ಕೊರೊನಾ ಸೋಂಕಿತರಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಿಸಲು ಹೊಸ ಮಾರ್ಗಸೂಚಿ ಬಿಡುಗಡೆ
ಈ ಮಾರ್ಗಸೂಚಿಯ ಅನ್ವಯ ಸಕ್ಕರೆ ಕಾಯಿಲೆ ಇರುವ ಕೊರೊನಾ ಸೋಂಕಿತರ ಬಗ್ಗೆ ಹೆಚ್ಚಿನ ಗಮನ ನೀಡಲು ತಿಳಿಸಲಾಗಿದೆ. ಬ್ಲಡ್ ಶುಗರ್ ಪ್ರಮಾಣ ಅಧಿಕವಾದರೆ ಬ್ಲ್ಯಾಕ್ ಫಂಗಸ್ ತಗುಲುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಈ ನಿಯಮಗಳನ್ನು ಹೇಳಲಾಗಿದೆ.
ದೆಹಲಿ: ಕೊರೊನಾ ಸೋಂಕಿತರಿಗೆ ಸಕ್ಕರೆ ಕಾಯಿಲೆ ನಿಯಂತ್ರಿಸಲು ಮತ್ತು ಚಿಕಿತ್ಸೆ ನೀಡಲು ಹೊಸ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದೆ. ಕೊವಿಡ್-19 ಸೋಂಕಿಗೆ ತುತ್ತಾದ ಜನರಲ್ಲಿ ಬ್ಲ್ಯಾಕ್ ಫಂಗಸ್ ಕೂಡ ಕಂಡುಬರುತ್ತಿರದ್ದು, ಸಕ್ಕರೆ ಕಾಯಿಲೆ ನಿಯಂತ್ರಣ ಮೀರಿ ಹೋಗದಂತೆ ತಡೆಯುವ ಉದ್ದೇಶದಿಂದ ಈ ಮಾರ್ಗಸೂಚಿಯನ್ನು ನೀಡಿದೆ.
ಈ ಮಾರ್ಗಸೂಚಿಯ ಅನ್ವಯ ಸಕ್ಕರೆ ಕಾಯಿಲೆ ಇರುವ ಕೊರೊನಾ ಸೋಂಕಿತರ ಬಗ್ಗೆ ಹೆಚ್ಚಿನ ಗಮನ ನೀಡಲು ತಿಳಿಸಲಾಗಿದೆ. ಬ್ಲಡ್ ಶುಗರ್ ಪ್ರಮಾಣ ಅಧಿಕವಾದರೆ ಬ್ಲ್ಯಾಕ್ ಫಂಗಸ್ ತಗುಲುವ ಸಾಧ್ಯತೆ ಹೆಚ್ಚಾಗಿ ಇರುವುದರಿಂದ ಈ ನಿಯಮಗಳನ್ನು ಹೇಳಲಾಗಿದೆ.
ಆಸ್ಪತ್ರೆಗೆ ಅಡ್ಮಿಟ್ ಆಗುವ ಪ್ರತಿಯೊಬ್ಬ ಸೋಂಕಿತರನ್ನು ಹೈ ಬ್ಲಡ್ ಶುಗರ್ ಇರುವ ಬಗ್ಗೆ ಎರಡು ರೀತಿಯ ಬ್ಲಡ್ ಗ್ಲುಕೋಸ್ ವ್ಯಾಲ್ಯೂ ಪರೀಕ್ಷೆ ನಡೆಸಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಊಟಕ್ಕೆ ಮೊದಲು ಒಮ್ಮೆ ಮತ್ತು ಊಟದ ನಂತರ, ಹೀಗೆ ಎರಡು ವಿಧದ ಪರೀಕ್ಷೆ ನಡೆಸುವಂತೆ ಹೇಳಲಾಗಿದೆ.
ಆರಂಭದ ಬ್ಲಡ್ ಗ್ಲುಕೋಸ್ ಮಟ್ಟ ಸಹಜವಾಗಿ ಇದ್ದರೂ ಮತ್ತೆ ಮತ್ತೆ ಬ್ಲಡ್ ಗ್ಲುಕೋಸ್ ಮಟ್ಟವನ್ನು ಪರೀಕ್ಷೆ ಮಾಡುತ್ತಿರಬೇಕು ಎಂದು ಸರ್ಕಾರ ಹೇಳಿದೆ. ಬ್ಲಡ್ ಗ್ಲುಕೋಸ್ ಪರೀಕ್ಷೆಯು ಒಂದು ಬಾರಿ ನಡೆಸಿ ಪರೀಕ್ಷೆ ಆಗಿರಬಾರದು ಎಂದು ಸೂಚಿಸಲಾಗಿದೆ.
ಸಕ್ಕರೆ ಕಾಯಿಲೆ ಇರುವ ಪ್ರತಿಯೊಬ್ಬ ಸೋಂಕಿತ ಕೂಡ ಸಕ್ಕರೆ ಕಾಯಿಲೆ ನಿಯಂತ್ರಿಸಲು ಸಹಕರಿಸುವ ಆಹಾರ ಸ್ವೀಕರಿಸಬೇಕು. ಆಹಾರ ಸೇವನೆಯ ಸಮಯ, ಪ್ರಮಾಣ ಇತ್ಯಾದಿಗಳಲ್ಲಿ ಕೂಡ ನಿಯಂತ್ರಣ ಇರಬೇಕು ಎಂದು ತಿಳಿಸಲಾಗಿದೆ.
ಮೇ 24ರ ಮಾಹಿತಿಯಂತೆ, ಸುಮಾರು 5,424 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದೇಶದ 18 ವಿವಿಧ ರಾಜ್ಯಗಳಲ್ಲಿ ಕಂಡುಬಂದಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ. ಇದರಲ್ಲಿ 4,556 ಪ್ರಕರಣಗಳು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡುಬಂದದ್ದಾಗಿದೆ. ಉಳಿದವು ಕೊವಿಡ್ ಹೊರತಾದ ಆದರೆ, ಶೇ. 55ರಷ್ಟು ಸಕ್ಕರೆ ಕಾಯಿಲೆ ಇರುವವರಲ್ಲಿ ಕಂಡುಬಂದ ಪ್ರಕರಣಗಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸ್ಟಿರಾಯ್ಡ್ ನೀಡುತ್ತಿರುವುದರಿಂದ ಬ್ಲ್ಯಾಕ್ ಫಂಗಸ್ ಹೆಚ್ಚಳ: ಆರೋಗ್ಯ ಸಚಿವ ಡಾ. ಸುಧಾಕರ್
Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?
Published On - 9:48 pm, Sun, 6 June 21