ಕಮರಾಕ್ಷಿ ಹಣ್ಣಿನ ಪ್ರಯೋಜನ ತಿಳಿಯಿರಿ; ಆರೋಗ್ಯಕ್ಕೆ ಹಿತಕರವಾದ ಗಿಡಗಳನ್ನು ಮನೆಯಲ್ಲಿಯೇ ಬೆಳೆಸಿ

| Updated By: Skanda

Updated on: Jun 07, 2021 | 8:27 AM

ಭಾರತೀಯರು ಈ ರಸಪೂರಿತ ಹಣ್ಣನ್ನು ಸಾಧಾರಣವಾಗಿ ಇಷ್ಟಪಡುತ್ತಾರೆ. ಹಾಗಾಗಿ ಹಣ್ಣಿನ ಜ್ಯೂಸ್​ ಮಾಡಿ ಸೇವಿಸುವುದು ಹೆಚ್ಚು. ಅಧಿಕ ಪೋಷಕಾಂಶವನ್ನು ಹೊಂದಿರುವುದರಿಂದ ಆರೋಗ್ಯಕ್ಕೂ ಕೂಡಾ ಉತ್ತಮವಾಗಿದೆ.

ಕಮರಾಕ್ಷಿ ಹಣ್ಣಿನ ಪ್ರಯೋಜನ ತಿಳಿಯಿರಿ; ಆರೋಗ್ಯಕ್ಕೆ ಹಿತಕರವಾದ ಗಿಡಗಳನ್ನು ಮನೆಯಲ್ಲಿಯೇ ಬೆಳೆಸಿ
ಸ್ಟಾರ್​ಫ್ರುಟ್​
Follow us on

ಕಮರಾಕ್ಷಿ ಅಥವಾ ಸ್ಟಾರ್​ ಫ್ರೂಟ್​ ಎಂದು ಕರೆಯುವ ಹಣ್ಣು ಮೂಲತಃ ಏಷ್ಯಾದ ಸ್ಥಳೀಯ ಉಷ್ಣ ವಲಯದಲ್ಲಿ ಬೆಳೆಯುವ ಹಣ್ಣು. ಅಸಂಖ್ಯಾತ ಉಪಯೋಗಗಳು ಹಾಗೂ ಪ್ರಯೋಜನಗಳಿಂದಾಗಿ ವಿಶ್ವದಾದ್ಯಂತ ಹೆಸರು ಪಡೆದಿದೆ. ಹುಳಿ ಮತ್ತು ಸಿಹಿ ಅಂಶದಿಂದ ಕೂಡಿರುವ ಈ ಹಣ್ಣು ನಕ್ಷತ್ರ ಆಕೃತಿಯಲ್ಲಿರುತ್ತದೆ. ಆದ್ದರಿಂದ ಇದಕ್ಕೆ ಸ್ಟಾರ್​ ಫ್ರೂಟ್​ ಎಂಬ ಹೆಸರು ಬಂದಿದೆ.

ಭಾರತೀಯರು ಈ ರಸಪೂರಿತ ಹಣ್ಣನ್ನು ಸಾಧಾರಣವಾಗಿ ಇಷ್ಟಪಡುತ್ತಾರೆ. ಹಾಗಾಗಿ ಹಣ್ಣಿನ ಜ್ಯೂಸ್​ ಮಾಡಿ ಸೇವಿಸುವುದು ಹೆಚ್ಚು. ಅಧಿಕ ಪೋಷಕಾಂಶವನ್ನು ಹೊಂದಿರುವುದರಿಂದ ಆರೋಗ್ಯಕ್ಕೂ ಕೂಡಾ ಉತ್ತಮವಾಗಿದೆ ಹಾಗೂ ದೀರ್ಘಕಾಲದವರೆಗೆ ಪೋಷಕಾಂಶಗಳನ್ನು ಒದಗಿಸಬಲ್ಲ ಹಣ್ಣಾಗಿದ್ದು ನಿಮ್ಮನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.

ಕಡಿಮೆ ಕ್ಯಾಲೋರಿ ಹಾಗೂ ಫೈಬರ್​ ಅಂಶವನ್ನು ಹೊಂದಿರುವ ಹಣ್ಣು ಇದಾಗಿದೆ. ಜತೆಗೆ ವಿಟಮಿನ್​ ಬಿ, ವಿಟಮಿನ್​ ಸಿ, ಸೋಡಿಯಂ, ಪೊಟ್ಯಾಷಿಯಂ ಹಾಗೂ ಕಬ್ಬಿಣದಂತಹ ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ.

ಆರೋಗ್ಯಕ್ಕೆ ಪ್ರಯೋಜನಗಳು

ಉರಿಯೂತವನ್ನು ತಡೆಯುತ್ತದೆ
ವಿಟಮಿನ್​ ಸಿ ಯುಕ್ತ ಹಣ್ಣಾಗಿರುವುದರಿಂದ ಹೆಚ್ಚು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ದೇಹದಲ್ಲಿ ಸೇರಿಕೊಂಡಿರುವ ವಿಷಕಾರಿ ಅಂಶವನ್ನು ಹೊರಹಾಕಲು ವಿಟಮಿನ್​ ಸಿ ಯುಕ್ತ ಹಣ್ಣುಗಳು ಸಹಾಯ ಮಾಡುತ್ತವೆ. ಮೂಳೆಗಳು, ಸ್ನಾಯುಗಳನ್ನು ಬಲಿಷ್ಠವಾಗಿರಿಸಲು ಸಹಾಯಕವಾಗಿದೆ. ಹಾಗಾಗಿ ಮನೆಯಲ್ಲಿಯೇ ಅತಿ ಸುಲಭದಲ್ಲಿ ಬೆಳೆಯಬಹುದಾದ ಹಣ್ಣಿನ ಮರಗಳು ನಿಮ್ಮ ಸುತ್ತಮುತ್ತಲು ಇದ್ದರೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ನೈಸರ್ಗಿಕವಾಗಿ ಬೆಳೆದ ತಾಜಾ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.

ಹೃದಯಕ್ಕೆ ಒಳ್ಳೆಯದು
ರಕ್ತದೊತ್ತಡವನ್ನು ನಿಯಂತ್ರಿಸುವ ಸೋಡಿಯಂ ಮತ್ತು ಪೊಟ್ಯಾಷಿಯಮ್​ನಂತಹ ಖನಿಜಾಂಶಗಳು ಕಮರಾಕ್ಷಿ ಹಣ್ಣಿನಲ್ಲಿ ತುಂಬಿರುತ್ತವೆ. ಕ್ಯಾಲ್ಸಿಯಮ್​ ಹೊಂದಿರುವುದರಿಂದ ಹೃದಯದ ಆರೋಗ್ಯಕ್ಕೆ ಈ ಹಣ್ಣು ತುಂಬಾ ಪ್ರಯೋಜನಕಾರಿಯಾಗಿದೆ. ದೇಹದಲ್ಲಿ ರಕ್ತ ಚಲನೆ ಮತ್ತು ಸಮತೋಲನವನ್ನು ಕಾಪಾಡಲು ಸಹಾಯಕವಾಗಿದೆ.

ತೂಕವನ್ನು ನಿಯಂತ್ರಿಸುತ್ತದೆ
ಸಕ್ಕರೆ ಅಂಶ ಕಡಿಮೆ ಇರುವುದರಿಂದ ತೂಕ ಹೆಚ್ಚಾಗುವುದರ ಬಗ್ಗೆ ಚಿಂತಿಸದೇ ಕಮರಾಕ್ಷಿ ಹಣ್ಣನ್ನು ಸೇವಿಸಬಹುದು. ಪೈಬರ್​ ಅಂಶವನ್ನು ಹೊಂದಿರುವುದರಿಂದಾಗಿ ಪಚನ ಕ್ರಿಯೆ ಸರಾಗವಾಗಿ ಆಗಲು ಸಹಾಯಕವಾಗುತ್ತದೆ. ಅತಿ ಹೆಚ್ಚಾದ ಕ್ಯಾಲೋರಿ ಇಲ್ಲದಿರುವುದರಿಂದ ತೂಕ ಹೆಚ್ಚಾಗುವುದಿಲ್ಲ.

ಕೂದಲುದುರುವ ಸಮಸ್ಯೆ ಪರಿಹಾರ ಮತ್ತು ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು
ಕಮರಾಕ್ಷಿ ಹಣ್ಣಿನಲ್ಲಿ ವಿಟಮಿನ್​ ಬಿ ಮತ್ತು ಸಿ ಜತೆಗೆ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವುದರಿಂದ ಕೂದಲಿನ ಕೋಶಗಳನ್ನು ಸದೃಢಪಡಿಸುತ್ತದೆ. ಇದರಿಂದ ಹೊಳೆಯುವ ಕೂದಲು ಮತ್ತು ಕಾಂತಿಯುತ ಚರ್ಮವನ್ನು ಪಡೆಬಹುದಾಗಿದೆ.

ಇದನ್ನೂ ಓದಿ:

Health Tips: ಕಿಡ್ನಿ ಸ್ಟೋನ್​ ಸಮಸ್ಯೆಯ ಲಕ್ಷಣಗಳೇನು? ಪರಿಹಾರಗಳಿವೆಯಾ?

Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ