Covid Vaccine: ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ: ಜಯದೇವ ಆಸ್ಪತ್ರೆಯ ಅಧ್ಯಯನ

| Updated By: ನಯನಾ ರಾಜೀವ್

Updated on: Jan 12, 2023 | 11:41 AM

ಕೊರೊನಾ ವಿರುದ್ಧ ಹೋರಾಡಲು ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ ಎಂದು ಬೆಂಗಳೂರಿನ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಎಸ್‌ಆರ್) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

Covid Vaccine: ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ: ಜಯದೇವ ಆಸ್ಪತ್ರೆಯ ಅಧ್ಯಯನ
ಕೋವಿಡ್ ಲಸಿಕೆ
Follow us on

ಕೊರೊನಾ ವಿರುದ್ಧ ಹೋರಾಡಲು ಕೋವಿಡ್ ಲಸಿಕೆಯ ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ ಎಂದು ಬೆಂಗಳೂರಿನ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಎಸ್‌ಆರ್) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಚೀನಾ ಸೇರಿದಂತೆ ವಿದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ದೇಶದಲ್ಲಿ ಕೋವಿಡ್ ಕುರಿತು ಆತಂಕ ಹೆಚ್ಚಾಗಿದ್ದು, ಆರೋಗ್ಯ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಎರಡನೇ ಬೂಸ್ಟರ್ ಡೋಸ್‌ನ ಅಗತ್ಯತೆಯ ಬಗ್ಗೆ ಗೊಂದಲಗಳು ವ್ಯಕ್ತವಾಗಿದ್ದವು.

ಬೂಸ್ಟರ್ ಡೋಸ್ ಅನ್ನು ಪಡೆದ ಶೇ. 99.4 ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಪ್ರತಿಕಾಯಗಳು ಗಮನಾರ್ಹ ಬೆಳವಣಿಗೆಗಳನ್ನು ತೋರಿಸಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ಎಸ್‌ಜೆಐಸಿಎಸ್‌ಆರ್ ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಬೂಸ್ಟರ್ ಡೋಸ್ ತೆಗೆದುಕೊಂಡ ಒಂದು ವರ್ಷದ ಬಳಿಕವೂ ದೇಹದಲ್ಲಿ ಪ್ರತಿಕಾಯ ಇದೆ ಎಂಬುದನ್ನು ಪತ್ತೆಹಚ್ಚಲಾಗಿದೆ.

ಮತ್ತಷ್ಟು ಓದಿ: Nasal Covid Vaccine: ಮೂಗಿನ ಮೂಲಕ ಹಾಕುವ ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರದ ಅನುಮೋದನೆ

ದಾದಿಯರು, ತಂತ್ರಜ್ಞರು, ಎಸ್‌ಜೆಐಸಿಎಸ್‌ಆರ್ ವೈದ್ಯರು, ವಾರ್ಡ್ ಸಹಾಯಕರು ಮತ್ತು ಇತರ ಸಿಬ್ಬಂದಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು,
ಬೂಸ್ಟರ್ ಡೋಸ್ ನೀಡಿದ ಒಂದು ವರ್ಷದ ನಂತರವೂ ಪ್ರತಿಕಾಯ ಪ್ರಮಾಣ ಇರುವುದನ್ನು ಗಮನಿಸಲಾಗಿದೆ, ಇದನ್ನು ಒಳ್ಳೆಯ ಬೆಳವಣಿಗೆ ಎಂದು ಕರೆಯಲಾಗುತ್ತದೆ ಎಸ್‌ಜೆಐಸಿಎಸ್‌ಆರ್ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಅಧ್ಯಯನದಲ್ಲಿ ಪಾಲ್ಗೊಂಡ 350 ಆರೋಗ್ಯ ಕಾರ್ಯಕರ್ತರ ರೋಗ ನಿರೋಧಕ ಶಕ್ತಿಯನ್ನು ಪತ್ತೆಹಚ್ಚುವ ಉದ್ದೇಶದಿಂದ ಅಧ್ಯಯನ ನಡೆಸಲಾಗಿತ್ತು. ದೇಹದಲ್ಲಿ ಈಗಾಗಲೇ ಪ್ರತಿಕಾಯವಿರುವ ಕಾರಣ ಬೂಸ್ಟರ್ ಡೋಸ್ ತೆಗೆದುಕೊಳ್ಳದವರು ತಕ್ಷಣವೇ ತೆಗೆದುಕೊಳ್ಳಬೇಕು ಎಂದು ಅಧ್ಯಯನವು ಶಿಫಾರಸ್ಸು ಮಾಡಿದ್ದು, 4ನೇ ಡೋಸ್ ಲಸಿಕೆ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಅಧ್ಯಯನದಲ್ಲಿ 148 ಪುರುಷರು ಮತ್ತು 202 ಮಹಿಳೆಯರು ಪಾಲ್ಗೊಂಡಿದ್ದರು, ಅವರೆಲ್ಲರೂ ಜನವರಿ 2022 ರಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ತೆಗೆದುಕೊಂಡು ಪರೀಕ್ಷೆಗೆ ಮಾದರಿಗಳನ್ನು ನೀಡಿದ್ದರು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ