AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲಿಗೆಗೆ ರುಚಿಕರ ಮಾತ್ರವಲ್ಲ, ಹಾಟ್ ಚಾಕೊಲೇಟ್ ಕುಡಿಯುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ!

ಚಳಿಗಾಲದಲ್ಲಿ ಹಾಟ್ ಚಾಕೊಲೇಟ್ ಪಾನೀಯ ಕುಡಿಯುವುದರಿಂದ ಮನಸ್ಸಿಗೆ ಒಂದು ರೀತಿಯ ಖುಷಿ ಸಿಗುತ್ತದೆ. ಆದರೆ ಇದು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಕೂಡ ಒಳ್ಳೆಯದು. ಹೌದು, ಕೋಕೋ ನೈಸರ್ಗಿಕವಾಗಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ಸರಿಯಾಗಿ ತಯಾರಿಸಿದ ಹಾಟ್ ಚಾಕೊಲೇಟ್ ಆರೋಗ್ಯ ಮತ್ತು ಮಾನಸಿಕ ಸ್ಥಿತಿಗೆ ಪ್ರಯೋಜನಕಾರಿಯಾಗಿದೆ. ಹಾಗಾದರೆ ನಿಯಮಿತವಾಗಿ ಹಾಟ್ ಚಾಕೊಲೇಟ್ ಡ್ರಿಂಕ್ ಸೇವನೆಯಿಂದ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ, ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಾಲಿಗೆಗೆ ರುಚಿಕರ ಮಾತ್ರವಲ್ಲ, ಹಾಟ್ ಚಾಕೊಲೇಟ್ ಕುಡಿಯುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ!
Hot Chocolate Health Benefits
ಪ್ರೀತಿ ಭಟ್​, ಗುಣವಂತೆ
|

Updated on: Dec 11, 2025 | 5:39 PM

Share

ಚಳಿಗಾಲದ ತಂಪಾದ ಸಂಜೆಯಲ್ಲಿ ಹಾಟ್ ಚಾಕೊಲೇಟ್ (Hot Chocolate) ಕುಡಿಯುವುದರಿಂದ ಮನಸ್ಸಿಗೆ ಒಂದು ರೀತಿಯ ಖುಷಿ ಸಿಗುತ್ತದೆ. ಅನೇಕರು ಇದನ್ನು ಕೇವಲ ಬಾಯಿ ರುಚಿಗಾಗಿ ಮಾತ್ರ ಕುಡಿಯುತ್ತಾರೆ, ಆದರೆ ಸರಿಯಾಗಿ ತಯಾರಿಸಿದ ಹಾಟ್ ಚಾಕೊಲೇಟ್ ಡ್ರಿಂಕ್ ನಿಮ್ಮ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಹೌದು, ಕೋಕೋ (Cocoa) ನೈಸರ್ಗಿಕವಾಗಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾದರೆ ನಿಯಮಿತವಾಗಿ ಹಾಟ್ ಚಾಕೊಲೇಟ್ ಸೇವನೆಯಿಂದ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ, ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

  • ಸಾಮಾನ್ಯವಾಗಿ ಕೋಕೋದಲ್ಲಿ ಕಂಡುಬರುವ ಫ್ಲೇವನಾಯ್ಡ್‌ಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ಪರೀಕ್ಷೆಗಳು ಅಥವಾ ಕೆಲಸದಲ್ಲಿ ಒತ್ತಡ ಹೆಚ್ಚಿರುವ ಸಮಯದಲ್ಲಿ, ಈ ಪಾನೀಯ ಸೇವನೆ ದೇಹಕ್ಕೆ ಬಹಳ ಪ್ರಯೋಜನಕಾರಿ.
  • ಕೋಕೋ ನೈಸರ್ಗಿಕವಾಗಿ ಸಿರೊಟೋನಿನ್ ಮತ್ತು ಟ್ರಿಪ್ಟೊಫಾನ್‌ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇವು ಮಾನಸಿಕ ಸ್ಥಿತಿಯನ್ನು ಸುಧಾರಿಸುವ ಹಾರ್ಮೋನುಗಳ ಬಿಡುಗಡೆಗೆ ಸಹಾಯ ಮಾಡುತ್ತವೆ. ಅದರಲ್ಲಿಯೂ ಚಳಿಗಾಲದಲ್ಲಿ, ಹಾಟ್ ಚಾಕೊಲೇಟ್ ಆಲಸ್ಯ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
  • ಕೋಕೋದಲ್ಲಿರುವ ಫ್ಲೇವನಾಯ್ಡ್‌ಗಳು ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಕಡಿಮೆ ಸಕ್ಕರೆ ಅಂಶವಿರುವ ಡಾರ್ಕ್ ಚಾಕೊಲೇಟ್‌ ಮತ್ತು ಕೋಕೋವನ್ನು ಮಾತ್ರ ಬಳಸಬೇಕಾಗುತ್ತದೆ.
  • ಕೋಕೋ ಪೌಡರ್ ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು ಇವು ದೇಹದ ಜೀವಕೋಶಗಳನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತವೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
  • ಹಾಟ್ ಚಾಕೊಲೇಟ್ ಕುಡಿಯುವಾಗ, ಹೆಚ್ಚು ಸಕ್ಕರೆ ಅಥವಾ ಕ್ರೀಮ್ ಸೇರಿಸದೆ, ಸಾಧ್ಯವಾದಷ್ಟು ಡಾರ್ಕ್ ಕೋಕೋ ಪೌಡರ್ ಅಥವಾ ಡಾರ್ಕ್ ಚಾಕೊಲೇಟ್ ಬಳಸುವುದು ಉತ್ತಮ. ಈ ರೀತಿಯಾಗಿ ಸೇವಿಸಿದಾಗ ಮಾತ್ರ ಅದರ ಆರೋಗ್ಯ ಪ್ರಯೋಜನಗಳನ್ನು ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ