AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆಗೆ ಒಣ ಮೆಣಸಿನಕಾಯಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ

ಹಸಿ ಮೆಣಸಿಗಿಂತಲೂ ಒಣಗಿದ ಮೆಣಸಿನಕಾಯಿ ಆರೋಗ್ಯಕ್ಕೆ ಒಳ್ಳೆಯದು. ಇದು ಆಹಾರಕ್ಕೆ ತನ್ನದೇ ಆದಂತಹ ಪರಿಮಳ ನೀಡುವ ಮೂಲಕ ರುಚಿಯನ್ನು ದುಪ್ಪಟ್ಟು ಮಾಡುತ್ತದೆ. ಅಷ್ಟು ಮಾತ್ರವಲ್ಲ, ಈ ಮೆಣಸು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದ್ದು ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರ ಸೇವನೆ ಎಷ್ಟು ಪ್ರಯೋಜನಕಾರಿ, ಹಸಿ ಮೆಣಸಿಗಿಂತ ಇದು ಯಾಕೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಡುಗೆಗೆ ಒಣ ಮೆಣಸಿನಕಾಯಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ
ಒಣ ಮೆಣಸಿನ ಆರೋಗ್ಯ ಪ್ರಯೋಜನ
ಪ್ರೀತಿ ಭಟ್​, ಗುಣವಂತೆ
|

Updated on: Dec 11, 2025 | 7:41 PM

Share

ಪ್ರತಿನಿತ್ಯ ಅಡುಗೆಯಲ್ಲಿ ಬಳಕೆಯಾಗುವ ಆಹಾರ ಪದಾರ್ಥಗಳಲ್ಲಿ ಒಣಗಿದ ಮೆಣಸಿನಕಾಯಿಯೂ (Dry Chili) ಒಂದು. ಸಾಂಬಾರು, ಸಾರು, ಉಪ್ಪಿನಕಾಯಿ ಸೇರಿದಂತೆ ವಿವಿಧ ಪದಾರ್ಥಗಳಲ್ಲಿ ಒಣಗಿದ ಮೆಣಸಿನಕಾಯಿಯನ್ನು ಸೇರಿಸಲಾಗುತ್ತದೆ. ಇದರ ಸುವಾಸನೆ ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಸಿ ಮೆಣಸಿಗಿಂತ ಒಣಗಿದ ಮೆಣಸಿನಕಾಯಿಯಲ್ಲಿ ಸುವಾಸನೆ ಹೆಚ್ಚಾಗಿರುತ್ತದೆ. ಅಷ್ಟು ಮಾತ್ರವಲ್ಲ, ಈ ಮೆಣಸು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದ್ದು ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರ ಸೇವನೆ ಎಷ್ಟು ಪ್ರಯೋಜನಕಾರಿ, ಹಸಿ ಮೆಣಸಿಗಿಂತ ಇದು ಯಾಕೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

  • ನಿಯಮಿತವಾಗಿ ಒಣ ಮೆಣಸಿನಕಾಯಿ ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
  • ತೂಕ ಇಳಿಸಿಕೊಳ್ಳಲು ಬಯಸುವವರು ಒಣ ಮೆಣಸಿನಕಾಯಿಯ ಸೇವನೆ ಮಾಡುವುದು ಒಳ್ಳೆಯದು. ಏಕೆಂದರೆ ಇದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
  • ಒಣ ಮೆಣಸಿನ ಮಿತ ಸೇವನೆ ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು, ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ಸಹ ನಿಯಂತ್ರಣದಲ್ಲಿಡುತ್ತದೆ.
  • ಕೆಂಪು ಮೆಣಸಿನಕಾಯಿ ತಿನ್ನುವುದರಿಂದ ಜೀವಿತಾವಧಿ ಹೆಚ್ಚಾಗುತ್ತದೆ. ಹಠಾತ್ ಸಾವಿನ ಸಾಧ್ಯತೆಗಳು ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
  • ಕೆಂಪು ಮೆಣಸಿನಕಾಯಿಯ ನಿಯಮಿತ ಸೇವನೆಯಿಂದ ಸ್ನಾಯು ನೋವು ಕೂಡ ಕಡಿಮೆಯಾಗುತ್ತದೆ. ಅಷ್ಟು ಮಾತ್ರವಲ್ಲ, ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಿದೆ.
  • ಹಸಿ ಮೆಣಸಿನ ಸೇವನೆಗಿಂತ ಒಣ ಮೆಣಸಿನಕಾಯಿಯನ್ನು ಸೇವನೆ ಮಾಡಿದಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ