ಪರಿಮಳ ಗ್ರಹಿಸದ ಕೊರತೆ 100ಕ್ಕೂ ಹೆಚ್ಚು ರೋಗಗಳ ಲಕ್ಷಣವಾಗಿರಬಹುದು; ಸಂಶೋಧನೆಯಿಂದ ಬಹಿರಂಗ

ಶೀತವಾದಾಗ ಮೂಗು ಕಟ್ಟಿಕೊಳ್ಳುವುದರಿಂದ ಹಿಡಿದು ಕೋವಿಡ್ ವರೆಗೆ, ಜನರು ಯಾವುದರ ವಾಸನೆ ಅಥವಾ ಪರಿಮಳವನ್ನು ಗ್ರಹಿಸಲು ಆಗದಿರುವಂತಹ ರೋಗಲಕ್ಷಣಗಳು ಕಾಣಿಸಿಕೊಂಡಿರುವುದನ್ನು ನೀವು ನೋಡಿರಬಹುದು. ವಾಸನೆಯನ್ನು ಅನುಭವಿಸಲು ಸಾಧ್ಯವಾಗದ ಈ ರೋಗಲಕ್ಷಣಗಳು ಒಂದು ನಿರ್ದಿಷ್ಟ ಸಮಯದವರೆಗೆ ಇರಬಹುದು, ಆದರೆ ಕೆಲವು ರೋಗಗಳಲ್ಲಿ ನೀವು ದೀರ್ಘಕಾಲದ ವರೆಗೆ ಯಾವುದೇ ರೀತಿಯ ವಾಸನೆ ಅಥವಾ ಪರಿಮಳ ಗ್ರಹಿಸಲು ಸಾಧ್ಯವಾಗುವುದಿಲ್ಲ. ಆಗ ಏನು ಮಾಡಬೇಕು? ಇದು ಯಾವ ರೋಗದ ಲಕ್ಷಣಗಳಾಗಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಪರಿಮಳ ಗ್ರಹಿಸದ ಕೊರತೆ 100ಕ್ಕೂ ಹೆಚ್ಚು ರೋಗಗಳ ಲಕ್ಷಣವಾಗಿರಬಹುದು; ಸಂಶೋಧನೆಯಿಂದ ಬಹಿರಂಗ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 13, 2024 | 2:53 PM

ಕೆಲವೊಮ್ಮೆ ನಮ್ಮ ಮೂಗಿಗೆ ಯಾವುದೇ ರೀತಿಯ ಪರಿಮಳ ಬರುವುದಿಲ್ಲ. ಆದರೆ ಈ ರೀತಿ ಆಗುವುದಕ್ಕೆ ಹಲವಾರು ರೀತಿಯ ಕಾರಣಗಳಿರುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಒಂದು ನಿರ್ದಿಷ್ಟ ಕಾಯಿಲೆಯಿಂದಾಗಿ, ಕೆಲವರು ಯಾವುದೇ ರೀತಿಯ ವಾಸನೆ ಅಥವಾ ಪರಿಮಳವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ಶೀತವಾದಾಗ ಮೂಗು ಕಟ್ಟಿಕೊಳ್ಳುವುದರಿಂದ ಹಿಡಿದು ಕೋವಿಡ್ ವರೆಗೆ, ಜನರು ಯಾವುದರ ವಾಸನೆ ಅಥವಾ ಪರಿಮಳವನ್ನು ಗ್ರಹಿಸಲು ಆಗದಿರುವಂತಹ ರೋಗಲಕ್ಷಣಗಳು ಕಾಣಿಸಿಕೊಂಡಿರುವುದನ್ನು ನೀವು ನೋಡಿರಬಹುದು. ವಾಸನೆಯನ್ನು ಅನುಭವಿಸಲು ಸಾಧ್ಯವಾಗದ ಈ ರೋಗಲಕ್ಷಣಗಳು ಒಂದು ನಿರ್ದಿಷ್ಟ ಸಮಯದವರೆಗೆ ಇರಬಹುದು, ಆದರೆ ಕೆಲವು ರೋಗಗಳಲ್ಲಿ ನೀವು ದೀರ್ಘಕಾಲದ ವರೆಗೆ ಯಾವುದೇ ರೀತಿಯ ವಾಸನೆ ಅಥವಾ ಪರಿಮಳ ಗ್ರಹಿಸಲು ಸಾಧ್ಯವಾಗುವುದಿಲ್ಲ. ಆಗ ಏನು ಮಾಡಬೇಕು? ಇದು ಯಾವ ರೋಗದ ಲಕ್ಷಣಗಳಾಗಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಮನುಷ್ಯನಿಗೆ 5 ಇಂದ್ರಿಯಗಳು ಬಹಳ ಮುಖ್ಯ. ಆದರೆ ಕೆಲವು ರೋಗಗಳಿಂದಾಗಿ, ನಮ್ಮ ಇಂದ್ರಿಯಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ, ಇದರಿಂದಾಗಿ ಏನನ್ನಾದರೂ ಗ್ರಹಿಸುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಫ್ರಾಂಟಿಯರ್ಸ್ ಇನ್ ಮಾಲಿಕ್ಯುಲರ್ ನ್ಯೂರೋಸೈನ್ಸ್ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನೆಯ ಪ್ರಕಾರ, ಮನುಷ್ಯರು 139 ವೈದ್ಯಕೀಯ ಪರಿಸ್ಥಿತಿಗಳಲ್ಲಿ ಪರಿಮಳ ಮತ್ತು ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ.

ಸಂಶೋಧನೆ ಹೇಳುವುದೇನು?

ಚಾರ್ಲಿ ಡನ್ಲಪ್ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸಸ್ನ ಸಂಶೋಧಕರು, ಆಕ್ಸ್ಫರ್ಡ್ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ, ಮಾನವ ವಾಸನೆ ಮತ್ತು ಪರಿಮಳ ಪತ್ತೆಹಚ್ಚುವ ಸಾಮರ್ಥ್ಯಕ್ಕೆ ನೇರವಾಗಿ ಸಂಬಂಧಿಸಿದ 139 ವೈದ್ಯಕೀಯ ಪರಿಸ್ಥಿತಿಗಳನ್ನು ಕಂಡುಹಿಡಿದಿದ್ದಾರೆ, ಇಂತಹ ಸಂದರ್ಭಗಳಲ್ಲಿ ರೋಗಿಯು ಯಾವುದೇ ರೀತಿಯ ವಾಸನೆಯನ್ನು ಗಮನಿಸುವುದಿಲ್ಲ. ಈ ರೋಗಲಕ್ಷಣಗಳು ಸಾಮಾನ್ಯವಾಗಿ ಕಂಡರೂ, ಇದು ವಿವಿಧ ನರವೈಜ್ಞಾನಿಕ ಮತ್ತು ದೈಹಿಕ ಕಾಯಿಲೆಗಳ ಆರಂಭಿಕ ಲಕ್ಷಣಗಳಾಗಿರಬಹುದು. ಇದು ವ್ಯಕ್ತಿಯ ಸ್ಮರಣ ಶಕ್ತಿಗೆ ಸಂಬಂಧಿಸಿದೆ ಎಂದು ಕಂಡುಬಂದಿದೆ.

ಇದನ್ನೂ ಓದಿ: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದೆಯೇ, ಇಲ್ಲವೇ? ನಿಮ್ಮ ಪಾದಗಳನ್ನು ನೋಡಿ ಹೇಳಬಹುದು

ಯಾವ ರೋಗಗಳಿಗೆ ಸಂಬಂಧಿಸಿದೆ;

ಕೆಟ್ಟ ವಾಸನೆಯ ನಷ್ಟವು ಅಲ್ಝೈಮರ್ ಮತ್ತು ಪಾರ್ಕಿನ್ಸನ್ ನಂತಹ ಕಾಯಿಲೆಗಳಿಗೆ ಸಂಬಂಧಿಸಿದೆ. ಇದಲ್ಲದೆ, ಇದು ಮಲ್ಟಿಪಲ್ ಸ್ಕ್ಲೆರೋಸಿಸ್, ಬುದ್ಧಿಮಾಂದ್ಯತೆ, ಕರೋನಾವೈರಸ್ (ಕೋವಿಡ್ -19) ಮತ್ತು ಸೈನಸೈಟಿಸ್ನಂತಹ ಪ್ರಮುಖ ಕಾಯಿಲೆಗಳೊಂದಿಗೆ ಸಂಬಂಧ ಹೊಂದಿದೆ ಎಂಬುದು ಕಂಡು ಬಂದಿದೆ. ಈ ಸಂಶೋಧನೆಯ ಪ್ರಕಾರ, ವ್ಯಕ್ತಿಯು ಯಾವುದರಲ್ಲೂ ವಾಸನೆ ಇಲ್ಲದಂತಹ ರೋಗಲಕ್ಷಣಗಳನ್ನು ಅನುಭವಿಸಿದರೆ, ಅವನು ತಕ್ಷಣ ವೈದ್ಯರನ್ನು ಭೇಟಿಯಾಗಬೇಕು ಏಕೆಂದರೆ ಅದು ಈ ರೋಗಗಳ ಆರಂಭಿಕ ಲಕ್ಷಣಗಳಾಗಿರಬಹುದು. ಇದರಿಂದ ರೋಗಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬಹುದು ಮತ್ತು ರೋಗ ಹೆಚ್ಚಾಗದಂತೆ ತಡೆಯಬಹುದು.

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

ಅಲ್ಪ ಅವಧಿಯಲ್ಲಿ ವಾಸನೆ ಅಥವಾ ಪರಿಮಳದ ಗ್ರಹಿಕೆಯನ್ನು ಕಳೆದುಕೊಳ್ಳುವುದು ಅಪಾಯಕಾರಿ ಸಂಕೇತವಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ ವ್ಯಕ್ತಿಯಲ್ಲಿ ಈ ರೋಗಲಕ್ಷಣಗಳು ದೀರ್ಘಕಾಲದ ವರೆಗೆ ಅನುಭವಕ್ಕೆ ಬಂದರೆ ಅವನು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ