ICMR Dietary Guidelines Part-1 : ಭಾರತೀಯರ ಆಹಾರ ಪದ್ಧತಿ ಹೇಗಿರಬೇಕು? ಸರ್ಕಾರದ ಮಾರ್ಗಸೂಚಿಯಲ್ಲಿ ಏನಿದೆ?
ಇತ್ತೀಚೆಗಿನ ದಿನಗಳಲ್ಲಿ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಹಾರ ಪದ್ಧತಿಯಲ್ಲಾದ ಬದಲಾವಣೆ ಯಿಂದ ನಾನಾ ರೀತಿಯ ಕಾಯಿಲೆಗಳು ದೇಹವನ್ನು ಒಕ್ಕರಿಸಿಕೊಂಡು ಬಿಟ್ಟಿದೆ. ಹೀಗಾಗಿ ಸಣ್ಣ ವಯಸ್ಸಿನವರಲ್ಲಿ ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಇದೀಗ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್, ಹೈದರಾಬಾದ್, ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಯಾವ ರೀತಿಯಾಗಿ ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.
ಅತ್ಯುತ್ತಮ ಆರೋಗ್ಯದ ಗುಟ್ಟು ನೀವು ಸೇವಿಸಲು ಆಹಾರದಲ್ಲಿದೆ. ಪೌಷ್ಟಿಕಾಂಶಯುಕ್ತ ಮಿತವಾದ ಆಹಾರ ಸೇವನೆಯಿಂದ ಆರೋಗ್ಯವಂತರಾಗಿರಲು ಸಾಧ್ಯ. ಭಾರತೀಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಂಸ್ಥೆಯು ಆಹಾರ ಪದ್ಥತಿ ಹೇಗಿರಬೇಕು ಎಂಬುದರ ಕುರಿತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ತಜ್ಞರಾದ ವೈದ್ಯೆ ಡಾ| ಹೇಮಲತಾ ಆರ್. ಅವರ ನೇತೃತ್ವದಲ್ಲಿ ಆಹಾರ ಮಾರ್ಗಸೂಚಿ ರಚಿಸಲಾಗಿದ್ದು, ಇದರಲ್ಲಿ 17 ಸಲಹೆಗಳನ್ನು ಒಳಗೊಂಡಿದೆ. ಮೊದಲ ಸಲಹೆಗಳಲ್ಲಿ ಆಹಾರ ಕ್ರಮಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಆಹಾರ ಕ್ರಮದಲ್ಲಿ ಬದಲಾವಣೆ ಹೀಗಿರಲಿ
ಸಮತೋಲಿತ ಆಹಾರವು ಅಗತ್ಯವಾದ ಕ್ಯಾಲೋರಿಗಳು, ಪ್ರೋಟೀನ್ ಗಳು, ಜೀವಸತ್ವಗಳು, ಖನಿಜಗಳು ಮತ್ತು ಸಾಕಷ್ಟು ಪ್ರಮಾಣದ ಫೈಬರ್ ಗಳನ್ನು ಒಳಗೊಂಡಿದೆ. ವೈವಿಧ್ಯಮಯ ಆಹಾರಗಳನ್ನು ಸೇವಿಸುವ ಮೂಲಕ ಸಮತೋಲಿತ ಆಹಾರವನ್ನು ಪಡೆಯಬಹುದು. ಎಲ್ಲಾ ಪೋಷಕಾಂಶಗಳು ಒಂದೇ ಪದಾರ್ಥದಿಂದ ದೊರೆಯುವುದಿಲ್ಲ. ಆರೋಗ್ಯಕರ ಬೆಳವಣಿಗೆಗೆ ಉತ್ತಮವಾದ ಆಹಾರವು ಅಗತ್ಯವಾಗಿಬೇಕು.
ಸಮತೋಲಿತ ಆಹಾರಗಳ ಸೇವನೆಯ ಜೊತೆಗೆ ದೈಹಿಕ ಚಟುವಟಿಕೆಯೂ ಅತ್ಯಗತ್ಯ. ವಿಟಮಿನ್ ಡಿ ಪಡೆಯಲು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಆರೋಗ್ಯಕರವಾದ ಊಟವು ಹೆಚ್ಚಿನ ತರಕಾರಿಗಳು, ಸಾಕಷ್ಟು ಧಾನ್ಯ, ಕಾಳು, ಬೀನ್ಸ್, ಬೀಜಗಳು, ಹಣ್ಣುಗಳು ಹಾಗೂ ಸರಿಯಾದ ವಿಧಾನದಲ್ಲಿ ಮಾಡಿರುವ ಮೊಸರು ಉತ್ತಮ ಆಯ್ಕೆಯಾಗಿದೆ. ಅದಲ್ಲದೇ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವುದು ಅಗತ್ಯ. ದೇಹಕ್ಕೆ ಬೇಕಾಗಿರುವ ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಬೀಜಗಳು, ಎಣ್ಣೆ ಬೀಜಗಳು ಮತ್ತು ಸಮುದ್ರಾಹಾರದಿಂದ ಪಡೆಯಬಹುದು ಎಂದು ಆಹಾರ ಮಾರ್ಗಸೂಚಿಯಲ್ಲಿ ಸ್ಪಷ್ಟ ಪಡಿಸಿದೆ.
ಎಷ್ಟೆಷ್ಟು ಕ್ಯಾಲೋರಿ ಆಹಾರ ಸೇವಿಸಬೇಕು?
ದಿನಕ್ಕೆ 20 ರಿಂದ 25 ಗ್ರಾಂ ಸಕ್ಕರೆಯನ್ನು ಮಾತ್ರ ಸೇವಿಸಬೇಕು. ಸಮತೋಲಿತ ಆಹಾರದಲ್ಲಿ ಧಾನ್ಯಗಳು ಮತ್ತು ರಾಗಿಯ ಸೇವನೆ ಶೇ 45 ಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ಮೀರಬಾರದು. ಅದಲ್ಲದೇ, ದ್ವಿದಳ ಧಾನ್ಯಗಳು, ಬೀನ್ಸ್ ಗಳೊಂದಿಗೆ ಶೇ15 ರಷ್ಟು ಕ್ಯಾಲೊರಿಗಳನ್ನೊಳಗೊಂಡ ಮಾಂಸಹಾರವನ್ನಷ್ಟೇ ಸೇವಿಸುವುದು ಉತ್ತಮ. ಉಳಿದ ಕ್ಯಾಲೋರಿಗಳು, ಬೀಜಗಳು, ತರಕಾರಿ, ಹಣ್ಣು ಮತ್ತು ಹಾಲು ಸೇವನೆಯಿಂದ ದೊರೆಯುತ್ತದೆ. ಕೊಬ್ಬಿನ ಪ್ರಮಾಣ ಶೇ 30 ರಷ್ಟು, ಅದಕ್ಕಿಂತ ಕಡಿಮೆ ಇದ್ದರೂ ಆರೋಗ್ಯಕ್ಕೆ ಹಿತ. ಆಹಾರದಲ್ಲಿ ಪ್ರೋಟೀನ್ ಯುಕ್ತ ಆಹಾರವು 1.6 ಗ್ರಾಂಗಿಂತ ಹೆಚ್ಚಿದ್ದರೆ ಯಾವುದೇ ವಿಶೇಷ ಪ್ರಯೋಜನವಾಗುವುದಿಲ್ಲ.
ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆಯಿರುವವರು ಅಪ್ಪಿ ತಪ್ಪಿಯು ಬೆಲ್ಲ ಸೇವಿಸಲೇಬೇಡಿ
ಯಾವೆಲ್ಲಾ ಆರೋಗ್ಯವು ಒಳ್ಳೆಯದಲ್ಲ?
ಪ್ರೋಟೀನ್ ಪೂರಕ ಆಹಾರಗಳಿಂದ ದೂರವಿರಿ. ಉಪ್ಪು, ಸಕ್ಕರೆ, ಸಂಸ್ಕರಿಸಿದ ಆಹಾರಗಳ ಸೇವನೆಯಿಂದ ಮಿತವಾಗಿರಲಿ. ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಪ್ರೋಟೀನ್ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ. ವಯಸ್ಸಿಗೆ ತಕ್ಕಂತೆ ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಾದರೆ ಬೊಜ್ಜಿನ ಸಮಸ್ಯೆ, ತೂಕ ಹೆಚ್ಚಳ ಹಾಗೂ ಅಪೌಷ್ಟಿಕತೆಯ ಸಮಸ್ಯೆಯು ಕಾಡುವ ಸಂಭವವೇ ಹೆಚ್ಚು. ಅಗತ್ಯ ಪೋಷಕಾಂಶಗಳ ಕೊರತೆಯಿಂದ ಚಯಾಪಚಯ ಕ್ರಿಯೆಗೂ ತೊಂದರೆಯಾಗುತ್ತದೆ. ಸಣ್ಣ ವಯಸ್ಸಿನಲ್ಲಿಯೇ ಈ ಇನ್ಸುಲಿನ್ ಪ್ರತಿರೋಧ ಮತ್ತು ಇದಕ್ಕೆ ಸಂಬಂಧಿತ ಅಸ್ವಸ್ಥತೆಗಳ ಅಪಾಯವನ್ನು ಉಂಟು ಮಾಡುವುದಲ್ಲದೆ, ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ ಎಂದು ತಿಳಿಸಿದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ