ಬೇಸಿಗೆ ಪ್ರಾರಂಭವಾಗಿದೆ, ಜೊತೆಗೆ ಇದು ಮಾವಿನ ಹಣ್ಣಿನ ಸೀಸನ್ ಕೂಡ ಹೌದು. ಮನೆಯಲ್ಲೊಂದು ಮಾವಿನ ಹಣ್ಣಿದ್ದರೆ ಇಡೀ ಮನೆಯೇ ಅದರ ಸುವಾಸನೆಯಿಂದಲೇ ಕೂಡಿರುತ್ತದೆ. ಜೊತೆಗೆ ಬಾಯಲ್ಲಿ ನೀರುರಿಸುವುದಂತೂ ಖಂಡಿತಾ. ಆದರೆ ನೀವು ಮಧುಮೇಹಿಗಳಾಗಿದ್ದು, ಮಾವಿನ ಹಣ್ಣು ತಿಂದರೆ, ಅದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ನಿಮ್ಮೆಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಉತ್ತರ ಇಲ್ಲಿದೆ.
ದೆಹಲಿಯ ಪ್ರೈಮಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆರೋಗ್ಯ ತಜ್ಞರಾದ ಅಂಕಿತಾ ಘೋಷಾಲ್ ನೀಡಿರುವ ಮಾಹಿತಿ ಇಲ್ಲಿದೆ.
ಮಧುಮೇಹಿಗಳು ಮಾವಿನ ಹಣ್ಣನ್ನು ಮಿತವಾಗಿ ಸೇವಿಸಿ, ನಿಮ್ಮ ಆಹಾರ ಕ್ರಮದಲ್ಲಿ ಜೋಡಿಸಿ ಎಂದು ಆಹಾರ ತಜ್ಞರು ಹೇಳುತ್ತಾರೆ. ನೀವು ಖಾಲಿ ಮಾವಿನ ಹಣ್ಣನ್ನು ಸೇವಿಸುವ ಬದಲಾಗಿ ಸಲಾಡ್, ಮೊಸರಿನೊಂದಿಗೆ ಸೇವಿಸಿ ಎಂದು ಅಂಕಿತಾ ಘೋಷಾಲ್ ಹೇಳುತ್ತಾರೆ. ಮಾವಿನಹಣ್ಣಿನಲ್ಲಿರುವ ಕರಗುವ ಮತ್ತು ಕರಗದ ನಾರುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ನಾರುಗಳು ದೇಹದಲ್ಲಿನ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಇದರಿಂದಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳ ಮೇಲೆ ಕನಿಷ್ಠ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಹೊಟ್ಟೆ ಉಬ್ಬರಕ್ಕೆ ಈ 5 ಆಹಾರಗಳು ಕಾರಣ; ಇವುಗಳನ್ನು ಮಿತವಾಗಿ ಸೇವಿಸಿ
ನೀವು ಮಧುಮೇಹಿಯಾಗಿರಲಿ ಅಥವಾ ಮಧುಮೇಹ ಪೂರ್ವದವರಾಗಿರಲಿ, ಮಾವಿನಹಣ್ಣನ್ನು ಸೇವಿಸುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆಹಾರ ತಜ್ಞ ಅಂಕಿತಾ ಘೋಷಾಲ್ ಅವರು ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: