ಸಮತೋಲಿತ ಆಹಾರ ತಿನ್ನುವುದರಿಂದ ದೇಹ ಮತ್ತು ಮನಸ್ಸಿನ ಅರೋಗ್ಯವನ್ನು ಕಾಪಾಡಲು ಸಾಧ್ಯ. ಪ್ರತಿದಿನ ಆಹಾರದಲ್ಲಿ ಹಣ್ಣನ್ನು ಬಳಸುವುದರಿಂದ ಹಣ್ಣುಗಳು ವಿಟಮಿನ್,ಕರ್ಬೋಹೈಡ್ರೇಟ್,ಖನಿಜಾಂಶಗಳು ಇವುಗಳನ್ನು ದೇಹಕ್ಕೆ ಒದಗಿಸುತ್ತವೆ. ಆದರೆ ಮಧುಮೇಹ (Diabetes)ಇರುವವರು ಹಣ್ಣುಗಳನ್ನು ಬಳಸುವಾಗ ಸ್ವಲ್ಪ ಎಚ್ಚರದಿಂದಿರಬೇಕಾಗುತ್ತದೆ.
ಆಹಾರದ ಜೊತೆಗೆ ಹಣ್ಣುಗಳನ್ನು ಬಳಸಿದಲ್ಲಿ ಉತ್ತಮ ಅರೋಗ್ಯ ನಿಮ್ಮದಾಗುವುದರಲ್ಲಿ ಅನುಮಾನವಿಲ್ಲ. ಹಣ್ಣುಗಳು ಆರೋಗ್ಯವನ್ನು ಸರಿಯಾಗಿರಿಸುತ್ತದೆಯಾದರೂ ಸಕ್ಕರೆ ಕಾಯಿಲೆ ಇರುವವರಿಗೆ ಎಲ್ಲಾ ಹಣ್ಣುಗಳು ಅರೋಗ್ಯ ಸುಧಾರಿಸುವುದಿಲ್ಲ. ಆದ್ದರಿಂದ ಮಧುಮೇಹಿಗಳು ಆಯ್ದ ಕೆಲವೇ ಹಣ್ಣುಗಳನ್ನು ಹೆಚ್ಚು ಬಳಸಬಹುದು.
ನಿಂಬೆಯಲ್ಲಿ ವಿಟಮಿನ್ ಸಿ, ಫೈಬರ್, ಪೊಟ್ಯಾಶಿಯಮ್ ಮತ್ತು ಅನೇಕ ಪೋಷಕಾಂಶಗಳಿವೆ. ಈ ಎಲ್ಲಾ ಅಂಶಗಳು ಮಧುಮೇಹ ರೋಗಿಗಳಿಗೆ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಇದರೊಂದಿಗೆ, ನಿಂಬೆ ಸೇವನೆಯು ಮಧುಮೇಹದಲ್ಲಿ ಇತರ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
ಮಧುಮೇಹಿಗಳು ನಿಂಬೆ ಹಣ್ಣನ್ನು ಬಳಸಬಹುದು
ನಿಂಬೆಯಲ್ಲಿ ಫೈಬರ್ ಸಮೃದ್ಧವಾಗಿದೆ – ನಿಂಬೆ 2.4 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ, ಇದು ಮಧುಮೇಹ ರೋಗಿಗಳಿಗೆ ಹೃದ್ರೋಗದ ಅಪಾಯವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ನಿಂಬೆಯಲ್ಲಿ ಹೆಚ್ಚಿನ ಫೈಬರ್ ಅಂಶವು ಗ್ಲೈಸೆಮಿಕ್ ನಿಯಂತ್ರಣವನ್ನು ಸುಧಾರಿಸುತ್ತದೆ. ಇನ್ಸುಲಿನ್ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ರೋಗಿಗಳಿಗೆ ನಿಂಬೆಹಣ್ಣು ಪ್ರಯೋಜನಕಾರಿಯಾಗಿದೆ.
ನಿಂಬೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ
ಕೆಲವು ಸಿಟ್ರಸ್ ಫ್ಲೇವನಾಯ್ಡ್‌ಗಳು ಪಿಷ್ಟದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಿಂಬೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವಾಗಿದೆ. ವಾಸ್ತವವಾಗಿ, ನಿಂಬೆಯ ವಿಟಮಿನ್ ಸಿ ಅಂಶವು ಸಕ್ಕರೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ನಿಂಬೆಯು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರವಾಗಿದ್ದು ಅದು ಸಕ್ಕರೆಯ ಏರಿಕೆಯನ್ನು ತಡೆಯುತ್ತದೆ .
ಮಧುಮೇಹಿಗಳು ಈ ಹಣ್ಣುಗಳನ್ನು ತಿನ್ನಬೇಡಿ
ಅನಾನಸ್ ಹಣ್ಣು ಅಥವಾ ಪೈನಾಪಲ್ ಈ ಹಣ್ಣನ್ನು ಮಧುಮೇಹ ಇರುವವರು ಖಂಡಿತವಾಗಿ ತಿನ್ನಬಾರದು.ಇದರಲ್ಲಿ ಸಕ್ಕರೆ ಅಂಶ ಅಧಿಕ ಪ್ರಮಾಣದಲ್ಲಿರುತ್ತದೆ.ಒಂದು ಸಣ್ಣ ಕಪ್ ಅನಾನಸ್ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ 20 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆ.
ದ್ರಾಕ್ಷಿ : ದ್ರಾಕ್ಷಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಪೌಷ್ಟಿಕಾಂಶ,ನಾರಿನಂಶ,ವಿಟಮಿನ್ ಗಳಿರುತ್ತವೆ,ಜೊತೆಗೆ ದ್ರಾಕ್ಷಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ಸಕ್ಕರೆ ಅಂಶವಿರುತ್ತದೆ.3 ಔನ್ಸ್ ದ್ರಾಕ್ಷಿಯಲ್ಲಿ 15 ಗ್ರಾಂ ನಷ್ಟು ಕಾರ್ಬೋಹೈಡ್ರೇಟ್ ಗಳಿರುವುದರಿಂದ ಮಧುಮೇಹ ಕಾಯಿಲೆ ಇರುವವರು ಇದನ್ನು ಬಳಸುವುದರಿಂದ ಅರೋಗ್ಯ ಹದಗೆಡಬಹುದು.
ಚಿಕ್ಕು ಅಥಾ ಸಪೋಟ ಹಣ್ಣು ಸಪೋಟ ಹಣ್ಣಿನಲ್ಲಿ ಜಿ ಐ(ಗ್ಲೈಸಮಿಕ್ ಇಂಡೆಕ್ಸ್)ಮೌಲ್ಯ 55 ಕ್ಕಿಂತ ಅಧಿಕವಿರುವುದರಿಂದ ಇದು ಮಧುಮೇಹ ಕಾಯಿಲೆ ಇರುವವರ ಆರೋಗ್ಯಕ್ಕೆ ಉತ್ತಮವಲ್ಲ.ಚಿಕ್ಕು ಹಣ್ಣಿನಲ್ಲಿ ಸಕ್ಕರೆ ಮತ್ತು ಕರ್ಬೋಹೈಡ್ರೇಟ್ ಅಂಶ ಅಧಿಕವಿರುತ್ತದೆ.
ಮಾವಿನಹಣ್ಣು: ಹಣ್ಣುಗಳ ರಾಜ ಎನ್ನಲಾದ ಮಾವಿನ ಹಣ್ಣಿನಲ್ಲಿ ಹೆಚ್ಚು ಸಕ್ಕರೆ ಅಂಶ ಇರುವುದರಿಂದ ಮಧುಮೇಹ ಕಾಯಿಲೆ ಇರುವವರು ಇದನ್ನು ತಿನ್ನಬಾರದು.ಅದರಲ್ಲೂ ಪ್ರತಿದಿನ ಇದನ್ನು ತಿಂದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿ ದೀರ್ಘ ಕಾಲದ ಸಮಸ್ಯೆಯಾಗಬಹುದು.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Sun, 5 June 22