ಬೆಲ್ಲವು ಸಿಹಿಕಾರಕವಾಗಿದ್ದು, ಬಾಯಿಗೆ ಒಂದು ತುಂಡು ಬೆಲ್ಲ ಹಾಕಿಕೊಂಡರೆ ಸಾಕು ರಿಲ್ಯಾಕ್ಸ್ ಎನಿಸುತ್ತದೆ. ಎಲ್ಲರಿಗೂ ತಿಳಿದಿರುವಂತೆ ಸಕ್ಕರೆಗೆ ಹೋಲಿಸಿದರೆ ಬೆಲ್ಲವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ಹೆಚ್ಚಿನವರು ಅಡುಗೆ ಹಾಗೂ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬೆಲ್ಲವನ್ನು ಹೇರಳವಾಗಿ ಬಳಸುತ್ತಾರೆ. ಈ ಬೆಲ್ಲದಲ್ಲಿ ವಿಟಮಿನ್ ಬಿ1, ಬಿ6, ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, ಕಾರ್ಬೋಹೈಡ್ರೇಟ್, ಸೋಡಿಯಂ ಪೋಷಕಾಂಶಗಳು ಹೇರಳವಾಗಿದ್ದು, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ..
* ರಕ್ತವನ್ನು ಶುದ್ಧೀಕರಿಸುತ್ತದೆ : ಬೇಸಿಗೆಯಲ್ಲಿ ಬೆಲ್ಲದ ನೀರು ಕುದಿಯುವುದರಿಂದ ರಕ್ತ ಶುದ್ದಿಕರಿಸಿ ಆರೋಗ್ಯ ಸಮಸ್ಯೆಯು ಬಾರದಂತೆ ನೋಡಿಕೊಳ್ಳುತ್ತದೆ.
* ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ : ಬೆಲ್ಲದಲ್ಲಿ ಸತು, ಸೆಲೆನಿಯಮ್ ಅಂಶವು ಹೇರಳವಾಗಿದ್ದು, ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚು ಮಾಡಿ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.
* ಮಲಬದ್ಧತೆ ಸಮಸ್ಯೆಯನ್ನು ದೂರವಾಗಿಸುತ್ತದೆ : ಈ ಸಮಯದಲ್ಲಿ ದೇಹದಲ್ಲಿ ನೀರಿನಂಶವು ಕಡಿಮೆಯಾಗಿ ಮಲಬದ್ಧತೆ ಸಮಸ್ಯೆಯು ಕಾಡುವುದಿದೆ. ಬೆಲ್ಲ ನೀರು ಸೇವನೆಯಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಇದನ್ನೂ ಓದಿ: ಬೆಲೆ ಕಟ್ಟಲಾಗದ ಬೌದ್ಧಿಕ ಆಸ್ತಿಯ ರಕ್ಷಣೆ ನಮ್ಮೆಲ್ಲರ ಹೊಣೆ!
* ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹಾಕಲು ಸಹಕಾರಿ: ಬೆಲ್ಲ ತಿನ್ನುವುದರಿಂದ ದೇಹವನ್ನು ಡಿಟಾಕ್ಸ್ ಮಾಡುವುದಲ್ಲದೇ ಲಿವರ್‌ನ ಆರೋಗ್ಯವನ್ನು ಕಾಪಾಡುತ್ತದೆ. ದೇಹದ ಪ್ರಮುಖ ಅಂಗಗಳಾದ ಅನ್ನನಾಳ, ಶ್ವಾಸಕೋಶ, ಕರುಳನ್ನು ಶುದ್ಧ ಮಾಡಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.
* ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಬೆಲ್ಲದಲ್ಲಿ ಪೊಟಾಷ್ಯಿಯಂ, ಸೋಡಿಯಂ ಅಂಶವು ರಕ್ತದೊತ್ತಡ ನಿಯಂತ್ರಣದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ