನ್ಸ್​​​ಟೆಂಟ್ ಕಾಫಿಯ ಪ್ರವೃತ್ತಿ ಹೆಚ್ಚಾಗಿದೆ. ಸ್ಯಾಚೆಯಲ್ಲಿ ಕಾಫಿ ಪುಡಿ ಇರುತ್ತದೆ. ಈ ಪುಡಿಗೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಲಾಗುತ್ತದೆ. ಇದನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದು ಅಷ್ಟೆ. ಕಾಫಿ ಪ್ರಿಯರು ಈ ತ್ವರಿತ ಕಾಫಿಯನ್ನು ಇಷ್ಟಪಡುತ್ತಾರೆ. ಆದರೆ ಅದು ಪ್ರಯೋಜನಕಾರಿಯೋ ಅಲ್ಲವೋ ಎಂದು ಯಾರೂ ಯೋಚಿಸುವುದಿಲ್ಲ.. ಮಿತಿ ಮೀರಿ ಕಾಫಿ ಕುಡಿಯುವುದು ಸರಿಯಲ್ಲ. ಕಾಫಿ ಕುಡಿಯುವುದರಿಂದ ಖಿನ್ನತೆ, ಹೃದ್ರೋಗ ಮತ್ತು ಟೈಪ್ 2 ಮಧುಮೇಹದಂತಹ ಗಂಭೀರ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾತ್ತದೆ. ಆದರೆ, ಇನ್ಸ್​​​ಟೆಂಟ್ ಕಾಫಿಯಲ್ಲಿ ಸಕ್ಕರೆಯ ಅಂಶ ಹೆಚ್ಚಿರುತ್ತದೆ. ಇದನ್ನು ಅತಿಯಾಗಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ.

ತತ್‌ಕ್ಷಣದ ಕಾಫಿಯಲ್ಲಿ ಕೊಬ್ಬಿನಾಂಶ ಅಧಿಕವಾಗಿರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಹೆಚ್ಚಾಗಲು ಪ್ರಾರಂಭಿಸುತ್ತದೆ. ಹಾಲಿನ ಅಲರ್ಜಿ ಇರುವವರು ಇನ್ ಸ್ಟಂಟ್ ಕಾಫಿ ಕುಡಿಯಬಾರದು. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕಾಫಿ ಬದಲಿಗೆ ಕೆಲವು ಆರೋಗ್ಯಕರ ಪಾನೀಯಗಳನ್ನು ಪ್ರಯತ್ನಿಸಿ. ನೀವು ಗಿಡಮೂಲಿಕೆ ಚಹಾವನ್ನು ಸಹ ಪ್ರಯತ್ನಿಸಬಹುದು. ಉದಾಹರಣೆಗೆ, ಪುದೀನಾ ಚಹಾ ಅಥವಾ ಶುಂಠಿ ಚಹಾ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಕಾರಣ ಕಾಫಿಯ ಬದಲಿಗೆ ಗ್ರೀನ್ ಟೀಯನ್ನು ಕುಡಿಯಬಹುದು. ಚಳಿಗಾಲದಲ್ಲಿ ನೀವು ಕಾಫಿಯ ಬದಲು ಅರಿಶಿನ ಸೇರಿಸಿದ ಹಾಲನ್ನು ಕುಡಿಯಬಹುದು. ಏಕೆಂದರೆ ಇದು ದೇಹವನ್ನು ಬೆಚ್ಚಗಿಡುತ್ತದೆ.

Also Read: ಇಲಿಗಳಿಂದ ಹರಡುವ ಈ ರೋಗಗಳು ಶೀತ ಕೆಮ್ಮಿನಂತೆ ಇರುತ್ತವೆ, ಆದರೆ ಮಾರಣಾಂತಿಕ ಆಗಬಹುದು ಎಚ್ಚರಾ

ವಿಟಮಿನ್ ಸಿ ಇರುವುದರಿಂದ ನೀವು ಚಳಿಗಾಲದಲ್ಲಿ ನಿಂಬೆ ರಸವನ್ನು ಸಹ ಕುಡಿಯಬಹುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅದಕ್ಕಾಗಿ ಎಳನೀರನ್ನು ಸಹ ಬಳಸಬಹುದು. ಇದು ದೇಹವನ್ನು ದೀರ್ಘಕಾಲದವರೆಗೆ ತೇವಾಂಶದಿಂದ ಇಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ