ಜಿಗಣೆಯಿಂದ ಕಚ್ಚಿಸಿಕೊಳ್ಳುವುದರಿಂದ ಕ್ಯಾನ್ಸರ್ ಅನ್ನು ಗುಣಪಡಿಸಬಹುದೇ? ಇಲ್ಲಿದೆ ತಜ್ಞರ ಅಭಿಪ್ರಾಯ

ಜಿಗಣೆ ಥೆರಪಿ ವಿವಿಧ ರೀತಿಯ ಕಾಯಿಲೆಗಳಿಗೆ ಅದರಲ್ಲಿಯೂ ಕೀಲು ನೋವು, ಚರ್ಮದ ಕಿರಿಕಿರಿ ಸೇರಿದಂತೆ ಇತ್ಯಾದಿ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಇದು ರಕ್ತದಿಂದ ಕಲ್ಮಶಗಳನ್ನು ತೆಗೆದುಹಾಕಲು, ಉರಿಯೂತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಇದು ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವೇ ಎಂಬ ಅನುಮಾನ ಹಲವರನ್ನು ಕಾಡುವುದು ಸುಳ್ಳಲ್ಲ. ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದು ಅನಿವಾರ್ಯ. ಅದರ ಜೊತೆಗೆ ಜಿಗಣೆ ಚಿಕಿತ್ಸೆ ಹೇಗೆ ನಡೆಯುತ್ತದೆ? ಯಾವ ಕಾಯಿಲೆಗಳಿಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಗಣೆಯಿಂದ ಕಚ್ಚಿಸಿಕೊಳ್ಳುವುದರಿಂದ ಕ್ಯಾನ್ಸರ್ ಅನ್ನು ಗುಣಪಡಿಸಬಹುದೇ? ಇಲ್ಲಿದೆ ತಜ್ಞರ ಅಭಿಪ್ರಾಯ
Leech Therapy's

Updated on: Dec 25, 2025 | 2:45 PM

ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಕಾಯಿಲೆಗಳಿಂದ ಜನ ಬಳಲುತ್ತಿದ್ದಾರೆ. ಇದಕ್ಕೆ ಈಗಿನವರ ಜೀವನಶೈಲಿಯೇ ಕಾರಣವಾಗಿರಬಹುದು. ಕೆಲವು ರೋಗಗಳನ್ನು ಮನೆಮದ್ದಿನಿಂದ ಇನ್ನು ಕೆಲವನ್ನು ವೈದ್ಯರ ಸಲಹೆ ಮತ್ತು ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಆದರೆ ಕೆಲವು ರೋಗಗಳ ಇಲಾಜಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲಿಯೂ ಅವುಗಳನ್ನು ಬುಡದಿಂದ ಕಿತ್ತು ಹಾಕುವುದರ ಜೊತೆಗೆ ದೇಹದ ಮೇಲೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗದಂತೆ ನೋಡಿಕೊಳ್ಳುವುದು ಸಹ ಮುಖ್ಯವಾಗುತ್ತದೆ. ಈ ರೀತಿ ರೋಗಗಳನ್ನು ವಾಸಿ ಮಾಡಲು ಪರಿಣಾಮಕಾರಿ ಉಪಚಾರಗಳಲ್ಲಿ ಜಿಗಣೆ ಚಿಕಿತ್ಸೆಯೂ (Leech Therapy’s) ಒಂದು. ಇದು ಅನೇಕ ರೋಗಗಳಿಂದ ಮುಕ್ತಿ ಪಡೆಯಲು ಸಹಕಾರಿಯಾಗಿದೆ. ಆದರೆ ಇದನ್ನು ಯಾವ ಕಾಯಿಲೆಗಳ ಇಲಾಜಿಗೆ ಬಳಕೆ ಮಾಡಲಾಗುತ್ತದೆ, ಕ್ಯಾನ್ಸರ್ ತಡೆಯಲು ಜಿಗಣೆ ಚಿಕಿತ್ಸೆಯನ್ನು ಬಳಸಬಹುದೇ ಎಂಬ ಅನುಮಾನಗಳಿರುತ್ತದೆ ಅಂತವರು ಈ ಸ್ಟೋರಿ ಮೂಲಕ ಮಾಹಿತಿ ಪಡೆಯಬಹುದು.

ಜಿಗಣೆ ಚಿಕಿತ್ಸೆ ಹೇಗೆ ನಡೆಯುತ್ತದೆ?

ಈ ಜಿಗಣೆ ಥೆರಪಿಯಲ್ಲಿ ಜೀವಂತ ಹುಳವನ್ನು ಬಳಸಲಾಗುತ್ತದೆ. ಚಿಕಿತ್ಸೆಯ ಸಮಯದಲ್ಲಿ, ಇದು ದೇಹಕ್ಕೆ ಅಂಟಿಕೊಳ್ಳುತ್ತದೆ. ಬಳಿಕ ಅವು ರಕ್ತದಿಂದ ಕಲ್ಮಶಗಳನ್ನು ಹೀರಿಕೊಳ್ಳುತ್ತವೆ. ದೇಹದ ಮೇಲೆ 15- 20 ನಿಮಿಷಗಳ ಕಾಲ ಇರಿಸಿ ತೆಗೆಯಲಾಗುತ್ತದೆ. ನರಹುಲಿ, ಮೊಡವೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗೆ ಇದು ಪರಿಣಾಮಕಾರಿಯಾಗಿದೆ.

ಜಿಗಣೆ ಚಿಕಿತ್ಸೆ ಯಾವ ಕಾಯಿಲೆಗಳಿಗೆ ಪ್ರಯೋಜನಕಾರಿ?

  • ಕೀಲು ನೋವು, ಸಂಧಿವಾತ
  • ಚರ್ಮ ರೋಗಗಳು
  • ರಕ್ತ ಪರಿಚಲನೆ ಸಮಸ್ಯೆ
  • ಮೈಗ್ರೇನ್‌ಗೆ ಸಹಾಯ ಮಾಡುತ್ತದೆ
  • ತಲೆನೋವಿಗೆ ಉಪಯುಕ್ತ
  • ಉರಿಯೂತದಿಂದ ಪರಿಹಾರ ಪಡೆಯಲು ಪ್ರಯೋಜನಕಾರಿ

ಇದನ್ನೂ ಓದಿ: ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಂಬೆ ನೀರು ಕುಡಿಯುವುದು ಒಳ್ಳೆಯದೇ… ಇಲ್ಲಿದೆ ತಜ್ಞರ ಅಭಿಪ್ರಾಯ

ಜಿಗಣೆ ಚಿಕಿತ್ಸೆಯು ಕ್ಯಾನ್ಸರ್ ಗುಣಪಡಿಸಬಹುದೇ?

ಜಿಗಣೆ ಥೆರಪಿಯಿಂದ ಕ್ಯಾನ್ಸರ್‌ ಗುಣಪಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಉಬ್ಬುವುದು, ನೋವು, ಗಡ್ಡೆಗಳು ಮತ್ತು ಊತದಂತಹ ರೋಗಲಕ್ಷಣಗಳಿಂದ ಪರಿಹಾರ ಪಡೆಯಲು ಇದರ ಬಳಕೆ ಪರಿಣಾಮಕಾರಿಯಾಗಿದೆ. ಅದರಲ್ಲಿಯೂ ಇಲ್ಲಿಯವರೆಗೆ, ಜಿಗಣೆ ಚಿಕಿತ್ಸೆಯು ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ ಎಂದು ತೋರಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಬೇಕಾದಲ್ಲಿ ನೀವು ಇದನ್ನು ಪ್ರಯತ್ನಿಸಬಹುದು.

ಜಿಗಣೆ ಥೆರಪಿ ಯಾರಿಗೆ ಒಳ್ಳೆಯದಲ್ಲ ?

ರಕ್ತಹೀನತೆ, ರಕ್ತಸ್ರಾವದ ಅಸ್ವಸ್ಥತೆಗಳು ಅಥವಾ ದುರ್ಬಲಗೊಂಡ ರೋಗನಿರೋಧಕ ಶಕ್ತಿ ಇರುವವರಿಗೆ ಇದು ಹಾನಿಕಾರಕವಾಗಬಹುದು. ಜಿಗಣೆ ಚಿಕಿತ್ಸೆಯನ್ನು ನಿರ್ಧರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ