Viral: ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿದ ಕೈ; ನೋವಿನಿಂದ ಒದ್ದಾಡಿದ ಮಹಿಳೆ
ಬೆಳೆ ಕಟಾವು, ಮೇವು ಕತ್ತರಿಸುವಂತಹದ್ದು, ಇತ್ಯಾದಿ ಕೆಲಸಗಳನ್ನು ಯಂತ್ರಗಳ ಸಹಾಯದಿಂದ ಮಾಡುವಾಗ ಎಚ್ಚರಿಕೆಯನ್ನು ಮಹಿಸುವುದು ಬಹಳ ಅತ್ಯಗತ್ಯ. ಕೆಲವೊಂದು ಬಾರಿ ಅಜಾಗರೂಕತೆಯಿಂದ ಈ ಯಂತ್ರಗಳಿಂದ ಅವಘಡ ಸಂಭವಿಸುತ್ತವೆ. ಇಲ್ಲೊಂದು ಅಂತಹದ್ದೇ ದುರಂತ ಸಂಭವಿಸಿದ್ದು, ಮೇವು ಕಟಾವು ಮಾಡುವಂತಹ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೈ ಯಂತ್ರಕ್ಕೆ ಸಿಲುಕಿದೆ. ಮಹಿಳೆ ನೋವಿನಲ್ಲಿ ನರಳಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ತಂತ್ರಜ್ಞಾನ (Technology), ಹೊಸ ಹೊಸ ಯಂತ್ರೋಪಕರಣಗಳಿಂದ (Machinery) ಕೆಲಸ (work) ಎಷ್ಟು ಸುಲಭವೋ, ಕೆಲವೊಂದು ಬಾರಿ ಅಜಾಗರೂಕತೆಯಿಂದ ಕಾರಣದಿಂದಾಗಿ ಆ ಯಂತ್ರಗಳಿಂದಲೇ ಅವಘಡಗಳು (tragic) ಸಂಭವಿಸುತ್ತವೆ. ಇದೇ ಕಾರಣಕ್ಕೆ ಕೆಲಸ ಮಾಡುವ ವೇಳೆ ಮೈಯೆಲ್ಲಾ ಕಣ್ಣಾಗಿರಬೇಕು ಅನ್ನೋದು. ಹೀಗೆ ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡವರ, ಕೈ ಕಳೆದುಕೊಂಡವರ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಅಂತಹದ್ದೇ ದುರಂತವೊಂದು ಇದೀಗ ನಡೆದಿದ್ದು, ಮೇವು ಕತ್ತರಿಸುವ ವೇಳೆ ಮಹಿಳೆಯೊಬ್ಬರ ಕೈ ಮೇವು ಕಟಾವು ಯಂತ್ರಕ್ಕೆ (fodder cutting machine) ಸಿಲುಕಿದೆ. ನೋವು ತಾಳಲಾರದೆ ಮಹಿಳೆ ನರಳಾಡಿದ್ದು, ಈ ಕುರಿತ ಆಘಾತಕಾರಿ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಯಂತ್ರದಲ್ಲಿ ಮೇವು ಕತ್ತರಿಸುತ್ತಿದ್ದಂತ ಸಂದರ್ಭದಲ್ಲಿ ಆದ ಅಜಾಗರೂಕತೆಯಿಂದ ಮಹಿಳೆಯೊಬ್ಬರ ಕೈ ಆ ಯಂತ್ರಕ್ಕೆ ಸಿಲುಕಿದೆ. ಸೀಮೆ ಹುಲ್ಲು ಕತ್ತರಿಸುವ ವೇಳೆ ಯಂತ್ರಕ್ಕೆ ಸಿಲುಕಿ ಮಹಿಳೆಯ ಕೈ ಕಟ್ ಆಗಿದೆ. ಕೆಲ ವಾರಗಳ ಹಿಂದೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಕುರಿತ ವಿಡಿಯೋವನ್ನು hallikar_king_1990 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮೇವು ಕತ್ತರಿಸುವ ಯಂತ್ರದ ಬಗ್ಗೆ ಜಾಗೃತಿ ಇರಲಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೇವು ಕತ್ತರಿಸುವ ಯಂತ್ರಕ್ಕೆ ಕೈ ಸಿಲುಕಿದ ಪರಿಣಾಮ ಮಹಿಳೆಯೊಬ್ಬರು ನೋವಿನಿಂದ ಕಿರುಚಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ 38 ಲಕ್ಷ ರೂ. ದೋಚಿ ಪರಾರಿಯಾದ ಖದೀಮರು
ಕೆಲ ವಾರಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 3.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತಂತ್ರಜ್ಞಾನ ಮುಂದುವರೆದಷ್ಟು ಅಪಾಯ ಜಾಸ್ತಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಯಂತ್ರ ತುಂಬಾನೇ ಅಪಾಯಕಾರಿ ನಮ್ಮೂರಲ್ಲೂ ಇದರಿಂದ ಒಬ್ಬ ಬಾಲಕನ ಕೈ ಕಟ್ ಆಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸ್ವಲ್ಪ ಲೇಟ್ ಆದ್ರೂ ಪರವಾಗಿಲ್ಲ ಯಂತ್ರಗಳ ಸಹಾಯದಿಂದ ಕೆಲಸ ಮಾಡುವಾಗ ಸ್ವಲ್ಪ ಜಾಗೃತೆ ವಹಿಸಿʼ ಎಂದು ಸಲಹೆ ನೀಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ