ದೇಹದ ಆರೋಗ್ಯವನ್ನು ಸುಧಾರಿಸಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮುಖ್ಯ. ಜತೆಗೆ ಪ್ರೋಟೀನ್, ನ್ಯೂಟ್ರಿಷಿಯನ್ ಹೊಂದಿರುವ ಆಹಾರ ಪದಾರ್ಥಗಳು ಆರೋಗ್ಯವನ್ನು ಹೆಚ್ಚು ಸುಧಾರಿಸುತ್ತದೆ. ದೇಹದಲ್ಲಿ ಸೇರಿಕೊಂಡ ಕೆಟ್ಟ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯವಾಗುತ್ತದೆ. ವಿಟಮಿನ್ ಬಿ12 ಕೂಡಾ ಆರೋಗ್ಯಕ್ಕೆ ಅತ್ಯವಶ್ಯಕವಾದ ಪೋಷಕಾಂಶಗಳಲ್ಲಿ ಒಂದಾಗಿದೆ. ದೇಹದಲ್ಲಿ ವಿಟಮಿನ್ ಬಿ12 ಉತ್ಪತ್ತಿಯಾಗದಿದ್ದರೂ ಆಹಾರ ಪೂರೈಕೆಯ ಮೂಲಕ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸಬಹುದಾಗಿದೆ.
ಮುಖ್ಯವಾಗಿ ಗಮನಿಸುವ ಅಂಶವೆಂದರೆ ಗರ್ಭಿಣಿಯರಿಗೆ ಆರೋಗ್ಯದಲ್ಲಿ ವಿಟಮಿನ್ ಬಿ12 ಪೋಷಕಾಂಶದ ಕುರಿತಾಗಿ ಹೆಚ್ಚು ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಈ ಪೋಷಕಾಂಶದ ಕೊರತೆಯು ಮಗುವಿನ ಮೇಲೆ ಅಡ್ಡ ಪರಿಣಾಮವನ್ನು ಉಂಟುಮಾಡಹುದು.
ವಿಟಮಿನ್ ಬಿ12 ಕೊರತೆಯ ಅಪಾಯಗಳು ಮತ್ತು ಲಕ್ಷಣಗಳು
ವಿಟಮಿನ್ ಬಿ12 ಕೊರತೆಯು ಆರೋಗ್ಯದಲ್ಲಿ ಏರು-ಪೇರು ಉಂಟು ಮಾಡುತ್ತವೆ. ಅಸ್ವಸ್ಥತೆ, ರಕ್ತಹೀನತೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ವಿಟಮಿನ್ ಬಿ12 ಕೊರತೆಯ ಸಾಮನ್ಯ ಲಕ್ಷಣಗಳು ಹೀಗಿವೆ.
ಸ್ನಾಯುಗಳು ಮರಗಟ್ಟುವಿಕೆ
ದುರ್ಬಲತೆ
ದೃಷ್ಟಿ ಹೀನತೆ
ಉಸಿರಾಟದ ತೊಂದರೆ
ಆಯಾಸ
ಹಸಿವಿನ ಕೊರತೆ
ಜೀರ್ಣಕ್ರಿಯೆ ತೊಂದರೆ
ತೆಳುವಾದ ಚರ್ಮದ ಕೊರತೆ
ದೈನಂದಿನ ಅವಶ್ಯಕತೆಗಳಲ್ಲಿ ವಿಟಮಿನ್ ಬಿ12 ಪೂರೈಕೆ
ಸಾಲ್ಮನ್: ಬಿ ಜೀವಸತ್ವಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಹೆಚ್ಚಾಗಿ ಸಾಲ್ಮನ್ಗಳಲ್ಲಿ ಸಿಗುತ್ತವೆ. ಮಾಂಸಾಹಾರಿಗಳು ಇದನ್ನು ಸೇವಿಸುವುದರ ಮೂಲಕ ಆರೋಗ್ಯದಲ್ಲಿ ವಿಟಮಿನ್ ಬಿ12 ಪೋಷಕಾಂಶದ ಕೊರತೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.
ಮೊಟ್ಟೆಗಳು: ಮೊಟ್ಟೆಗಳು ವಿಟಮಿನ್ ಬಿ12 ಮತ್ತು ಪ್ರೋಟೀನ್ಗಳ ಸಮೃದ್ಧವಾಗಿರುವ ಆಹಾರದ ಮೂಲಗಳಾಗಿವೆ. ಮೊಟ್ಟೆಯಲ್ಲಿರುವ ಹಳದಿಯಲ್ಲಿ ವಿಟಮಿನ್ ಬಿ12 ಪೋಷಕಾಂಶಗಳಿರುವುದರಿಂದ ಇಡೀ ಮೊಟ್ಟೆಯನ್ನು ಸೇವಿಸುವುದರ ಮೂಲಕ ವಿಟಮಿನ್ ಬಿ12 ಕೊರತೆಯನ್ನು ನಿವಾರಿಸಿಕೊಳ್ಳಬಹುದು.
ಟ್ಯೂನ್ ಮೀನು: ಸಾಮಾನ್ಯವಾಗಿ ಟ್ಯೂನ್ ಮೀನುಗಳಲ್ಲಿ ಹೆಚ್ಚು ಪೌಷ್ಟಿಕ ಮತ್ತು ವಿಟಮಿನ್ ಬಿ12 ಕಂಡು ಬರುತ್ತದೆ. ಸುಮಾರು 100 ಗ್ರಾಂ ಬೇಯಿಸಿದ ಟ್ಯೂನ್ ಮೀನುಗಳ ಸುಮಾರು 10.9mcg ವಿಟಮಿನ್ ಬಿ12 ಪೋಷಕಾಂಶವನ್ನು ನೀಡಬಲ್ಲದು. ಇದು ಪ್ರೋಟೀನ್ ಸಮೃದ್ಧವಾಗಿರುವ ಆಹಾರವೂ ಆಗಿದೆ.
ಹಾಲು: ಹಾಲು ಮತ್ತು ಡೈರಿ ಉತ್ಪನ್ನಗಳಾದ ಮೊಸರು, ಬೆಣ್ಣೆಯಲ್ಲಿ ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಜತೆಗೆ ವಿಟಮಿನ್ ಬಿ12 ಸಮೃದ್ಧವಾಗಿರುತ್ತದೆ. ಜತೆಗೆ ಇದರಲ್ಲಿರುವ ಪೌಷ್ಟಿಕ ಗುಣಗಳು ಆರೋಗ್ಯವನ್ನು ಸುಧಾರಿಸುತ್ತವೆ.
ಸೂಚನೆ: ಅತಿಯಾದ ಆಹಾರವು ಆರೋಗ್ಯಕ್ಕೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ. ಅದೇ ರೀತಿ ಕಡಿಮೆ ಆಹಾರ ಸೇವಿಸಿ ಪೌಷ್ಟಿಕಾಂಶದ ಕೊರತೆಯಿಂದ ಆರೋಗ್ಯ ಸಮಸ್ಯೆಗಳು ಬಹುಬೇಗ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಿಯಮಿತವಾಗಿ ಪೌಷ್ಟಿಕಾಂಶಯುಕ್ತ ಹಾಗೂ ಪ್ರೋಟೀನ್ಯುಕ್ತ ಆಹಾರವನ್ನು ಸೇವಿಸುವುದು ಒಳಿತು.
ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ಇರಲಿ. ಜತೆಗೆ ಆರೋಗ್ಯದಲ್ಲಿ ಏನೇ ಏರು-ಪೇರು ಉಂಟಾದರೂ ಸಹ ಹತ್ತಿರದ ವೈದ್ಯರ ಬಳಿ ಸಲಹೆ ಪಡೆಯಿರಿ. ಯಾವುದೇ ಒಂದು ಸಣ್ಣ ಸಮಸ್ಯೆಯ ನಿರ್ಲಕ್ಷ್ಯವೂ ಸಹ ನಿಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನೇ ಬೀರಬಹುದು. ಹಾಗಾಗಿ ಆರೋಗ್ಯದ ಕುರಿತಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ.
ಇದನ್ನೂ ಓದಿ:
Peanut and Jaggery Benefits: ಶೇಂಗಾ ಚಿಕ್ಕಿ ತಿನ್ನಲು ಎಷ್ಟು ರುಚಿಯೋ ಆರೋಗ್ಯಕ್ಕೆ ಅಷ್ಟೇ ಪ್ರಯೋಜನವೂ ಇದೆ!