ಇಂದು ಗಣೇಶ ಚತುರ್ಥಿ, ಪ್ರತಿ ಮನೆಯಲ್ಲೂ ಗಣೇಶನನ್ನು ಬರಮಾಡಿಕೊಳ್ಳಲು ಸಿದ್ಧತೆಗಳು ಆರಂಭವಾಗಿವೆ. ಹಾಗೆಯೇ ಗಣೇಶನಿಗೆ ಇಷ್ಟವಾಗುವ ಕಾಯಿಕಡುಬು, ಮೋದಕ, ಕರ್ಜಿಕಾಯಿ, ಚಕ್ಕುಲಿ, ಬಗೆ ಬಗೆಯ ಉಂಡೆಗಳೆಲ್ಲಾ ಸಿದ್ಧಗೊಳ್ಳುತ್ತಿವೆ.
ಹಾಗೆಯೇ ಈ ಬಾರಿ ಮೋದಕವನ್ನು ಸ್ವಲ್ಪ ಪೌಷ್ಟಿಕಗೊಳಿಸೋಣ, ಆರೋಗ್ಯಕರ ಪಾಕ ವಿಧಾನಗಳ ಬಗ್ಗೆ ನಾವಿಲ್ಲಿ ಹೇಳಲಿದ್ದೇವೆ.
ಮೋದಕವನ್ನು ಮೈದಾ ಹಿಟ್ಟಿನಿಂದ ಸಾಮಾನ್ಯವಾಗಿ ತಯಾರಿಸಲಾಗುವುದು ಅದನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ಅದಕ್ಕೆ ಸ್ವಲ್ಪ ಬೆಲ್ಲ ಹಾಗೂ ತೆಂಗಿನ ತುರಿಯನ್ನು ಹಾಕಲಾಗುತ್ತದೆ.
ಅದೇ ಸಮಯದಲ್ಲಿ, ಮಧುಮೇಹದಂತಹ ಕೊಮೊರ್ಬಿಡಿಟಿಯೊಂದಿಗೆ ಹೋರಾಡುತ್ತಿದ್ದರೆ ಹಬ್ಬದ ದಿನಗಳಲ್ಲಿ ತಮ್ಮ ಆಹಾರ ಪದಾರ್ಥಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ. ಅಥವಾ ಅಧಿಕ ಕೊಲೆಸ್ಟ್ರಾಲ್ ಅಥವಾ ಅಧಿಕ ರಕ್ತದೊತ್ತಡ ಇರುವವರು ಕೂಡ.
ಆರೋಗ್ಯಕರ ಮೋದಕಗಳನ್ನು ಮಾಡಲು ಬೇಕಾಗುವ ಸಾಮಗ್ರಿಗಳು
ಓಟ್ಸ್ – 1/2 ಕಪ್
ತುಪ್ಪ – 2 tbsp
ಕೊಬ್ಬರಿ- 1/2 ಕಪ್
ಕರ್ಜೂರ-10
ಪಿಸ್ತಾ – 7-8 ಪಿಸ್ತಾ
ಬಾದಾಮಿ – 12-14
ಗೋಡಂಬಿ- 12-14
ವಿಧಾನ
-ಓಟ್ಸ್ ಅನ್ನು ಗ್ರೈಂಡರ್ನಲ್ಲಿ ಹಾಕಿ ಮತ್ತು ಹಿಟ್ಟು ಮಾಡಲು ಅವುಗಳನ್ನು ಪುಡಿಮಾಡಿ
-ನಾನ್ ಸ್ಟಿಕ್ ಪ್ಯಾನ್ ನಲ್ಲಿ ತುಪ್ಪ ಮತ್ತು ಓಟ್ಸ್ ಹಿಟ್ಟನ್ನು ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ
-ಅದೇ ಬಾಣಲೆಯಲ್ಲಿ ಕೊಬ್ಬರಿ ತುರಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
-ಈಗ 10 ಬೀಜರಹಿತ ಖರ್ಜೂರವನ್ನು ತೆಗೆದುಕೊಂಡು ಅವುಗಳನ್ನು ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.
-ಓಟ್ಸ್ ಮಿಶ್ರಣಕ್ಕೆ ರುಬ್ಬಿದ ಖರ್ಜೂರವನ್ನು ಸೇರಿಸಿ, ಮತ್ತು ಅದನ್ನು ಸರಿಯಾಗಿ ಮಿಶ್ರಣ ಮಾಡಿ.
-ಇದಕ್ಕೆ ರುಬ್ಬಿದ ಬೀಜಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
-ಈಗ ನೀವು ಮೋದಕ ಅಚ್ಚನ್ನು ಬಳಸಿ ಮೋದಕವನ್ನು ಸಿದ್ಧಪಡಿಸಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ