Lip Cancer:ಒಡೆದ ತುಟಿ ದೀರ್ಘಕಾಲದವರೆಗೆ ಹಾಗೆಯೇ ಇದ್ದರೆ ಕ್ಯಾನ್ಸರ್ ಇರಬಹುದು
Lip Cancer:ತುಟಿ ಒಡೆದಂತಾಗಿ ಹಲವು ದಿನಗಳ ಕಾಲ ಗಾಯ ಮಾಗದೆ ಇದ್ದರೆ ನಿಮಗೆ ತುಟಿಯ ಕ್ಯಾನ್ಸರ್ ಆಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ. ತುಟಿಯ ಕ್ಯಾನ್ಸರ್ ಬರಲು ಹಲವಾರು ಕಾರಣಗಳು ಇವೆ. ಇದರಲ್ಲಿ ಮುಖ್ಯವಾಗಿ ಬಿಸಿಲು, ಆಲ್ಕೋಹಾಲ್, ತಂಬಾಕು, ಎಚ್ ಪಿವಿ, ವಯಸ್ಸು ಇತ್ಯಾದಿ.
ತುಟಿ ಒಡೆದಂತಾಗಿ ಹಲವು ದಿನಗಳ ಕಾಲ ಗಾಯ ಮಾಗದೆ ಇದ್ದರೆ ನಿಮಗೆ ತುಟಿಯ ಕ್ಯಾನ್ಸರ್ ಆಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ. ತುಟಿಯ ಕ್ಯಾನ್ಸರ್ ಬರಲು ಹಲವಾರು ಕಾರಣಗಳು ಇವೆ. ಇದರಲ್ಲಿ ಮುಖ್ಯವಾಗಿ ಬಿಸಿಲು, ಆಲ್ಕೋಹಾಲ್, ತಂಬಾಕು, ಎಚ್ ಪಿವಿ, ವಯಸ್ಸು ಇತ್ಯಾದಿ.
40ರ ಮೇಲ್ಪಟ್ಟ ಮೇಲ್ಪಟ್ಟವರಲ್ಲಿ ತುಟಿ ಕ್ಯಾನ್ಸರ್ ಮತ್ತು ಬಾಯಿಯ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಹೆಚ್ಚಿನ ತುಟಿಯ ಕ್ಯಾನ್ಸರ್ ಕೆಳಭಾಗದ ತುಟಿಯಲ್ಲಿ ಕಂಡುಬರುವುದು ಮತ್ತು ಇದು ಸ್ಕ್ವಾಮಸ್ ಸೆಲ್ ಕ್ಯಾನ್ಸರ್ ಎಂದು ಕರೆಯುವರು. ಇದು ತುಟಿಗಳ ಪದ ಮತ್ತು ಹೊರಭಾಗದಲ್ಲಿನ ಕೋಶಗಳಲ್ಲಿ ಅಸಾಮಾನ್ಯ ಬೆಳವಣಿಗೆ ಉಂಟು ಮಾಡುವುದು.
ತುಟಿಯ ಕ್ಯಾನ್ಸರ್ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಅದನ್ನು ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಯಿಂದ ಸರಿಪಡಿಸಬಹುದು. ಇದು ಕೊನೆಯ ಹಂತದಲ್ಲಿ ಇದ್ದರೆ ಆಗ ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಎರಡೂ ಬೇಕಾಗಬಹುದು. ಕಿಮೋಥೆರಪಿ ಮತ್ತು ಇತರ ಕೆಲವೊಂದು ಥೆರಪಿಗಳನ್ನು ಬಳಸಬಹುದು.
ತುಟಿಯ ಕ್ಯಾನ್ಸರ್ನ ಲಕ್ಷಣಗಳು ಯಾವುದು? ತುಟಿ ಕ್ಯಾನ್ಸರ್ ನ ಸಾಮಾನ್ಯ ಲಕ್ಷಣವೆಂದರೆ ತುಟಿಯ ಮೇಲೆ ಕುರುಹು ಮೂಡಿ ಒಣಗದೆ ಇರುವುದು. ಗಡ್ಡೆ ಮತ್ತು ಬಣ್ಣ ಕುಂದುವಂತಹ ಸಮಸ್ಯೆಗಳು ಕಾಡಬಹುದು. ತುಟಿಯ ಕ್ಯಾನ್ಸರ್ ಹರಡಿದ್ದರೆ ಅದರ ಲಕ್ಷಣಗಳು ಬಾಯಿ, ಕುತ್ತಿಗೆ ಮತ್ತು ದೇಹದ ಇತರ ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು.
-ಸ್ಪರ್ಶವಿಲ್ಲದೆ ಇರುವುದು, ಝಮ್ಮೆನ್ನಿಸುವಿಕೆ ಮತ್ತು ತುಟಿಯಲ್ಲಿ ನೋವು -ದವಡೆ ಅಥವಾ ಬಾಯಿಯಲ್ಲಿ ನೋವು -ತುಟಿಯ ಭಾಗವು ದಪ್ಪಗಾಗುವುದು. -ಗಂಭೀರ ಪರಿಸ್ಥಿತಿಯ ಲಕ್ಷಣಗಳು -ತುಟಿಯಿಂದ ರಕ್ತ ಸೋರುವಿಕೆ – ಭಾಗದ ಬಣ್ಣ ಕುಂದುವಿಕೆ -ದುಗ್ದರಸ ಗ್ರಂಥಿಗಳು ದೊಡ್ಡದಾಗುವುದು -ತುಟಿಯಲ್ಲಿ ಕುರುಹು ಮೂಡಿ ಗುಣವಾಗದೆ ಇರುವುದು -ತುಟಿಯಲ್ಲಿ ಗಡ್ಡೆ
ತುಟಿ ಕ್ಯಾನ್ಸರ್ಗೆ ಕಾರಣಗಳೇನು? ತುಟಿಯ ಕ್ಯಾನ್ಸರ್ ಗೆ ಸ್ಪಷ್ಟ ಕಾರಣಗಳು ತಿಳಿದಿಲ್ಲ. ಆದರೆ ತಂಬಾಕು ಮತ್ತು ಆಲ್ಕೋಹಾಲ್ ಇದಕ್ಕೆ ಪ್ರಮುಖ ಕಾರಣವಾಗಿದೆ. ಸ್ಕ್ವಾಮಸ್ ಅಂಗಾಂಶಗಳು ತುಟಿಯ ಪದರವಾಗಿರುವುದು ಮತ್ತು ಈ ಅಂಗಾಂಶಗಳಲ್ಲಿ ತುಟಿಯ ಕ್ಯಾನ್ಸರ್ ಬೆಳೆಯುವುದು. ಈ ಭಾಗದಲ್ಲಿ ಇರುವಂತಹ ಇತರ ಕೆಲವು ಅಂಗಾಂಶಗಳಿಂದಲೂ ತುಟಿಯ ಕ್ಯಾನ್ಸರ್ ಬರುವುದು.
ತುಂಬಾ ಅಪರೂಪವಾಗಿ ದೇಹದ ಬೇರೆ ಕಡೆಯ ಅಂಗಾಂಶಗಳು ತುಟಿಗೆ ಪ್ರಯಾಣಿಸುವುದು. ಇಂತಹ ಕ್ಯಾನ್ಸರ್ ನ್ನು ತುಟಿಯ ಕ್ಯಾನ್ಸರ್ ಎಂದು ಪರಿಗಣಿಸಲಾಗದು ಮತ್ತು ಇದನ್ನು ಮೂಲ ಕ್ಯಾನ್ಸರ್ ನ ಸ್ಥಾನಾಂತರವೆಂದು ಹೇಳಲಾಗುತ್ತದೆ.
ತುಟಿಯ ಕ್ಯಾನ್ಸರ್ಗೆ ಆಲ್ಕೋಹಾಲ್ ಮತ್ತು ತಂಬಾಕು ಪ್ರಮುಖ ಕಾರಣವಾಗಿರುವುದು. ಇದೆರಡು ಜತೆಯಾಗಿದ್ದರೆ ಆಗ ಅಪಾಯವು ಮತ್ತಷ್ಟು ಹೆಚ್ಚುವುದು. ಕ್ಯಾನ್ಸರ್ನ ಅಪಾಯವನ್ನು ಕಡಿಮೆ ಕೂಡ ಮಾಡಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ