ಉಗುರುಗಳಲ್ಲಿನ ಈ ಬದಲಾವಣೆಗಳು ಕ್ಯಾನ್ಸರ್‌ನ ಸಂಕೇತವಾಗಿರಬಹುದು; ಇದರ ಕಡೆಗಣನೆ ಒಳ್ಳೆಯದಲ್ಲ

| Updated By: preethi shettigar

Updated on: Feb 05, 2022 | 7:47 AM

ಉಗುರುಗಳ ಮೇಲೆ ಬಿಳಿ ಗೆರೆಗಳು ಬಂದರೆ ಅದು ಮೂತ್ರಪಿಂಡ ಅಥವಾ ಯಕೃತ್ತಿನ ಕಾಯಿಲೆಯ ಸಂಕೇತವಾಗಿರಬಹುದು. ಅದರಂತೆ ನಿಮ್ಮ ಉಗುರುಗಳ ಬಣ್ಣದಿಂದ ನಿಮ್ಮ ದೇಹದಲ್ಲಿನ ಕ್ಯಾನ್ಸರ್ ಅನ್ನು ಸಹ ನೀವು ಕಂಡುಹಿಡಿಯಬಹುದು. ಹೌದು, ಕ್ಯಾನ್ಸರ್ ನಿಮ್ಮ ಉಗುರಿನ ಬಣ್ಣವನ್ನು ಬದಲಾಯಿಸುತ್ತದೆ. ಅದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಉಗುರುಗಳಲ್ಲಿನ ಈ ಬದಲಾವಣೆಗಳು ಕ್ಯಾನ್ಸರ್‌ನ ಸಂಕೇತವಾಗಿರಬಹುದು; ಇದರ ಕಡೆಗಣನೆ ಒಳ್ಳೆಯದಲ್ಲ
ಪ್ರಾತಿನಿಧಿಕ ಚಿತ್ರ
Follow us on

ಕ್ಯಾನ್ಸರ್ ರೋಗದ ಬಗ್ಗೆ ಸಮಯಕ್ಕೆ ಸರಿಯಾಗಿ ತಿಳಿದರೆ ಅದರ ಚಿಕಿತ್ಸೆ ಸಾಧ್ಯ. ದೇಹದಲ್ಲಿ ಕ್ಯಾನ್ಸರ್(Cancer) ಹರಡುವ ಮೊದಲು ಅದು ರೋಗಿಗೆ ಕೆಲವು ಸಂಕೇತಗಳನ್ನು(Sign) ನೀಡುತ್ತದೆ. ಅದು ಎಲ್ಲರಿಗೂ ಸಮಯಕ್ಕೆ ಅರ್ಥವಾಗಬೇಕು. ನಮಗೆ ಬೆರಳುಗಳು ಎಷ್ಟು ಮುಖ್ಯವೋ, ಉಗುರುಗಳೂ ಅಷ್ಟೇ ಮುಖ್ಯ. ದೇಹದ ಉಳಿದ ಭಾಗಗಳಂತೆ, ಉಗುರುಗಳು ಆರೋಗ್ಯಕರವಾಗಿರುವುದು ಅತ್ಯಗತ್ಯ. ಉಗುರುಗಳು ಕ್ಯಾನ್ಸರ್​ನೊಂದಿಗೆ ಸಂಪರ್ಕವನ್ನು ಹೊಂದಿವೆ. ನಿಮ್ಮ ಉಗುರುಗಳು(Nails) ತುಂಬಾ ಹಳದಿ ಬಣ್ಣಕ್ಕೆ ತಿರುಗಿದರೆ ಅದು ಶಿಲೀಂಧ್ರಗಳ ಸೋಂಕಾಗಿರಬಹುದು. ನಿಮ್ಮ ಉಗುರುಗಳು ತುಂಬಾ ಒರಟಾಗಿ ಮತ್ತು ದುರ್ಬಲವಾಗಿದ್ದರೆ ರಕ್ತಹೀನತೆಯಂತಹ ಕಾಯಿಲೆ ಇರಬಹುದು. ಉಗುರುಗಳ ಮೇಲೆ ಬಿಳಿ ಗೆರೆಗಳು ಬಂದರೆ ಅದು ಮೂತ್ರಪಿಂಡ ಅಥವಾ ಯಕೃತ್ತಿನ ಕಾಯಿಲೆಯ ಸಂಕೇತವಾಗಿರಬಹುದು. ಅದರಂತೆ ನಿಮ್ಮ ಉಗುರುಗಳ ಬಣ್ಣದಿಂದ ನಿಮ್ಮ ದೇಹದಲ್ಲಿನ ಕ್ಯಾನ್ಸರ್ ಅನ್ನು ಸಹ ನೀವು ಕಂಡುಹಿಡಿಯಬಹುದು. ಹೌದು, ಕ್ಯಾನ್ಸರ್ ನಿಮ್ಮ ಉಗುರಿನ ಬಣ್ಣವನ್ನು ಬದಲಾಯಿಸುತ್ತದೆ. ಅದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಉಗುರು ಬಣ್ಣವು ಕ್ಯಾನ್ಸರ್​ನ ಸಂಕೇತವಾಗಿರಬಹುದೇ?

ನಿಮ್ಮ ಉಗುರುಗಳ ಬಣ್ಣ ಬದಲಾದರೆ ಅದು ಕ್ಯಾನ್ಸರ್ ಅನ್ನು ಸಹ ಅರ್ಥೈಸಬಲ್ಲದು. ವರದಿಗಳ ಪ್ರಕಾರ, ಇದು ಚರ್ಮದ ಕ್ಯಾನ್ಸರ್ ಆಗಿದೆ. ಚರ್ಮದ ಕ್ಯಾನ್ಸರ್ ದೇಹದ ಬಣ್ಣದಲ್ಲಿ ಬದಲಾವಣೆಯಾಗಿ ಕಂಡುಬರುತ್ತದೆ. ಇದರಲ್ಲಿ ಉಗುರುಗಳ ಬಣ್ಣ ಬದಲಾವಣೆಯೂ ಪ್ರಮುಖ ಕಾರಣ. ನಿಮ್ಮ ಉಗುರುಗಳ ಬಣ್ಣದಲ್ಲಿ ಬದಲಾವಣೆ, ಉಗುರುಗಳ ಒಳಗೆ ಆಳವಾದ ಗೆರೆಗಳ ರಚನೆ, ಚರ್ಮವು ಕಪ್ಪಾಗುವುದು, ಇವೆಲ್ಲವೂ ಕ್ಯಾನ್ಸರ್​ನ ರೂಪಗಳು. ಆದರೆ ನೀವು ಈಗಾಗಲೇ ಕ್ಯಾನ್ಸರ್ ರೋಗಿಯಾಗಿದ್ದರೆ, ಕೆಲವೊಮ್ಮೆ ನಿಮ್ಮ ಉಗುರುಗಳ ಬಣ್ಣವು ಔಷಧಿಗಳಿಂದ ಉಂಟಾಗುವ ಅಡ್ಡಪರಿಣಾಮಗಳಿಂದ ಕೂಡ ಬದಲಾಗಬಹುದು ಎಂಬುದನ್ನು ನೆನಪಿಡಿ. ಅಷ್ಟೇ ಅಲ್ಲ, ಉಗುರುಗಳ ಸುತ್ತ ಊದಿಕೊಳ್ಳುವುದು ಕೂಡ ಕ್ಯಾನ್ಸರ್​ನ ಸಂಕೇತವಾಗಿರಬಹುದು.

ಈ ರೋಗಲಕ್ಷಣಗಳನ್ನು ನೋಡಿದ ನಂತರ ನೀವು ಏನು ಮಾಡಬೇಕು?

ಉಗುರುಗಳಿಂದ ರಕ್ತಸ್ರಾವ ಮತ್ತು ಈ ರೋಗಲಕ್ಷಣಗಳು ದೀರ್ಘಕಾಲದವರೆಗೆ ಇದ್ದರೆ, ನಂತರ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇದರೊಂದಿಗೆ ಉಗುರುಗಳಲ್ಲಿ ಕಪ್ಪು ಮತ್ತು ಕಂದು ಬಣ್ಣದ ಗೆರೆಗಳಿದ್ದರೂ ನಿರ್ಲಕ್ಷಿಸಬಾರದು. ನೀವು ಈ ರೋಗಲಕ್ಷಣಗಳನ್ನು ನೋಡಿದರೆ, ಬಯಾಪ್ಸಿ ಮೂಲಕ ನೀವು ಈ ರೀತಿಯ ಕ್ಯಾನ್ಸರ್ ಅನ್ನು ಗುರುತಿಸಬಹುದು. ನೀವು ಕ್ಯಾನ್ಸರ್ ಹೊಂದಿದ್ದರೆ ಚಿಕಿತ್ಸೆಯನ್ನು ತಕ್ಷಣವೇ ಪ್ರಾರಂಭಿಸಬೇಕು. ಇದರೊಂದಿಗೆ ಶಸ್ತ್ರಚಿಕಿತ್ಸೆ, ಕೀಮೋ ಥೆರಪಿ, ಇಮ್ಯುನೊಥೆರಪಿಯಂತಹ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಬೇಕು.

ನಿಮ್ಮ ಉಗುರುಗಳಲ್ಲಿನ ಬದಲಾವಣೆಯನ್ನು ನೀವು ಗಮನಿಸಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ನಿಮ್ಮ ದೇಹವನ್ನು ಪರೀಕ್ಷಿಸಿ. ಏಕೆಂದರೆ ಉಗುರುಗಳ ಬದಲಾವಣೆಯು ಪೌಷ್ಟಿಕಾಂಶದ ಕೊರತೆಯಿಂದ ಕೂಡ ಸಂಭವಿಸಬಹುದು. ಆದರೆ ಅದನ್ನು ನಿರ್ಲಕ್ಷಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ಸಮಯಕ್ಕೆ ಕ್ಯಾನ್ಸರ್ ಪತ್ತೆಯಾದರೆ ಚಿಕಿತ್ಸೆ ಸಾಧ್ಯ.

ಇದನ್ನೂ ಓದಿ:
ಮಹಿಳೆಯರಲ್ಲಿ ಕಾಡುವ ಗರ್ಭಕಂಠದ ಕ್ಯಾನ್ಸರ್​ಗೆ ಕಾರಣಗಳೇನು? ಯಾವ ರೀತಿ ಚಿಕಿತ್ಸೆ ಅಗತ್ಯ? ಇಲ್ಲಿದೆ ಮಾಹಿತಿ

World Cancer Day 2022 Date: ಜೀವಕ್ಕೆ ಕುತ್ತು ತರುವ ಕ್ಯಾನ್ಸರ್​ ಬಗ್ಗೆ ಅರಿವು ಮುಖ್ಯ