ಮಶ್ರೂಮ್ ಅಥವಾ ಅಣಬೆ ಎಂದು ಕರೆಯಲ್ಪಡುವ ಶಿಲೀಂಧ್ರಗಳಲ್ಲಿ ಸಾಕಷ್ಟು ವಿಧಗಳನ್ನು ಕಾಣಬಹುದು. ಕೆಲವೊಂದನ್ನು ಆಹಾರದ ಭಾಗವಾಗಿ ಸೇವಿಸಲಾಗುತ್ತದೆ. ಮತ್ತೆ ಕೆಲವು ಅತ್ಯಂತ ವಿಷಕಾರಿಯಾಗಿದ್ದು ಅದನ್ನು ಸೇವಿಸಿದರೆ ಪ್ರಾಣಕ್ಕೆ ಕಂಟಕ ಉಂಟು ಮಾಡಬಹುದು. ಅದರಲ್ಲೂ ಕೆಲವೊಂದು ಅಣಬೆಗಳನ್ನು ಔಷಧಿಯಾಗಿಯೂ ಪರಿಗಣಿಸಲಾಗಿದೆ. ಹೌದು ಮ್ಯಾಜಿಕ್ ಮಶ್ರೂಮ್ ಎಂದು ಕರೆಯಲ್ಪಡುವ ಒಂದು ಜಾತಿಯ ಅಣಬೆಯನ್ನು ಔಷಧಿಯ ರೂಪವಾಗಿ ಬಳಸಲಾಗುತ್ತದೆ. ಈ ಅಣಬೆ ಮೆದುಳಿನ ಆರೋಗ್ಯಕ್ಕೆ ಪ್ರಯೋಜನವನ್ನು ಹೊಂದಿದೆ.
ಆಸ್ಟ್ರೇಲಿಯನ್ ಸರ್ಕಾರವು ಎಂಡಿಎಂಎ ಎಂಬ ಸಿಂಥೆಟಿಕ್ ಔಷಧಿಯನ್ನು ಮಾನಸಿಕ ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಬಳಕೆಯನ್ನು ಕಾನೂನುಬದ್ಧಗೊಳಿಸಿದೆ. ಜುಲೈ 1 ರಿಂದ, ಮನೋವೈದ್ಯರು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಎಂಡಿಎಂಎ ಮ್ಯಾಜಿಕ್ ಮಶ್ರೂಮ್ಗಳನ್ನು ಶಿಫಾರಸು ಮಾಡಿದೆ.
ಇದನ್ನೂ ಓದಿ: ಕೊರೊನಾ ಎಫೆಕ್ಟ್.. 2ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಠಿಕತೆ: ಶಾಕಿಂಗ್ ರಿಪೋರ್ಟ್ ಬಹಿರಂಗ
ಸೈಲೋಸಿಬಿನ್ ಎಂಬ ಒಂದು ವಿಧದ ಅಣಬೆಯನ್ನು ಮ್ಯಾಜಿಕ್ ಮಶ್ರೂಮ್ ಎಂದು ಕರೆಯಲಾಗುತ್ತದೆ. ಇದನ್ನು ಮೆದುಳಿನ ಆರೋಗ್ಯದ ಹಿಡಿದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಯ ರೂಪವಾಗಿ ಬಳಸಲಾಗುತ್ತದೆ. ಮ್ಯಾಜಿಕ್ ಮಶ್ರೂಮ್ ನಲ್ಲಿ ಸ್ವಾಭಾವಿಕವಾಗಿ ಕಂಡುಬರುವ ಸೈಕೋಆಕ್ಟಿವ್ ಸಂಯುಕ್ತವು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪೀಡಿತ ರೋಗಿಗಳಲ್ಲಿ ಮೆದುಳಿನ ಚಟುವಟಿಕೆಯನ್ನು ಮರುಹೊಂದಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವು ತೋರಿಸಿದೆ. ಸೈಕೆಡೆಲಿಕ್ ಅಣಬೆಗಳು ಎಂದೂ ಕರೆಯಲ್ಪಡುವ ಸೈಲೋಸಿಬಿನ್ ಅಣಬೆಗಳು ಖಿನ್ನತೆಯಲ್ಲಿ ಪಾತ್ರವಹಿಸುವ ಪ್ರಮುಖ ಮೆದುಳಿನ ಸರ್ಕ್ಯೂಟ್‌ಗಳ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಮರುಹೊಂದಿಸುತ್ತವೆ ಎಂದು ಸಂಶೋಧನೆಗಳು ತೋರಿಸಿವೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: