Avocado Benefits: ಆವಕಾಡೊ ಹಣ್ಣು ಆರೋಗ್ಯದ ಜತೆಗೆ ಸೌಂದರ್ಯಕ್ಕೂ ಒಳ್ಳೆಯದು

| Updated By: shruti hegde

Updated on: Oct 14, 2021 | 8:40 AM

Health Tips: ದೇಹದ ಆರೋಗ್ಯ ಸುಧಾರಣೆಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನೀಡುವ ಆವಕಾಡೊ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.

Avocado Benefits: ಆವಕಾಡೊ ಹಣ್ಣು ಆರೋಗ್ಯದ ಜತೆಗೆ ಸೌಂದರ್ಯಕ್ಕೂ ಒಳ್ಳೆಯದು
ಸಂಗ್ರಹ ಚಿತ್ರ
Follow us on

ಆವಕಾಡೊ ಅತ್ಯಂತ ಪೌಷ್ಟಿಕ ಹಣ್ಣುಗಳಲ್ಲಿ ಒಂದು. ಇದರಲ್ಲಿ ದೇಹದ ಆರೋಗ್ಯಕ್ಕೆ ಅಗತ್ಯವಾದ ಖನಿಜಗಳು, ಜೀವಸತ್ವಗಳಿರುತ್ತವೆ. ಜತೆಗೆ ಹೆಚ್ಚಿನ ಪ್ರಮಾಣದ ಪ್ರೋಟೀನ್ ಹಾಗೂ ಕೊಬ್ಬನ್ನು ಹೊಂದಿರುತ್ತದೆ. ಇದು ನಿಮ್ಮ ಹೃದಯದ ಆರೋಗ್ಯಕ್ಕೂ ಸಹ ಒಳ್ಳೆಯದು. ಆವಕಡೊ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲ ನಿಮ್ಮ ಚರ್ಮಕ್ಕೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಿರುವಾಗ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನೀಡುವ ಆವಕಾಡೊ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.

ಆವಕಾಡೊ ಉತ್ತಮ ಆರೋಗ್ಯಕ್ಕೆ ಪ್ರಯೋಜನಕಾರಿ
ಈ ಹಣ್ಣನ್ನು ಸೂಪರ್ ಫುಡ್ ಎಂದೂ ಕರೆಯುತ್ತಾರೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಬಿ6, ಎ, ಇ ಮತ್ತು ಸಿ ಅಂಶಗಳಿಂದ ಸಮೃದ್ಧವಾಗಿರುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿರುತ್ತದೆ. ಇದು ಬಾಹ್ಯ ಸೌಂದರ್ಯಕ್ಕೆ ಮಾತ್ರವಲ್ಲದೇ ಆಂತರಿಕ ಆರೋಗ್ಯಕ್ಕೂ ಒಳ್ಳೆಯದು. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ಪೋಷಕಾಂಶಗಳಿಂದ ಸಮೃದ್ಧವಾಗಿದೆ
ದೇಹದ ಚಯಾಪಚಯ ಪ್ರಕ್ರಿಯೆಯಲ್ಲಿ ವಿಟಮಿನ್​ಗಳು ಮುಖ್ಯ. ಇದು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಆವಕಾಡೊದಲ್ಲಿರುವ ಆ್ಯಂಟಿಆ್ಯಕ್ಸಿಡೆಂಟ್​ಗಳು ನಿಮ್ಮ ದೇಹವನ್ನು ಸ್ವತಂತ್ರ ರಾಡಿಕಲ್ಸ್​ನಿಂದ ರಕ್ಷಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಇದರಲ್ಲಿರುತ್ತದೆ. ವಿಟಮಿನ್ ಬಿ ಹೊಂದಿದ್ದು ಇದು ನಿಮ್ಮ ಚರ್ಮದ ಆರೋಗ್ಯವನ್ನು ರಕ್ಷಿಸುತ್ತದೆ.

ಆವಕಾಡೊ ಎಣ್ಣೆ
ಆವಕಾಡೊ ಎಣ್ಣೆಯು ಚರ್ಮ ಮತ್ತು ಕೂದಲು ಆರೋಗ್ಯವನ್ನು ಕಾಪಾಡುತ್ತದೆ. ಆವಕಾಡೊ ಹಣ್ಣುಗಳನ್ನು ತಿನ್ನುವುದು ಒಂದು ರೀತಿಯಾದರೆ ಆವಕಾಡೊದಿಂದ ತಯಾರಿಸಿದ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಳ್ಳುವ ಮೂಲಕ ನಿಮ್ಮ ಚರ್ಮ ಹೊಳಪು ಪಡೆಯುತ್ತದೆ ಜತೆಗೆ ತಲೆ ಕೂದಲು ಬುಡದಿಂದ ಸದೃಢವಾಗಿ ಬೆಳೆಯಲು ಸಹಾಯಕವಾಗಿದೆ.

ಇದನ್ನೂ ಓದಿ:

Health Tips: ಬೆಳಿಗ್ಗೆ ವಾಕಿಂಗ್ ಮಾಡುವಾಗ ಮೊಬೈಲ್ ಬಳಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

Health Tips: ನಿಮ್ಮ ಈ ಕೆಲವು ಅಭ್ಯಾಸಗಳು ಮೂತ್ರಪಿಂಡಕ್ಕೆ ಹಾನಿಕಾರಕ!

Published On - 8:40 am, Thu, 14 October 21