AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀ ಕೃಷ್ಣ ಪರಮಾತ್ಮನ ಅಚ್ಚುಮೆಚ್ಚಿನ ಬೆಣ್ಣೆಯಲ್ಲಿಯೂ ಇದೆ ಅನೇಕ ಆರೋಗ್ಯಕರ ಆಂಶಗಳು, ಅವು ಯಾವುವು?

ಆರೋಗ್ಯಕರ ಕೊಬ್ಬು: ಬಿಳಿ ಬೆಣ್ಣೆಯಲ್ಲಿ ಸಾಕಷ್ಟು ಆರೋಗ್ಯಕರ ಕೊಬ್ಬಿನ ಅಂಶವಿದ್ದು, ಇದು ದಿನವಿಡೀ ನಿಮಗೆ ಶಕ್ತಿಯನ್ನು ನೀಡುತ್ತದೆ. ಮಕ್ಕಳು ಅಥವಾ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುವ ಜನರು ಬಿಳಿ ಬೆಣ್ಣೆಯನ್ನು ಸೇವಿಸಬಹುದು.

ಶ್ರೀ ಕೃಷ್ಣ ಪರಮಾತ್ಮನ ಅಚ್ಚುಮೆಚ್ಚಿನ ಬೆಣ್ಣೆಯಲ್ಲಿಯೂ ಇದೆ ಅನೇಕ ಆರೋಗ್ಯಕರ ಆಂಶಗಳು, ಅವು ಯಾವುವು?
ಶ್ರೀ ಕೃಷ್ಣ ಪರಮಾತ್ಮನ ಅಚ್ಚುಮೆಚ್ಚಿನ ಬೆಣ್ಣೆಯಲ್ಲಿಯೂ ಇದೆ ಅನೇಕ ಆರೋಗ್ಯಕರ ಆಂಶಗಳು, ಅವು ಯಾವುವು?
TV9 Web
| Updated By: ಸಾಧು ಶ್ರೀನಾಥ್​|

Updated on: Aug 27, 2022 | 6:06 AM

Share

ಹೌದು, ಬೆಣ್ಣೆ ನಿಜಕ್ಕೂ ಒಂದು ಉತ್ತಮ ಆಹಾರ. ಅದರಲ್ಲೂ ಮನೆಯಲ್ಲಿ ತಯಾರಿಸಿದ ಬೆಣ್ಣೆ ಹಲವಾರು ಉತ್ತಮ ಅಂಶಗಳಿಗೆ ಹೆಸರುವಾಸಿ. ಅಂಗಡಿಯಲ್ಲಿ ತರುವ ಬೆಣ್ಣೆಗಿಂತ ಮನೆಯಲ್ಲಿ ತಯಾರಿಸಿದ ಬೆಣ್ಣೆ ಹೆಚ್ಚು ರುಚಿಕರವಾಗಿರುತ್ತದೆ. ಹಾಲು ಮತ್ತು ಕೆನೆಯಿಂದ ಮಾತ್ರ ತಯಾರಿಸುವ ಈ ಬಿಳಿ ಬೆಣ್ಣೆ ಮಾರುಕಟ್ಟೆಯಲ್ಲಿರುವ ಹಳದಿ ಬೆಣ್ಣೆಗಿಂತ ಹೆಚ್ಚು ಆರೋಗ್ಯಕರ ಮತ್ತು ಉತ್ತಮ ಪರ್ಯಾಯವಾಗಿದೆ. ಹಳದಿ ಬೆಣ್ಣೆಯಲ್ಲಿ ಹೆಚ್ಚಿನ ಕೊಬ್ಬಿನ ಅಂಶದ ಕಾರಣ ಬಿಳಿ ಬೆಣ್ಣೆ ಹಲವಾರು ಆರೋಗ್ಯ ಪ್ರಯೋಜನ ನೀಡುತ್ತದೆ.

ಹಾಗಾದರೆ ಈ ಬಿಳಿ ಬೆಣ್ಣೆಯನ್ನು ತಿನ್ನುವುದರಿಂದಾಗುವ ಪ್ರಯೋಜನಗಳೇನು? ಹೇಗೆ ಇದು ಆರೋಗ್ಯಕ್ಕೆ ಉತ್ತಮವಾಗಿದೆ ಎಂಬುದನ್ನು ನಾವಿಲ್ಲಿ ತಿಳಿಯೋಣ. ಬಿಳಿ ಬೆಣ್ಣೆಯ ಆರೋಗ್ಯ ಪ್ರಯೋಜನಗಳು:

  1. 1. ತೂಕ ನಷ್ಟ: ದೇಹದ ತೂಕವನ್ನು ಸಮತೋಲನದಲ್ಲಿ ಇಡಲು ಬಯಸುವವರು ಮತ್ತು ತೂಕ ಇಳಿಸಲು ಬಯಸುವವರು ತಮ್ಮ ಆಹಾರದಲ್ಲಿ ಬೆಣ್ಣೆಯನ್ನು ಬಳಸಬಹುದು. ಬೆಣ್ಣೆಯಲ್ಲಿ ಇರುವ ಲೆಸಿಥಿನ್ ಎಂಬ ಅಂಶವು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಬೆಣ್ಣೆಯು ಸೋಡಿಯಂನಲ್ಲಿಯೂ ಕಡಿಮೆಯಾಗಿದೆ. ಹೆಚ್ಚಿನ ಸೋಡಿಯಂ ಸೇವನೆಯಿಂದ ಉಂಟಾಗುವ ನೀರಿನ ತೂಕವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.
  2. 2. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಬಿಳಿ ಬೆಣ್ಣೆಯು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ಕ್ಯಾಲ್ಸಿಯಂ, ಮತ್ತು ರಂಜಕದಂತಹ ರೋಗನಿರೋಧಕ ವರ್ಧಕ ಅಗತ್ಯಗಳನ್ನು ಉಳಿಸಿಕೊಳ್ಳುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಎ ಮತ್ತು ಡಿ ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  3. 3. ಕಡಿಮೆ ಉಪ್ಪು: ಮನೆಯಲ್ಲಿ ತಯಾರಿಸಿದ ಬೆಣ್ಣೆಗಿಂತ ಅಂಗಡಿಯಲ್ಲಿ ಸಿಗುವ ಬೆಣ್ಣೆ ಉಪ್ಪಾಗಿರುತ್ತದೆ. ಒಬ್ಬರ ದೇಹದಲ್ಲಿ ಈ ಉಪ್ಪಿನಂಶ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಮನೆಯಲ್ಲಿ ತಯಾರಿಸುವ ಬೆಣ್ಣೆ ಉಪ್ಪುರಹಿತವಾಗಿದ್ದು ರಕ್ತದೊತ್ತಡದಂತಹ ಅಪಾಯಗಳನ್ನು ದೂರ ಮಾಡುತ್ತದೆ.
  4. 4. ಹೊಳೆಯುವ ಚರ್ಮಕ್ಕೆ ಸಹಕಾರಿ: ಬಿಳಿ ಬೆಣ್ಣೆಯು ವಿಟಮಿನ್ ಇ ಮತ್ತು ಸೆಲೆನಿಯಮ್‌ನ ಅತ್ಯುತ್ತಮ ಮೂಲವಾಗಿದೆ. ಇದು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದ್ದು ಅದು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುವುದರ ಜೊತೆಗೆ ಆರೋಗ್ಯಕರವಾಗಿರಿಸುತ್ತದೆ. ಬಿಳಿ ಬೆಣ್ಣೆಯನ್ನು ಸೇವಿಸುವುದರಿಂದ ಚರ್ಮದ ಬಿರುಕುಗಳು ನಿವಾರಣೆಯಾಗುತ್ತದೆ. ಆದಾಗ್ಯೂ, ಹೆಚ್ಚುವರಿ ಸೇವನೆ ದೇಹಕ್ಕೆ ಹಾನಿಯಾಗಬಹುದು, ಹೀಗಾಗಿ ನಿಯಮಿತವಾಗಿ ಸೇವಿಸುವುದರ ಬಗ್ಗೆ ಗಮನ ಹರಿಸುವುದು ಉತ್ತಮ. ನೀವು ವಾರಕ್ಕೆ ಒಂದು ಅಥವಾ ಎರಡು ಬಾರಿ ನಿಮ್ಮ ಮುಖದ ಮೇಲೆ ಬಿಳಿ ಬೆಣ್ಣೆಯ ಫೇಸ್ ಮಾಸ್ಕ್ ಸಹ ಅನ್ವಯಿಸಬಹುದು.
  5. 5. ಕೀಲು ನೋವಿನ ಶಮನಕ್ಕೆ ಸಹಕಾರಿ: ಕೀಲು ನೋವು ಮತ್ತು ಸಂಧಿವಾತದಿಂದ ಬಳಲುತ್ತಿರುವವರು ತಮ್ಮ ದೈನಂದಿನ ಆಹಾರದಲ್ಲಿ ಒಂದು ಚಮಚ ಬಿಳಿ ಬೆಣ್ಣೆಯನ್ನು ಸೇರಿಸಿಕೊಳ್ಳುವುದರಿಂದ ಈ ನೋವು ಶಮನವಾಗುತ್ತದೆ. ಏಕೆಂದರೆ ಬೆಣ್ಣೆ ಕೊಬ್ಬನ್ನು ಹೀರಿಕೊಳ್ಳುವ ಮತ್ತು ಕೀಲುಗಳನ್ನು ನಯಗೊಳಿಸುವ ಆಣ್ವಿಕ ರಚನೆಯನ್ನು ಹೊಂದಿರುತ್ತದೆ.
  6. 6. ಆರೋಗ್ಯಕರ ಕೊಬ್ಬು: ಬಿಳಿ ಬೆಣ್ಣೆಯಲ್ಲಿ ಸಾಕಷ್ಟು ಆರೋಗ್ಯಕರ ಕೊಬ್ಬಿನ ಅಂಶವಿದ್ದು, ಇದು ದಿನವಿಡೀ ನಿಮಗೆ ಶಕ್ತಿಯನ್ನು ನೀಡುತ್ತದೆ. ಮಕ್ಕಳು ಅಥವಾ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುವ ಜನರು ಬಿಳಿ ಬೆಣ್ಣೆಯನ್ನು ಸೇವಿಸಬಹುದು. (ಮಾಹಿತಿ: ವಾಟ್ಸಪ್ ಸಂಗ್ರಹ)

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್