Piles: ಮೂಲವ್ಯಾಧಿ ಸಮಸ್ಯೆ ಕಾಡುತ್ತಿದೆಯೇ? ಈ ಮನೆಮದ್ದುಗಳನ್ನು ಟ್ರೈ ಮಾಡಿ

ಗುದನಾಳದ ಸುತ್ತಲಿನ ರಕ್ತನಾಳಗಳಲ್ಲಿ ಕಾಣಿಸಿಕೊಳ್ಳುವುದರಿಂದ ಮೂಲವ್ಯಾಧಿ( Piles) ಸಮಸ್ಯೆಯುಂಟಾಗುತ್ತದೆ. ಅನಿಯಮಿತ ಆಹಾರ ಪದ್ಧತಿ ಇದಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು. ಮೂಲವ್ಯಾಧಿಯಲ್ಲಿ (ಪೈಲ್ಸ್) ಎರಡು ವಿಧ. ರಕ್ತನಾಳಗಳ ಊತವು ಆಂತರಿಕ ಮೂಲವ್ಯಾಧಿಯಲ್ಲಿ ಗೋಚರಿಸುವುದಿಲ್ಲ, ಆದರೆ ಬಾಹ್ಯ ಮೂಲವ್ಯಾಧಿಯಲ್ಲಿ ಇದು ಗುದದ್ವಾರದ ಹೊರಗೆ ಗೋಚರಿಸುತ್ತದೆ. ಅತಿಯಾದ ನೋವು ಮತ್ತು ರಕ್ತಸ್ರಾವದ ಸಮಸ್ಯೆ ಇರುತ್ತದೆ. ಮೂಲವ್ಯಾಧಿ ರೋಗಕ್ಕೆ ಕೆಲವು ಮನೆ ಮದ್ದುಗಳು ಬಹಳ ಸಹಾಯಕವಾಗಿವೆ. ಈ ರೋಗ ಸಂಭವಿಸಲು ಮುಖ್ಯ ಕಾರಣ ಅನಿಯಮಿತ ದಿನಚರಿ ಮತ್ತು ಆಹಾರ ಪದ್ಧತಿ. ಬೊಜ್ಜು, ಮಲಬದ್ಧತೆ, […]

Piles: ಮೂಲವ್ಯಾಧಿ ಸಮಸ್ಯೆ ಕಾಡುತ್ತಿದೆಯೇ? ಈ ಮನೆಮದ್ದುಗಳನ್ನು ಟ್ರೈ ಮಾಡಿ
Piles
Follow us
TV9 Web
| Updated By: ನಯನಾ ರಾಜೀವ್

Updated on: Jul 26, 2022 | 8:30 PM

ಗುದನಾಳದ ಸುತ್ತಲಿನ ರಕ್ತನಾಳಗಳಲ್ಲಿ ಕಾಣಿಸಿಕೊಳ್ಳುವುದರಿಂದ ಮೂಲವ್ಯಾಧಿ( Piles) ಸಮಸ್ಯೆಯುಂಟಾಗುತ್ತದೆ. ಅನಿಯಮಿತ ಆಹಾರ ಪದ್ಧತಿ ಇದಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು. ಮೂಲವ್ಯಾಧಿಯಲ್ಲಿ (ಪೈಲ್ಸ್) ಎರಡು ವಿಧ. ರಕ್ತನಾಳಗಳ ಊತವು ಆಂತರಿಕ ಮೂಲವ್ಯಾಧಿಯಲ್ಲಿ ಗೋಚರಿಸುವುದಿಲ್ಲ, ಆದರೆ ಬಾಹ್ಯ ಮೂಲವ್ಯಾಧಿಯಲ್ಲಿ ಇದು ಗುದದ್ವಾರದ ಹೊರಗೆ ಗೋಚರಿಸುತ್ತದೆ.

ಅತಿಯಾದ ನೋವು ಮತ್ತು ರಕ್ತಸ್ರಾವದ ಸಮಸ್ಯೆ ಇರುತ್ತದೆ. ಮೂಲವ್ಯಾಧಿ ರೋಗಕ್ಕೆ ಕೆಲವು ಮನೆ ಮದ್ದುಗಳು ಬಹಳ ಸಹಾಯಕವಾಗಿವೆ. ಈ ರೋಗ ಸಂಭವಿಸಲು ಮುಖ್ಯ ಕಾರಣ ಅನಿಯಮಿತ ದಿನಚರಿ ಮತ್ತು ಆಹಾರ ಪದ್ಧತಿ. ಬೊಜ್ಜು, ಮಲಬದ್ಧತೆ, ಅತಿಯಾದ ಲೈಂಗಿಕ ಸಂಭೋಗ, ನಿಗ್ರಹಿಸಿದ ಮಲವಿಸರ್ಜನೆ, ಕೆಟ್ಟ ಜೀವನಶೈಲಿ ಇದಕ್ಕೆ ಕಾರಣವಾಗಿವೆ.

ಅಷ್ಟೆ ಅಲ್ಲ, ಅತಿಯಾದ ದೈಹಿಕ ಒತ್ತಡ, ಮಾಂಸಾಹಾರಿ ಆಹಾರ ಸೇವನೆ, ಆಲ್ಕೋಹಾಲ್, ಮಸಾಲೆಯುಕ್ತ ಆಹಾರಗಳು ಇತರ ಕೆಲವು ಅನಿಶ್ಚಿತ ಕಾರಣಗಳಾಗಿವೆ.

ಲಕ್ಷಣಗಳೇನು? -ಗುದನಾಳದ ಬಳಿ ತುರಿಕೆ, ನೋವು -ಮಲ ವಿಸರ್ಜಿಸುವಾಗ ನೋವು ಹಾಗೂ ರಕ್ತಸ್ರಾವ ಮೂಲವ್ಯಾಧಿಯನ್ನು ಹೋಗಲಾಡಿಸಲು ಮನೆಮದ್ದು ಇಲ್ಲಿದೆ

ಬಿಸಿ ನೀರಿನ ಸ್ನಾನ: ಬೆಚ್ಚನೆಯ ನೀರಿನಿಂದ ಸ್ನಾನ ಮಾಡಿ, ಹಾಗೆಯೇ ಪ್ಲಾಸ್ಟಿಕ್ ಟಬ್​ ಒಂದರಲ್ಲಿ ಬೆಚ್ಚಗಿನ ನೀರು ಹಾಕು ಅದರಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳಿ, ಇದರಿಂದ ಆ ಜಾಗವು ಮೃದುವಾಗಿ ನೋವು ಕಡಿಮೆಯಾಗಲಿದೆ.

ಕೋಲ್ಡ್​ ಕಂಪ್ರೆಸ್​: ಐಸ್​ ಪ್ಯಾಕ್​ ಅನ್ನು ಆ ಜಾಗಕ್ಕೆ 15 ನಿಮಿಷಗಳ ಕಾಲ ಅಪ್ಲೈ ಮಾಡಿ. ಅಂಜೂರದಿಂದ ಮೂಲವ್ಯಾಧಿಗೆ ಪರಿಹಾರ 2-3 ಅಂಜೂರದ ಹಣ್ಣುಗಳನ್ನು ಬಿಸಿ ನೀರಿನಿಂದ ತೊಳೆದು ರಾತ್ರಿಯಿಡೀ ಗಾಜಿನ ಪಾತ್ರೆಯಲ್ಲಿ ನೆನೆಸಿ. ಬೆಳಿಗ್ಗೆ ಅವುಗಳನ್ನು ಬೆರೆಸಿ ತಿನ್ನಿರಿ ಮತ್ತು ಅದರ ನೀರನ್ನು ಕುಡಿಯಿರಿ. ಎರಡು-ಮೂರು ವಾರಗಳವರೆಗೆ ಅಂಜೂರದ ಹಣ್ಣುಗಳನ್ನು ಬಳಸುವುದು ಮೂಲವ್ಯಾಧಿ ಅಥವಾ ಪೈಲ್ಸ್ ರೋಗಕ್ಕೆ ಪ್ರಯೋಜನಕಾರಿಯಾಗಿದೆ

ಮಜ್ಜಿಗೆ ಮತ್ತು ಜೀರಿಗೆ ಪೈಲ್ಸ್​ಗೆ ಪರಿಹಾರ ನೀಡುತ್ತದೆ ಮೂರರಿಂದ ನಾಲ್ಕು ದಿನಗಳಲ್ಲಿ ಇದರ ಪ್ರಯೋಜನಗಳು ಗೋಚರಿಸುತ್ತವೆ. ನೀವು ಮಜ್ಜಿಗೆ ಬದಲಾಗಿ ನೀರನ್ನು ಕೂಡಾ ಬಳಸಬಹುದು. ಇದಕ್ಕಾಗಿ, ಒಂದು ಗ್ಲಾಸ್ ನೀರಿಗೆ ಅರ್ಧ ಟೀ ಚಮಚ ಜೀರಿಗೆ ಪುಡಿಯನ್ನು ಹಾಕಿಕೊಂಡು ಕುಡಿಯಿರಿ. ಪೈಲ್ಸ್ ಅನ್ನು ಆದಷ್ಟು ಬೇಗ ಗುಣಪಡಿಸಲು ಇದು ಅತ್ಯುತ್ತಮ ಪರಿಹಾರವಾಗಿದೆ. ಎರಡು ಲೀಟರ್ ಮಜ್ಜಿಗೆಯಲ್ಲಿ ಐವತ್ತು ಗ್ರಾಂ ಜೀರಿಗೆ ಮಿಶ್ರಣ ಮಾಡಿ, ಮತ್ತು ನಿಮಗೆ ಬಾಯಾರಿಕೆ ಬಂದಾಗಲೆಲ್ಲಾ ಈ ಮಿಶ್ರಣವನ್ನು ನೀರಿನ ಬದಲು ಕುಡಿಯಿರಿ.

ತೆಂಗಿನೆಣ್ಣೆ ತೆಂಗಿನೆಣ್ಣೆಯನ್ನು ಹಚ್ಚುವುದರಿಂದ ಕ್ರಮೇಣವಾಗಿ ನೋವು ಕಡಿಮೆಯಾಗುತ್ತದೆ. ಗಾಯವೂ ಕೂಡ ಮಾಗುತ್ತದೆ.

ಉತ್ತಮ ನಿದ್ರೆ ಮುಖ್ಯ ನಿಮ್ಮ ಊಟ ಹಾಗೂ ನಿದ್ರೆ ಎರಡೂ ಉತ್ತಮವಾಗಿರಲಿ, ಉತ್ತಮ ಆಹಾರ ಹಾಗೂ ನಿದ್ರೆಯಿಂದ ಪೈಲ್ಸ್ ಗುಣಪಡಿಸಬಹುದು.

ನೀರು ಕುಡಿಯುವುದು ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯಬೇಕು, ಹಾಗೆಯೇ ಜ್ಯೂಸ್ ಸೇರಿದಂತೆ ದ್ರವ ಪದಾರ್ಥಗಳನ್ನು ಆಗಾಗ ಸೇವಿಸುತ್ತಿರಬೇಕು.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ. ಮೂಲವ್ಯಾಧಿ ಹೆಚ್ಚಾದರೆ ವೈದ್ಯರ ಸಲಹೆ ಪಡೆಯುವುದು ಒಳಿತು.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್