ಸ್ತನ ಕ್ಯಾನ್ಸರ್ ಜಗತ್ತಿನಾದ್ಯಂತ ಮಹಿಳೆಯರಲ್ಲಿ ಅತಿ ಹೆಚ್ಚು ಕಂಡುಬರುತ್ತಿರುವ ಕ್ಯಾನ್ಸರ್ ವಿಧವಾಗಿದೆ. ಮಹಿಳೆಯರ ವಯಸ್ಸು, ಸ್ತನ ಕ್ಯಾನ್ಸರ್‌ನ ಕುಟುಂಬದ ಇತಿಹಾಸ, ಆನುವಂಶಿಕ ರೂಪಾಂತರಗಳು, ದಟ್ಟವಾದ ಸ್ತನ ಅಂಗಾಂಶ, ಹಾರ್ಮೋನುಗಳ ಸಮಸ್ಯೆ, ಆಲ್ಕೊಹಾಲ್ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯಂತಹ ಜೀವನಶೈಲಿಯ ಸಮಸ್ಯೆಗಳಿಂದ ಸ್ತನ ಕ್ಯಾನ್ಸರ್ ಉಂಟಾಗುವ ಅಪಾಯ ಹೆಚ್ಚಾಗಿರುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸುಮಾರು ಶೇ. 59ರಷ್ಟು ಮಹಿಳೆಯರು ಸಾಮಾನ್ಯವಾಗಿ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ.
ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಕಂಡುಹಿಡಿಯುವುದು ಮಹಿಳೆಯರಲ್ಲಿ ರೋಗ ಹೆಚ್ಚಾಗುವಿಕೆ ಮತ್ತು ಮರಣದ ಪ್ರಮಾಣವನ್ನು ಕಡಿಮೆ ಮಾಡಲು ಬಹಳ ಮುಖ್ಯವಾಗಿದೆ.
ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ಇಲ್ಲಿವೆ:
ಗೆಡ್ಡೆಯ ಬೆಳವಣಿಗೆ:
ತೋಳಿನ ಕೆಳಗಿನ ಪ್ರದೇಶದಲ್ಲಿ ಗೆಡ್ಡೆ ಉಂಟಾಗುವುದು ಸ್ತನ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಯಾಗಿದ್ದು, ಅದನ್ನು ಕಡೆಗಣಿಸಬಾರದು.
ಇದನ್ನೂ ಓದಿ: Breast Cancer: ನಿಮ್ಮ ಚರ್ಮದ ಮೇಲಾಗುವ ಈ ಬದಲಾವಣೆ ಸ್ತನ ಕ್ಯಾನ್ಸರ್ ಲಕ್ಷಣಗಳಾಗಿರಬಹುದು ಎಚ್ಚರ!
ಸ್ತನದ ಗಾತ್ರದಲ್ಲಿ ಬದಲಾವಣೆ:
ಸ್ತನದ ಗಾತ್ರ, ಸೂಕ್ಷ್ಮತೆ, ಆಕಾರ ಅಥವಾ ವಿನ್ಯಾಸದಲ್ಲಿನ ಬದಲಾವಣೆಗಳು.
ಮೊಲೆತೊಟ್ಟುಗಳಲ್ಲಿ ಸ್ರವಿಸುವಿಕೆ:
ಮೊಲೆತೊಟ್ಟುಗಳಿಂದ ಅತಿಯಾದ ಮತ್ತು ಅಸಹಜ ಸ್ರವಿಸುವಿಕೆಯು ಸ್ತನ ಕ್ಯಾನ್ಸರ್ ಅನ್ನು ಸೂಚಿಸುತ್ತದೆ. ಅದು ಸ್ಪಷ್ಟ ಬಣ್ಣದಲ್ಲಿರಬಹುದು ಅಥವಾ ರಕ್ತದ ಬಣ್ಣ ಅಥವಾ ಹಳದಿ ಬಣ್ಣದ್ದಾಗಿರಬಹುದು.
ಕಾಲರ್ಬೋನ್ ಊತ:
ನಿಮ್ಮ ಕಾಲರ್ ಬೋನ್ ಅಥವಾ ತೋಳಿನ ಕೆಳಗೆ ಊತ ಉಂಟಾಗುವುದು ನಿಮ್ಮ ಸ್ತನ ಕ್ಯಾನ್ಸರ್ ದುಗ್ಧರಸ ಗ್ರಂಥಿಗಳಿಗೆ ಹರಡಿರುವುದರ ಲಕ್ಷಣವಾಗಿರಬಹುದು.
ಸ್ತನದಲ್ಲಿ ನೋವು:
ಸ್ತನದ ಬಳಿ ಮೃದುತ್ವ ಅಥವಾ ನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: Breast Cancer: ತಲೆನೋವಿಗೂ ಸ್ತನ ಕ್ಯಾನ್ಸರ್ಗೂ ಇದೆ ಸಂಬಂಧ; ಈ ಬಗ್ಗೆ ಎಚ್ಚರವಿರಲಿ
ಸ್ಕಿನ್ ಡಿಂಪ್ಲಿಂಗ್, ಮೊಲೆತೊಟ್ಟುಗಳ ಹಿಂತೆಗೆದುಕೊಳ್ಳುವಿಕೆ, ಮತ್ತು ಮೊಲೆತೊಟ್ಟು ಅಥವಾ ಸ್ತನ ಚರ್ಮವು ಕೆಂಪು, ಶುಷ್ಕ, ಫ್ಲೇಕಿಂಗ್ ಅಥವಾ ದಪ್ಪವಾಗಿರುವುದು ಕೂಡ ಸ್ತನ ಕ್ಯಾನ್ಸರ್ ಅನ್ನು ಸೂಚಿಸುತ್ತದೆ. ನಿಯಮಿತ ಸ್ವಯಂ ಸ್ತನ ಪರೀಕ್ಷೆಯು ಸ್ತನ ಕ್ಯಾನ್ಸರ್ ಅನ್ನು ಸೂಚಿಸುವ ಬದಲಾವಣೆಗಳನ್ನು ಪತ್ತೆಹಚ್ಚಲು ಸುಲಭವಾಗುತ್ತದೆ. ಈ ಸರಳ ಅಭ್ಯಾಸವನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವ ಮೂಲಕ ಸ್ತನದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಆರಂಭಿಕ ಹಂತದಲ್ಲಿ ಅದನ್ನು ಪತ್ತೆಹಚ್ಚಲು ಸಹಾಯಕವಾಗುತ್ತದೆ. ಆರಂಭದಲ್ಲೇ ಸ್ತನ ಕ್ಯಾನ್ಸರ್‌ನ ಪತ್ತೆ ಮಾಡುವುದರಿಂದ ಜೀವವನ್ನು ಉಳಿಸಬಹುದು.
ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಮತೋಲಿತ ಆಹಾರ ಮತ್ತು ಆಗಾಗ ವ್ಯಾಯಾಮವನ್ನು ಮಾಡಬೇಕು. ಹಾಗೇ, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು. ಸ್ತನ ಕ್ಯಾನ್ಸರ್ 161 ದೇಶಗಳಲ್ಲಿ ಮಹಿಳೆಯರಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕ್ಯಾನ್ಸರ್ ಆಗಿದೆ. 98 ದೇಶಗಳಲ್ಲಿ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಸ್ತನ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ ಎಂಬುದು ಆತಂಕಕಾರಿ ಸಂಗತಿಯಾಗಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Fri, 8 March 24