ಮೂಲವ್ಯಾಧಿ ಅಥವಾ ಕ್ಯಾನ್ಸರ್? ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ

| Updated By: ನಯನಾ ರಾಜೀವ್

Updated on: Jul 27, 2022 | 9:59 AM

ಮಲದ ಜತೆ ರಕ್ತಸ್ರಾವವಾಗುವುದು ಕೆಲವೊಮ್ಮೆ ಮೂಲವ್ಯಾಧಿಯ ಲಕ್ಷಣವಾಗಿರಬಹುದು ಇನ್ನೂ ಕೆಲವೊಮ್ಮೆ ವಿರಳ ಕ್ಯಾನ್ಸರ್ ಕೂಡ ಆಗಿರಬಹುದು. ಹೀಗಾಗಿ ಮೂಲವ್ಯಾಧಿಯ ಲಕ್ಷಣಗಳು ಗೋಚರಿಸಿದರೂ ಕೂಡ ನೀವೇ ವೈದ್ಯರಾಗಬೇಡಿ, ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಸೂಕ್ತ.

ಮೂಲವ್ಯಾಧಿ ಅಥವಾ ಕ್ಯಾನ್ಸರ್? ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ
Piles
Follow us on

ಮಲದ ಜತೆ ರಕ್ತಸ್ರಾವವಾಗುವುದು ಕೆಲವೊಮ್ಮೆ ಮೂಲವ್ಯಾಧಿಯ ಲಕ್ಷಣವಾಗಿರಬಹುದು ಇನ್ನೂ ಕೆಲವೊಮ್ಮೆ ವಿರಳ ಕ್ಯಾನ್ಸರ್ ಕೂಡ ಆಗಿರಬಹುದು.
ಹೀಗಾಗಿ ಮೂಲವ್ಯಾಧಿಯ ಲಕ್ಷಣಗಳು ಗೋಚರಿಸಿದರೂ ಕೂಡ ನೀವೇ ವೈದ್ಯರಾಗಬೇಡಿ, ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಸೂಕ್ತ. ಗುದನಾಳದಲ್ಲಿ ನೋವು, ರಕ್ತಸ್ರಾವ, ಆಯಾಸ ಇವೆಲ್ಲವೂ ಮೂಲವ್ಯಾಧಿಯ ಲಕ್ಷಣಗಳಾಗಿರುತ್ತವೆ, ಆದರೆ ಜನರು ಈ ಲಕ್ಷಣಗಳನ್ನು ನಿರ್ಲಕ್ಷಿಸಿ ಮನೆಯಲ್ಲಿ ತಾವೇ ಏನೋ ಮನೆಮದ್ದು ಮಾಡಿಕೊಂಡು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ವೈದ್ಯರ ಬಳಿ ತೆರಳಲು ಎಂದೂ ಹಿಂಜರಿಯಬೇಡಿ, ಮುಕ್ತವಾಗಿ ಅವರ ಬಳಿ ನಿಮಗೆ ಆಗುತ್ತಿರುವ ಸಮಸ್ಯೆಗಳನ್ನು ಹೇಳಿ. ಮೂಲವ್ಯಾಧಿಯಲ್ಲಿ (ಪೈಲ್ಸ್) ಎರಡು ವಿಧ. ರಕ್ತನಾಳಗಳ ಊತವು ಆಂತರಿಕ ಮೂಲವ್ಯಾಧಿಯಲ್ಲಿ ಗೋಚರಿಸುವುದಿಲ್ಲ, ಆದರೆ ಬಾಹ್ಯ ಮೂಲವ್ಯಾಧಿಯಲ್ಲಿ ಇದು ಗುದದ್ವಾರದ ಹೊರಗೆ ಗೋಚರಿಸುತ್ತದೆ.

ಅತಿಯಾದ ನೋವು ಮತ್ತು ರಕ್ತಸ್ರಾವದ ಸಮಸ್ಯೆ ಇರುತ್ತದೆ. ಮೂಲವ್ಯಾಧಿ ರೋಗಕ್ಕೆ ಕೆಲವು ಮನೆ ಮದ್ದುಗಳು ಬಹಳ ಸಹಾಯಕವಾಗಿವೆ.
ಕ್ಯಾನ್ಸರ್​ನ ಕೆಲವು ಲಕ್ಷಣಗಳು ಮೂಲವ್ಯಾಧಿಯ ಲಕ್ಷಣದಂತೆಯೇ ಇರುತ್ತವೆ.

-ಗುದನಾಳದ ಬಳಿ ನೋವು, ತುರಿಕೆ
-ಪದೇ ಪದೇ ಮಲವಿಸರ್ಜನೆ
-ಗುದನಾಳದಲ್ಲಿ ರಕ್ತಸ್ರಾವ
-ಗುದನಾಳದಲ್ಲಿ ಮೊಳಕೆ ರೀತಿಯ ಚರ್ಮ ಬೆಳೆಯುವುದು
ಕ್ಯಾನ್ಸರ್​ನ ಲಕ್ಷಣಗಳು
ಗುದನಾಳದಲ್ಲಿ ನೋವು, ತುರಿಕೆ
ರಕ್ತಸ್ರಾವ

ಒಮ್ಮೆ ಕ್ಯಾನ್ಸರ್​ ಪತ್ತೆಯಾಯಿತೆಂದರೆ ತಕ್ಷಣ ಕೀಮೋಥೆರಪಿಯನ್ನು ಮಾಡಲು ವೈದ್ಯರು ಸಲಹೆ ನೀಡುತ್ತಾರೆ. ಕ್ಯಾನ್ಸರ್ ಗಡ್ಡೆ ಎಷ್ಟು ದೊಡ್ಡದಾಗಿದೆ ಎಂಬುದರ ಮೇಲೆ ರೇಡಿಯೋಥೆರಪಿ ಮಾಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುತ್ತದೆ.

ಹಾಗೆಯೇ ಪ್ರೋಟೋನ್ ಥೆರಪಿಯಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ, ಇದರಲ್ಲಿ ಶೇ.92ರಷ್ಟು ಮಂದಿ ಸಂಪೂರ್ಣವಾಗಿ ಕ್ಯಾನ್ಸರ್​ನಿಂದ ಗುಣಮುಖರಾಗಿದ್ದಾರೆ.

ಹಾಗೆಯೇ ಈ ಥೆರಪಿಯು ಆರೋಗ್ಯಕರ ಟಿಶ್ಯೂಗಳಿಗೆ ತೊಂದರೆ ಮಾಡದಂತೆ ಕ್ಯಾನ್ಸರ್​ಕಾರಣ ಟಿಶ್ಯೂವನ್ನು ತೆಗೆದುಹಾಕುತ್ತದೆ.

(ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೂ ವೈದ್ಯರನ್ನು ಸಂಪರ್ಕಿಸಿ.)

Published On - 9:58 am, Wed, 27 July 22