
ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡ ಅಥವಾ ಕಿಡ್ನಿಯೂ (Kidneys) ಒಂದು. ಇವು ಫಿಲ್ಟರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಅಷ್ಟೇ ಅಲ್ಲ, ದೇಹದಿಂದ ತ್ಯಾಜ್ಯ, ವಿಷವನ್ನು ಹೊರಹಾಕಿ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಆದರೆ ಈ ಮೂತ್ರಪಿಂಡಗಳು ಹಾನಿಗೊಳಗಾದಾಗ, ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ದೇಹದ ಆರೋಗ್ಯಕ್ಕೆ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ಆಲ್ಕೋಹಾಲ್ ಮಾತ್ರ ಕಿಡ್ನಿಗೆ ಹಾನಿ ಮಾಡುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದಕ್ಕಿಂತ ಅಪಾಯಕಾರಿ ಪಾನೀಯಗಳಿವೆ. ಹೌದು, ಇವುಗಳ ಬಗ್ಗೆ ಏಮ್ಸ್ ನ ಮೂತ್ರಶಾಸ್ತ್ರಜ್ಞ ಡಾ. ಪರ್ವೇಜ್ (Parwez urologist) ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಕಿಡ್ನಿಗೆ ಹಾನಿ ಮಾಡುವಂತಹ ಪಾನೀಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಾದರೆ ಆಲ್ಕೋಹಾಲ್ ಗಿಂತ ಅಪಾಯಕಾರಿಯಾದ ಪಾನೀಯ ಯಾವುದು, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ನಾವು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮೂತ್ರಪಿಂಡಗಳಿಗೆ ಹಾನಿಕಾರಕವಾಗಿರುವ ಪಾನೀಯಗಳ ಬಗ್ಗೆ ಡಾ. ಪರ್ವೇಜ್ ಮಾಹಿತಿ ನೀಡಿದ್ದು, ಅವರು ಹೇಳುವ ಪ್ರಕಾರ, ಎನರ್ಜಿ ಡ್ರಿಂಕ್ಸ್ ಮೂತ್ರಪಿಂಡಗಳಿಗೆ ತುಂಬಾ ಅಪಾಯಕಾರಿಯಾಗಿದ್ದು ಅವುಗಳಿಂದ ದೂರವಿದ್ದಷ್ಟು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಈ ಎನರ್ಜಿ ಡ್ರಿಂಕ್ಸ್ ಕುಡಿಯುವ ಅಭ್ಯಾಸ ಜನರಲ್ಲಿ ಬಹಳ ಜನಪ್ರಿಯವಾಗುತ್ತಿದ್ದು, ಇವುಗಳ ಸೇವನೆ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಪ್ರತಿದಿನ ಈ ರೀತಿ ಎನರ್ಜಿ ಡ್ರಿಂಕ್ಸ್ ಸೇವಿಸುವುದರಿಂದ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ. ಅಷ್ಟೇ ಅಲ್ಲ, ಇದು ಕಿಡ್ನಿಗೆ ಹೆಚ್ಚುವರಿ ಒತ್ತಡ ನೀಡಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಟೊಮೇಟೊ ತಿಂದ್ರೆ ಕಿಡ್ನಿ ಸ್ಟೋನ್ ಆಗುತ್ತದೆಯೇ… ಸತ್ಯ ತಿಳಿದರೆ ಶಾಕ್ ಆಗ್ತೀರಾ!
ಡಾ. ಪರ್ವೇಜ್ ಅವರ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯೂ ಸಹ ಶಕ್ತಿ ಪಾನೀಯ ಅಂದರೆ ಎನರ್ಜಿ ಡ್ರಿಂಕ್ಸ್ ಬಗ್ಗೆ ಎಚ್ಚರಿಕೆ ನೀಡಿದೆ. ಅಂತಹ ಪಾನೀಯಗಳನ್ನು ಸೇವಿಸುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಕುಡಿಯಬೇಕು. ಅದರಲ್ಲಿಯೂ ಪ್ರತಿದಿನ ಇಂತಹ ಪಾನೀಯಗಳ ಸೇವನೆ ಮಾಡುವುದರಿಂದ ಅದು ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಬಹುದು. ಅದರಲ್ಲಿಯೂ ಈಗಾಗಲೇ ಮೂತ್ರಪಿಂಡದ ಸಮಸ್ಯೆಗಳಿರುವವರು ಈ ರೀತಿಯ ಪಾನೀಯಗಳ ಸೇವನೆಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ನಿಂಬೆ ನೀರು ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ನಿಮ್ಮ ಆಹಾರದಲ್ಲಿ ಶುಂಠಿ ನೀರು ಮತ್ತು ಗಿಡಮೂಲಿಕೆ ಚಹಾವನ್ನು ಕುಡಿಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ