ಈಶಾನ್ಯದ ಶೇಕಡಾ 56ರಷ್ಟು ಮಹಿಳೆಯರು ಮುಟ್ಟಿನ ಆರೋಗ್ಯ ಸಮಸ್ಯೆಗಳಿಂದ ಮತ್ತು ಶೇಕಡಾ 42ರಷ್ಟು ಮಹಿಳೆಯರು ಯೋನಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಯೋನಿ, ಮುಟ್ಟಿನ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳು ಈಶಾನ್ಯ ಪ್ರದೇಶದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಈಶಾನ್ಯ ಭಾರತದ 8 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯ ಅನುಸಾರ 500 ಕ್ಕೂ ಹೆಚ್ಚು ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. 500 ಮಹಿಳೆಯರಲ್ಲಿ ಶೇಕಡಾ 98 ಪ್ರತಿಶತದಷ್ಟು ಮಹಿಳೆಯರು ಮುಟ್ಟಿನ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಮಸ್ಯೆಗಳನ್ನು ಋತುಚಕ್ರದ ಆರೋಗ್ಯ ಸಮಸ್ಯೆಗಳು ಮತ್ತು ಯೋನಿ ಆರೋಗ್ಯ ಸಮಸ್ಯೆಗಳು ಎಂದು ವರ್ಗೀಕರಿಸಬಹುದು. ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 55ರಷ್ಟು ಮಹಿಳೆಯರು ಮುಟ್ಟಿನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಮತ್ತು ಹೆಚ್ಚು ಪ್ರಚಲಿತದಲ್ಲಿರುವ ಸಮಸ್ಯೆ ಪಾಲಿಸಿಸ್ಟಿಕ್ ಓವೇರಿಯನ್ ಡಿಸಾರ್ಡರ್ (PCOD)ಶೇಕಡಾ 36ರಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಮಳೆ ಪ್ರಾರಂಭವಾಗಿದೆ; ಜ್ವರ ಮತ್ತು ನೋವಿಗೆ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವ ಮುನ್ನ ತಿಳಿದುಕೊಳ್ಳಬೇಕಾದ ಅಂಶಗಳು
ಪಿಸಿಓಡಿ ಹಾರ್ಮೋನಿನ ಅಸ್ವಸ್ಥತೆಯಾಗಿದ್ದು, ಇದು ಅನಿಯಮಿತ ಅವಧಿಗಳು, ಫಲವತ್ತತೆಯ ಸಮಸ್ಯೆಗಳು ಮತ್ತು ಇತರ ತೊಡಕುಗಳಿಗೆ ಕಾರಣವಾಗಬಹುದು. ಮತ್ತೊಂದು ಸಾಮಾನ್ಯ ಮುಟ್ಟಿನ ಆರೋಗ್ಯ ಸಮಸ್ಯೆ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್. ಇದು ಮುಟ್ಟಿನ ಮೊದಲು ಸಂಭವಿಸುವ ದೈಹಿಕ ಮತ್ತು ಭಾವನಾತ್ಮಕ ರೋಗಲಕ್ಷಣಗಳನ್ನು ಸೂಚಿಸುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: