ಹೆಲ್ಮೆಟ್ ಧರಿಸದೆ ಪ್ರಯಾಣಿಸಿದ ಲೇಡಿ ಕಾನ್ಸ್‌ಟೇಬಲ್; ಜನರಿಗೊಂದು ನ್ಯಾಯ ನಿಮಗೊಂದು ನ್ಯಾಯಾನಾ
ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಪೊಲೀಸರು ಕೂಡಾ ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಾರೆ. ಅಂತದ್ರಲ್ಲಿ ಇಲ್ಲೊಬ್ರು ಲೇಡಿ ಕಾನ್ಸ್‌ಟೇಬಲ್ ಹೆಲ್ಮೆಟ್ ಧರಿಸದೆ ರಾಜಾರೋಷವಾಗಿ ಪ್ರಯಾಣಿಸಿದ್ದಾರೆ. ಈ ದೃಶ್ಯವನ್ನು ಕಂಡಂತಹ ಯುವಕನೊಬ್ಬ ಜನ ಸಾಮಾನ್ಯರಿಗೊಂದು ನ್ಯಾಯ, ನಿಮಗೊಂದು ನ್ಯಾಯಾನಾ ಎಂದು ಪ್ರಶ್ನಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಅಪಘಾತಗಳು (accident) ಸಂಭವಿಸಿದಾಗ ಹೆಚ್ಚಿನ ಹಾನಿಯನ್ನು ತಪ್ಪಿಸಲು ಹೆಲ್ಮೆಟ್ (helmet) ಸಹಾಯಕವಾಗುವುದಿಂದ ಸುರಕ್ಷತೆಯ ದೃಷ್ಟಿಯಿಂದ ದ್ವಿಚಕ್ರ ವಾಹನ (two wheeker) ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು ಎಂಬ ನಿಯಮವನ್ನು (rules) ಜಾರಿಗೆ ತರಲಾಗಿದೆ. ಮುಂಬದಿ ಸವಾರರು ಮಾತ್ರವಲ್ಲ ದ್ವಿಚಕ್ರ ವಾಹನಗಳಲ್ಲಿ ಹಿಂಬದಿಯಲ್ಲಿ ಕೂರುವಂತಹ ಸವಾರರು ಕೂಡಾ ಕಡ್ಡಾಯವಾಗಿ ಹೆಲ್ಮೆಟ್ (helmet) ಧರಿಸಬೇಕು. ಆದ್ರೆ ಕೆಲವೊಬ್ಬರು ಫೈನ್ ಬಿದ್ರು ಇದಕ್ಕೆಲ್ಲಾ ಕ್ಯಾರೇ ಅನ್ನದೆ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಾರೆ. ಇಂತಹವರಿಗೆ ತಿಳಿ ಹೇಳಬೇಕಾದ ಪೊಲೀಸ್ರೇ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಹೌದು ಲೇಡಿ ಕಾನ್ಸ್‌ಸ್ಟೇಬಲ್ (lady constable) ಒಬ್ರು ಹೆಲ್ಮೆಟ್ ಇಲ್ಲದೆ ಸಂಚರಿಸಿದ್ದು, ಈ ದೃಶ್ಯವನ್ನು ಕಂಡಂತಹ ಯುವಕನೊಬ್ಬ ಜನ ಸಾಮಾನ್ಯರಿಗೊಂದು ನ್ಯಾಯ, ನಿಮಗೊಂದು ನ್ಯಾಯಾನಾ ಎಂದು ಪ್ರಶ್ನಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಂತಹ ಮಹಿಳಾ ಕಾನ್ಸ್‌ಸ್ಟೇಬಲ್ ಒಬ್ರು ಹೆಲ್ಮೆಟ್ ಧರಿಸದೆ ರಾಜಾರೋಷವಾಗಿ ಪ್ರಯಾಣಿಸಿದ್ದಾರೆ. ಈ ದೃಶ್ಯವನ್ನು ಕಂಡಂತಹ ಯುವಕನೊಬ್ಬ ನಮ್ಮಂತಹ ಜನ ಸಾಮಾನ್ಯರಾಗಿದ್ರೆ ಬಿಡ್ತಿದ್ರಾ, ನೀವು ಆರಕ್ಷಕರು ತಾನೇ ನೀವ್ಯಾಕೆ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಈ ವಿಡಿಯೋವನ್ನು mr_alluarya ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನಮ್ಮ ಆರಕ್ಷಕರೇ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಸ್ಕೂಟಿ ಹಿಂಬದಿ ಕುಳಿತ ಲೇಡಿ ಕಾನ್ಸ್‌ಸ್ಟೇಬಲ್ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿರುವ ದೃಶ್ಯವನ್ನು ಕಾಣಬಹುದು. ಆರಕ್ಷಕರೇ ಹೀಗೆ ಮಾಡುವುದು ಎಷ್ಟು ಸರಿಯಿಂದು ಕಾರಿನಲ್ಲಿದ್ದಂತ ಯುವಕನೊಬ್ಬ ಇದನ್ನು ಪ್ರಶ್ನಿಸಿದ್ದಾನೆ.
ಇದನ್ನೂ ಓದಿ: ಮಿಕ್ಸಿ ಬೇಕಿಲ್ಲ, ಒಣ ಕೆಂಪು ಮೆಣಸಿನಕಾಯಿ ಹೀಗೂ ಪುಡಿ ಮಾಡಬಹುದು, ವಿಡಿಯೋ ವೈರಲ್
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೀವು ಡ್ರೈವಿಂಗ್ ಮಾಡುವಾಗ ಮೊಬೈಲ್ ಯೂಸ್ ಮಾಡಿದ್ದು ಕೂಡಾ ತಪ್ಪು ತಾನೇʼ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸಂಬಂಧಪಟ್ಟ ಅಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಳ್ಳಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪೊಲೀಸ್ರಲ್ವೇ ಅವರಿಗೆಲ್ಲಾ ಇದು ನಡೆಯುತ್ತೇʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ