AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiwi Benefits: ದಿನಕ್ಕೆ ಒಂದು ಕಿವಿ ಹಣ್ಣು ತಿನ್ನಿ ಈ ಆರೋಗ್ಯ ಸಮಸ್ಯೆಗಳನ್ನು ದೂರವಿಡಿ

ಕಿವಿ ಹಣ್ಣು (Kiwi Fruit)ವರ್ಷವಿಡೀ ದೊರೆಯುವ ಒಂದು ಹಣ್ಣಾಗಿದೆ. ಸೂಪರ್‌ಫುಡ್ ವಿಭಾಗದಲ್ಲಿ ಕಿವಿಹಣ್ಣು ಮೊದಲ ಸ್ಥಾನವನ್ನು ಪಡೆದುಕೊಂಡಿದೆ .

Kiwi Benefits: ದಿನಕ್ಕೆ ಒಂದು ಕಿವಿ ಹಣ್ಣು ತಿನ್ನಿ ಈ ಆರೋಗ್ಯ ಸಮಸ್ಯೆಗಳನ್ನು ದೂರವಿಡಿ
ಕಿವಿ ಹಣ್ಣು
TV9 Web
| Edited By: |

Updated on: Jan 05, 2023 | 3:29 PM

Share

ಕಿವಿ ಹಣ್ಣು (Kiwi Fruit)ವರ್ಷವಿಡೀ ದೊರೆಯುವ ಒಂದು ಹಣ್ಣಾಗಿದೆ. ಸೂಪರ್‌ಫುಡ್ ವಿಭಾಗದಲ್ಲಿ ಕಿವಿಹಣ್ಣು ಮೊದಲ ಸ್ಥಾನವನ್ನು ಪಡೆದುಕೊಂಡಿದೆ . ಕಿವಿಯಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪ್ರಮುಖ ಪೋಷಕಾಂಶಗಳಿವೆ.ಈ ಹಣ್ಣು ಹಲವಾರು ಕಾಯಿಲೆಗಳಿಗೆ ಸೂಪರ್ ಔಷಧಿಯಾಗಿ ಕೆಲಸ ಮಾಡುತ್ತದೆ. ಮಧುಮೇಹ, ಹೃದ್ರೋಗ ಮತ್ತು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಕಿವಿ ಹಣ್ಣು ಉತ್ತಮ ಪರಿಹಾರವಾಗಿದೆ. ಕಿವಿ ಸಾಮಾನ್ಯವಾಗಿ ಹೃದ್ರೋಗ ಇರುವವರಿಗೆ ಒಳ್ಳೆಯದು. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.

ಅಧಿಕ ರಕ್ತದೊತ್ತಡ ಇರುವವರು ಬಿಪಿ ನಿಯಂತ್ರಣಕ್ಕೆ ಕಿವಿ ಹಣ್ಣನ್ನು ಸೇವಿಸಬಹುದು. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ, ಇದು ಮಧುಮೇಹ ರೋಗಿಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಇದು ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಿವುಚಿ ತಿನ್ನುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶ ಹೊರಹೋಗುತ್ತದೆ. ಇದರ ಸಕಾರಾತ್ಮಕ ಪರಿಣಾಮವು ನಮ್ಮ ಚರ್ಮದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

ಮತ್ತಷ್ಟು ಓದಿ: Kiwi Side Effects: ಹೆಚ್ಚು ಕಿವಿ ಹಣ್ಣು ತಿನ್ನುತ್ತೀರಾ? ಹಾಗಾದರೆ ಈ ವಿಷಯವನ್ನು ತಿಳಿದುಕೊಳ್ಳಿ!

ಕಿವಿ ಹಣ್ಣುಗಳು ರಕ್ತದೊತ್ತಡ ನಿಯಂತ್ರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಕಿವಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಗುಣವಿದೆ. ಇದು ಮಧುಮೇಹಿಗಳಿಗೆ ಒಳ್ಳೆಯದು. ದಿನಕ್ಕೆ ಎರಡು ಅಥವಾ ಮೂರು ಕಿವಿ ಹಣ್ಣುಗಳನ್ನು ತಿಂದರೆ ಕಣ್ಣಿನ ರೋಗಗಳು ದೂರವಾಗುತ್ತವೆ.

ಕಿವಿ ಹಣ್ಣುಗಳು ವಯಸ್ಸಾದಂತೆ ಅಂಗಾಂಶಗಳ ಅವನತಿಯನ್ನು ಕಡಿಮೆ ಮಾಡುತ್ತದೆ. ಮಲಗುವ ಒಂದು ಗಂಟೆ ಮೊದಲು ಎರಡು ಕಿವಿ ಹಣ್ಣುಗಳನ್ನು ತಿನ್ನುವುದು ನಿಮಗೆ ಆರಾಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಕಿವಿಯ ನಿಯಮಿತ ಸೇವನೆಯು ಚರ್ಮಕ್ಕೆ ಅದ್ಭುತವಾದ ಹೊಳಪನ್ನು ನೀಡುತ್ತದೆ.

ಚರ್ಮದ ಮೇಲಿನ ಸುಕ್ಕುಗಳು ಮಾಯವಾಗುತ್ತವೆ. ಹೊಟ್ಟೆ ಸಮಸ್ಯೆ ಇರುವವರು ಕಿವಿಯನ್ನು ನಿಯಮಿತವಾಗಿ ಸೇವಿಸಬೇಕು. ಇದಲ್ಲದೆ, ಇದು ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಕಿವಿಯಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಸಮೃದ್ಧವಾಗಿದೆ.

ಕಿವಿ ಹಣ್ಣು ಮೂಳೆಗಳನ್ನು ಬಲಪಡಿಸುತ್ತದೆ ಗರ್ಭಿಣಿಯರಿಗೆ ಇದು ಉಪಯುಕ್ತವಾಗಿದೆ. ಇದು ಕೀಲು ನೋವನ್ನು ಸಹ ಕಡಿಮೆ ಮಾಡುತ್ತದೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಒತ್ತಡವನ್ನು ಕಡಿಮೆ ಮಾಡಲು ಇದನ್ನು ತಿನ್ನಬೇಕು. ಕಿವಿ ನಮ್ಮ ರೋಗನಿರೋಧಕ ಶಕ್ತಿಯನ್ನು ತುಂಬಾ ಹೆಚ್ಚಿಸುತ್ತದೆ. ಇದು ಅನೇಕ ರೋಗಗಳು ಮತ್ತು ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ s

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್