Health Tips: ಮಳೆಗಾಲದ ಸಮಯದಲ್ಲಿ ಆರೋಗ್ಯ ದೃಷ್ಟಿಯಿಂದ ಈ ಕೆಲವು ವಿಷಯಗಳನ್ನು ನೀವು ಗಮನಿಸಲೇಬೇಕು

| Updated By: shruti hegde

Updated on: Jul 18, 2021 | 12:38 PM

ಮಳೆಗಾಲದ ಸಮಯದಲ್ಲಿ ನಮ್ಮ ಕೈಗಳು ಮತ್ತು ಕಾಲಗಳು ಸ್ವಚ್ಛವಾಗಿರುವುದಿಲ್ಲ. ಆದ್ದರಿಂದ ಬ್ಯಾಕ್ಟೀರಿಯಾಗಳು ಮತ್ತು ವೈರಸ್​ನಿಂದಾಗಿ ನಮ್ಮ ಆರೋಗ್ಯವು ಹಾನಿಗೊಳಗಾಗುತ್ತದೆ. ಇವುಗಳು ನಮ್ಮ ಕರುಳಿನ ಆರೋಗ್ಯವನ್ನು ಹದಗೆಡಿಸುತ್ತದೆ. ಇದರಿಂದ ಜೀರ್ಣಕಾರಿ ಸಮಸ್ಯೆ ಉಂಟಾಗುತ್ತದೆ.

Health Tips: ಮಳೆಗಾಲದ ಸಮಯದಲ್ಲಿ ಆರೋಗ್ಯ ದೃಷ್ಟಿಯಿಂದ ಈ ಕೆಲವು ವಿಷಯಗಳನ್ನು ನೀವು ಗಮನಿಸಲೇಬೇಕು
ಸಾಂದರ್ಭಿಕ ಚಿತ್ರ
Follow us on

ಮಳೆಗಾಲದಲ್ಲಿ ಸಾಮಾನ್ಯವಾಗಿ ರೋಗಗಳು ಹರಡುವುದು ಹೆಚ್ಚು. ತಂಪಾದ ವಾತಾವರಣದ ಮೂಲಕ ಶೀತ, ಜ್ವರ ಮತ್ತು ಕೆಮ್ಮು ಕಾಣಿಸಿಕೊಳ್ಳುತ್ತದೆ. ಜತೆಗೆ ಸಾಂಕ್ರಾಮಿಕ ರೋಗಗಳು ಹೆಚ್ಚು ಕಾಡುತ್ತದೆ. ಮಳೆಗಾಲದ ಸಮಯದಲ್ಲಿ ಎಷ್ಟು ಜಾಗರೂಕತೆಯಿಂದ ಆರೋಗ್ಯವನ್ನು ಕಾಪಾಡಿಕೊಂಡರೂ ಸಾಲದು. ಜತೆಜತೆಗೆ ಜೀರ್ಣಕಾರಿ ಸಮಸ್ಯೆ ಆರೊಗ್ಯದಲ್ಲಿ ಕಂಡು ಬರುತ್ತದೆ. ಆದ್ದರಿಂದ ಜೀರ್ಣಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದರ ಜತೆಗೆ ಯಾವ ರೀತಿಯ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಮಳೆಗಾಲದ ಸಮಯದಲ್ಲಿ ನಮ್ಮ ಕೈಗಳು ಮತ್ತು ಕಾಲಗಳು ಸ್ವಚ್ಛವಾಗಿರುವುದಿಲ್ಲ. ಆದ್ದರಿಂದ ಬ್ಯಾಕ್ಟೀರಿಯಾಗಳು ಮತ್ತು ವೈರಸ್​ನಿಂದಾಗಿ ನಮ್ಮ ಆರೋಗ್ಯವು ಹಾನಿಗೊಳಗಾಗುತ್ತದೆ. ಇವುಗಳು ನಮ್ಮ ಕರುಳಿನ ಆರೋಗ್ಯವನ್ನು ಹದಗೆಡಿಸುತ್ತದೆ. ಇದರಿಂದ ಜೀರ್ಣಕಾರಿ ಸಮಸ್ಯೆ ಉಂಟಾಗುತ್ತದೆ.

ಮಳೆಗಾಲದ ಸಮಯದಲ್ಲಿ ಆದಷ್ಟು ರಸ್ತೆ ಬದಿಯಲ್ಲಿನ ಆಹಾರ ಸೇವನೆ ಮಾಡುವುದನ್ನು ತಪ್ಪಿಸಬೇಕು. ರಸ್ತೆಯ ಬದಿಯ ಚಾಟ್ಸ್​ ಫುಡ್​ಗಳು ಹೆಚ್ಚು ರುಚಿಯಾಗಿರಬಹುದು. ಆದರೆ ಅಷ್ಟೇ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಹೆಚ್ಚು ಹೊರಗಡೆಯ ಆಹಾರವನ್ನು ಸೇವಿಸದಿರಿ.

ಅತಿಸಾರ
ಕೆಲವು ವೈರಸ್​ಗಳು, ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯವನ್ನು ಕೆಡಿಸುವುದಲ್ಲದೇ ಜಠರದ ಆರೋಗ್ಯವನ್ನು ಹಾಳು ಮಾಡುತ್ತವೆ. ಇದರಿಂದ ಅತಿಸಾರ, ವಾಕರಿಕೆ, ಹೊಟ್ಟೆ ನೋವು ಮತ್ತು ವಾಂತಿ ಸಮಸ್ಯೆ ಕಂಡು ಬರುತ್ತದೆ. ಮಳೆಗಾಲದ ಸಮಯದಲ್ಲಿನ ಕಲುಷಿತ ನೀರಿನ ಬಳಕೆಯಿಂದ ಜತೆಗೆ ಆಹಾರ ವ್ಯವಸ್ಥೆಯಿಂದ ಇಂತಹ ಸಮಸ್ಯೆಗಳು ಕಂಡು ಬರುತ್ತವೆ. ಹಾಗಿರುವಾಗ ಕಾದು ಆರಿಸಿದ ನೀರನ್ನು ಬಳಸಿ ಮತ್ತು ಬೆಚ್ಚಗಿನ ನೀರನ್ನು ಸೇವಿಸಿ.

ಹೊಟ್ಟೆ ನೋವು
ಮಳೆಗಾಲದ ಸಮಯದಲ್ಲಿ ಹೆಚ್ಚು ಕ್ಯಾಲೋರಿ ಆಹಾರವನ್ನು ಸೇವಿಸಿದಾಗ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಇದರಿಂದ ಆಹಾರ ಜೀರ್ಣವಾಗದೇ ಇದ್ದಾಗ ಹೊಟ್ಟೆ ನೋವು, ತಲೆನೋವಿನ ಸಮಸ್ಯೆ ಕಾಡುತ್ತದೆ. ಅತಿಸಾರ, ವಾಂತಿ ಸಮಸ್ಯೆಯಿಂದ ದೇಹ ದುರ್ಬಲಗೊಳ್ಳುತ್ತದೆ. ಹಾಗಾಗಿ ಪೌಷ್ಠಿಕ ಆಹಾರ ಸೇವನೆಯ ಕುರಿತಾಗಿ ಲಕ್ಷ್ಯವಿರಲಿ.

ಚರ್ಮದ ಅಲರ್ಜಿ
ಒದ್ದೆಯಾದ ಮಣ್ಣು, ಮಣ್ಣಿನ ಬ್ಯಾಕ್ಟೀರಿಯಾಗಳಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ. ಆದ್ದರಿಂದ ಆಹಾರ ಸೇವಿಸುವ ಮೊದಲು ಕೈತೊಳೆಯುವ ಅಭ್ಯಾಸ ಇಟ್ಟುಕೊಳ್ಳಿ. ಮಳೆಗಾಲದ ಸಮಯದಲ್ಲಿ ಹೊರಹೋಗಿ ಬಂದ ನಂತರ ಸ್ವಚ್ಛವಾಗಿ ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿ. ಮುಖ್ಯವಾಗಿ ಗಮನಸುಬೇಕಾದ ಅಂಶವೆಂದರೆ ನಿಮ್ಮ ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಉಗುರಿನ ಅಡಿಯಲ್ಲಿ ಸಿಕ್ಕಿಕೊಂಡ ಬ್ಯಾಕ್ಟೀರಿಯಾಗಳು ನಿಮ್ಮ ಆಹಾರದ ಮೂಲಕ ನಿಮ್ಮ ಆರೊಗ್ಯವನ್ನು ಕೆಡಿಸಲಬಹುದು.

ಇದನ್ನೂ ಓದಿ:

Monsoon Health Tips: ಮಳೆಯಲ್ಲಿ ನೆಂದ ಕೂಡಲೇ ಏನು ಮಾಡಬೇಕು? ಮಳೆಗಾಲದಲ್ಲಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ

Women Health: ಗರ್ಭಾವಸ್ಥೆಯಲ್ಲಿ ಜ್ವರ ಕಾಣಿಸಿಕೊಳ್ಳುವುದು ಗರ್ಭಪಾತಕ್ಕೆ ಕಾರಣವಾಗಬಹುದು! ತಡೆಗಟ್ಟುವ ಕ್ರಮ ತಿಳಿಯಿರಿ