ಸಿಹಿಕಾರಕವಾಗಿರುವ ಬೆಲ್ಲವನ್ನು ಸೇವಿಸುವುದು ಆರೋಗ್ಯಕ್ಕೆ ಹಿತವಾಗಿದೆ. ಈ ಬೆಲ್ಲದಲ್ಲಿ ಜೀವಸತ್ವಗಳು, ಖನಿಜಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳು ಅಧಿಕವಾಗಿದೆ. ಈ ಆರೋಗ್ಯ ಸಮಸ್ಯೆಯಿರುವವರು ಬೆಲ್ಲ ಸೇವನೆ ಮಾಡಿದರೆ ಈ ಸಮಸ್ಯೆಯು ಉಲ್ಬಣವಾಗುವ ಸಾಧ್ಯತೆಯೇ ಅಧಿಕ. ಹೀಗಾಗಿ ಅತಿಯಾದ ಬೆಲ್ಲ ಸೇವನೆಯಿಂದ ದೂರವಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
* ತೂಕ ಇಳಿಸಿಕೊಳ್ಳಬೇಕಾದವರು ಬೆಲ್ಲವನ್ನು ಸೇವಿಸಲೇ ಬಾರದು. ಈ ಬೆಲ್ಲದಲ್ಲಿ ಕ್ಯಾಲೋರಿಯು ಅಧಿಕವಾಗಿದ್ದು, ತೂಕ ಹೆಚ್ಚಾಗುತ್ತದೆ.
* ಮಲಬದ್ಧತೆ ಸಮಸ್ಯೆ ಇರುವವರು ಬೆಲ್ಲವನ್ನು ಅಪ್ಪಿ ತಪ್ಪಿಯು ತಿನ್ನಲೇಬಾರದು. ಬೆಲ್ಲವು ಉಷ್ಣತೆಯ ಗುಣವನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಅಡ್ಡಿಯನ್ನು ಉಂಟು ಮಾಡುತ್ತದೆ.
ಇದನ್ನೂ ಓದಿ: ನೀರು ಕುಡಿಯುವುದನ್ನು ಮರೆತು ಬಿಡುತ್ತೀರಾ? ಈ ಟಿಪ್ಸ್ ಪಾಲಿಸಿ
* ಮೂಗಿನಲ್ಲಿ ರಕ್ತಸ್ರಾವವಾಗುವ ಸಮಸ್ಯೆಯಿದ್ದವರು ಬೆಲ್ಲವನ್ನು ತಿನ್ನಬಾರದು ಎನ್ನಲಾಗಿದೆ. ಇದು ರಕ್ತಸ್ರಾವದ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.
* ಸಂಧಿವಾತ ಸಮಸ್ಯೆಯಿರುವವರು ಬೆಲ್ಲವನ್ನು ಸೇವನೆಯಿಂದ ದೂರವಿದ್ದರೆ ಒಳ್ಳೆಯದು. ಉರಿಯೂತವನ್ನು ಹೆಚ್ಚಿಸುವ ಗುಣವನ್ನು ಹೊಂದಿದ್ದು, ಇದು ಸಂಧಿವಾತದ ನೋವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ