ಮಿಕ್ಸಿ ಬೇಕಿಲ್ಲ, ಒಣ ಕೆಂಪು ಮೆಣಸಿನಕಾಯಿ ಹೀಗೂ ಪುಡಿ ಮಾಡಬಹುದು, ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಜುಗಾಡ್ ಐಡಿಯಾಗಳಿಗೆ ಸಂಬಂಧಿಸಿದ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇಂತಹ ಕೆಲವೊಂದು ವಿಡಿಯೋಗಳು ನೋಡಲು ತುಂಬಾನೇ ಫನ್ನಿಯಾಗಿರುತ್ತವೆ. ಇದೀಗ ಮಹಿಳೆಯಿಬ್ಬರೂ ಸೇರಿಕೊಂಡು ಒಣ ಕೆಂಪು ಮೆಣಸಿನಕಾಯಿಯನ್ನು ಪುಡಿ ಮಾಡುವ ಸುಲಭ ವಿಧಾನ ಕಂಡುಕೊಂಡಿದ್ದಾರೆ. ಚಪ್ಪಡಿ ಹಾಗೂ ಇಟ್ಟಿಗೆ ಬಳಸಿ ಸುಲಭವಾಗಿ ಮೆಣಸಿನಕಾಯಿ ಪುಡಿ ಮಾಡಿದ್ದು, ಈ ವಿಡಿಯೋವೊಂದು ವೈರಲ್ ಆಗಿದೆ. ಈ ಮಹಿಳೆಯರ ಬುದ್ಧಿವಂತಿಕೆಯನ್ನು ಮೆಚ್ಚಿಕೊಳ್ಳುವ ಮೂಲಕ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.

ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಯಾವ ಕೊರತೆಯೂ ಇಲ್ಲ. ಹಲವಾರು ಜನ ತಮ್ಮ ಕಲ್ಪನೆಗೆ ಹೊಸ ರೆಕ್ಕೆಯನ್ನು ಕಟ್ಟಿ ಸಣ್ಣ ಪುಟ್ಟ ಆವಿಷ್ಕಾರ (Innovation) ಗಳನ್ನು ಮಾಡುತ್ತಿರುತ್ತಾರೆ. ಇಂತಹ ಜುಗಾಡ್ ಐಡಿಯಾ (Jugad idea) ಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣ (Social media) ದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಇಂತಹದ್ದೆ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಮಹಿಳೆಯರಿಬ್ಬರೂ ದೇಸಿ ಐಡಿಯಾವನ್ನು ಉಪಯೋಸಿಕೊಂಡು ಒಣ ಕೆಂಪು ಮೆಣಸಿನಕಾಯಿ ಪುಡಿ (dry red chilli powder) ಮಾಡುವ ವಿಧಾನವನ್ನು ಕಂಡುಕೊಂಡಿದ್ದಾರೆ. ಈ ಮಹಿಳೆಯರಿಬ್ಬರ ಬುದ್ಧಿವಂತಿಕೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಈ ವಿಡಿಯೋವನ್ನು @_hetals_art ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಇಬ್ಬರೂ ಮಹಿಳೆಯರು ನೆಲದ ಮೇಲೆ ಕುಳಿತಿರುವುದನ್ನು ನೋಡಬಹುದು. ಈ ವೇಳೆ ಒಂದು ಬದಿಯಲ್ಲಿ ಮಹಿಳೆಯೊಬ್ಬಳು ತನ್ನ ಮುಂದೆ ಒಂದು ಚಪ್ಪಡಿಯನ್ನು ಇಟ್ಟುಕೊಂಡು ಕುಳಿತಿದ್ದಾಳೆ. ಆ ಚಪ್ಪಡಿಯ ಮೇಲೆ ಒಣಗಿದ ಕೆಂಪು ಮೆಣಸಿನಕಾಯಿಗಳನ್ನು ಹರಡಿದ್ದಾರೆ. ಇನ್ನೊಂದು ಬದಿಯಲ್ಲಿ ಇನ್ನೊಬ್ಬ ಮಹಿಳೆಯೂ ಇಟ್ಟಿಗೆಗೆ ಜೋಡಿಸಲಾದ ದಾರಕ್ಕೆ ಕಟ್ಟಿದ ರಾಡ್ ಅನ್ನು ಹಿಡಿದಿದ್ದಾಳೆ. ಆಕೆಯು ರಾಡನ್ನು ನಿಧಾನವಾಗಿ ಬಿಟ್ಟರೆ, ಇಟ್ಟಿಗೆ ಕೆಳಕ್ಕೆ ಚಲಿಸಿ, ಮೆಣಸಿನಕಾಯಿಯೂ ಪುಡಿಯಾಗುತ್ತದೆ. ಚಪ್ಪಡಿ ಮುಂದೆ ಕುಳಿತ ಮಹಿಳೆಯೂ ಮೆಣಸಿನಕಾಯಿ ಸರಿಯಾಗಿ ಪುಡಿಯಾಗುತ್ತಿದೆಯೇ ಎಂದು ಖಚಿತ ಪಡಿಸಿಕೊಳ್ಳುತ್ತಿದ್ದಾಳೆ.
ಇದನ್ನೂ ಓದಿ: ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿದ ಕೈ; ನೋವಿನಿಂದ ಒದ್ದಾಡಿದ ಮಹಿಳೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ವೀಡಿಯೊ 2.2 ಮಿಲಿಯನ್ ಅಧಿಕ ವೀಕ್ಷಣೆಗಳು ಪಡೆದುಕೊಂಡಿದ್ದು, ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಒಣಗಿದ ಕೆಂಪು ಮೆಣಸಿನಕಾಯಿಗಳನ್ನು ಪುಡಿಮಾಡುವ ಮಹಿಳೆಯರು ವಿಧಾನವನ್ನು ಅಪ್ರಾಯೋಗಿಕ ಎಂದಿದ್ದಾರೆ. ಇನ್ನೊಬ್ಬರು, ‘ಮೆಣಸಿನಕಾಯಿಗಿಂತ ಹೆಚ್ಚಾಗಿ ಕಲ್ಲು ಪುಡಿಯಾಗುತ್ತದೆ. ಮತ್ತೊಬ್ಬರು, ‘ಈ ಚಟ್ನಿಯನ್ನು ಸಿದ್ಧಪಡಿಸಲು ನಿಮಗೆ ಒಂದು ತಿಂಗಳು ಬೇಕಾಗಬಹುದು’ ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ‘ನೀವಿಬ್ಬರೂ ಇದಕ್ಕಾಗಿ ಐನ್‌ಸ್ಟೈನ್ ಮಟ್ಟದ ಮೆದುಳನ್ನು ಬಳಸಿದ್ದೀರಿ’ ಎಂದು ತಮಾಷೆ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ