ರಾತ್ರಿ ಹೊತ್ತು ಸೌತೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ? ತಜ್ಞರು ಏನಂತಾರೆ ಇಲ್ಲಿದೆ ಮಾಹಿತಿ

ಸೌತೆಕಾಯಿ(Cucumber) ಎಂದರೆ ಬಹುತೇಕ ಎಲ್ಲರಿಗೂ ಇಷ್ಟ, ಹೀಗಾಗಿ ಸಮಯ ನೋಡದೆ ನಿಮಗೆ ತಿನ್ನಬೇಕು ಎನಿಸಿದಾಗಲೆಲ್ಲಾ ತಿನ್ನುತ್ತೀರಿ ಅದು ತಪ್ಪು

ರಾತ್ರಿ ಹೊತ್ತು ಸೌತೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ? ತಜ್ಞರು ಏನಂತಾರೆ ಇಲ್ಲಿದೆ ಮಾಹಿತಿ
ಸೌತೆಕಾಯಿ
Follow us
ನಯನಾ ರಾಜೀವ್
|

Updated on:Jul 14, 2023 | 2:02 PM

ಸೌತೆಕಾಯಿ(Cucumber) ಎಂದರೆ ಬಹುತೇಕ ಎಲ್ಲರಿಗೂ ಇಷ್ಟ, ಹೀಗಾಗಿ ಸಮಯ ನೋಡದೆ ನಿಮಗೆ ತಿನ್ನಬೇಕು ಎನಿಸಿದಾಗಲೆಲ್ಲಾ ತಿನ್ನುತ್ತೀರಿ ಅದು ತಪ್ಪು. ಸೌತೆಕಾಯಿಯಲ್ಲಿ ಬಹಳಷ್ಟು ನೀರಿನ ಅಂಶವಿರುವ ಕಾರಣ, ಬೇಸಿಗೆಯಲ್ಲಿ ಜನರು ಸೌತೆಕಾಯಿಯನ್ನು ಸಲಾಡ್ ಅಥವಾ ಸಂಜೆಯ ಹೊತ್ತು ಸೇವಿಸುತ್ತಾರೆ.ರೋಗ್ಯ ತಜ್ಞರ ಪ್ರಕಾರ, ಸೌತೆಕಾಯಿ ತಿನ್ನುವುದು ದೇಹವನ್ನು ಹೈಡ್ರೇಟ್ ಆಗಿ ಇಡಲು ಬಹಳ ಮುಖ್ಯ. ಸೌತೆಕಾಯಿಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ತಾಮ್ರವು ಸಮೃದ್ಧವಾಗಿದೆ, ಆದ್ದರಿಂದ ಇದನ್ನು ತಿಂದ ನಂತರ ನೀವು ಇಡೀ ಸಮಯ ಹೈಡ್ರೇಟೆಡ್ ಆಗಿರುತ್ತೀರಿ. ದೇಹಕ್ಕೆ ಪೋಷಕಾಂಶಗಳ ಕೊರತೆಯ ಜೊತೆಗೆ ರೋಗಗಳಿಂದ ಮುಕ್ತಿ ಸಿಗುತ್ತದೆ.

ಆದರೆ ಇದನ್ನು ತಿನ್ನುವುದರಿಂದ ಹಲವಾರು ಅನಾನುಕೂಲತೆಗಳಿವೆ ಎಂದು ನಿಮಗೆ ತಿಳಿದಿದೆಯೇ? ಅದಕ್ಕಾಗಿಯೇ ರಾತ್ರಿಯಲ್ಲಿ ಸೌತೆಕಾಯಿಯನ್ನು ತಿನ್ನುವುದನ್ನು ಹೆಚ್ಚಾಗಿ ನಿಷೇಧಿಸಲಾಗಿದೆ.

ಪೌಷ್ಟಿಕಾಂಶಯುಕ್ತ ಸೌತೆಕಾಯಿಯನ್ನು ಜನರು ಹಸಿಯಾಗಿ ತಿನ್ನಲು ಇಷ್ಟಪಡುತ್ತಾರೆ, ಇಲ್ಲದಿದ್ದರೆ ಸಲಾಡ್ ಅಥವಾ ಇತರೆ ತರಕಾರಿಯೊಂದಿಗೆ ಬೆರೆಸಿ ತಿನ್ನಲಾಗುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ದೇಹ ಮತ್ತು ಮನಸ್ಸನ್ನು ತಂಪಾಗಿರಿಸುತ್ತದೆ.

ರಾತ್ರಿ ಊಟದ ಜೊತೆ ಸೌತೆಕಾಯಿಯನ್ನು ತಿನ್ನುವವರು ಬಹಳ ಮಂದಿ ಇದ್ದಾರೆ, ಸಂಜೆ ಊಟದ ಬದಲು ಸೌತೆಕಾಯಿ ತಿಂದು ಮಲಗುವ ಬಹಳಷ್ಟು ಜನರಿದ್ದಾರೆ. ಆದರೆ ರಾತ್ರಿ ಹೊತ್ತು ಸೌತೆಕಾಯಿ ತಿನ್ನುವ ಅಭ್ಯಾಸವನ್ನು ಬಿಡಬೇಕು.

ಸೌತೆಕಾಯಿ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ಹೊಟ್ಟೆಗೆ ತುಂಬಾ ಭಾರವಾಗಿರುತ್ತದೆ, ಅದು ನಿಮ್ಮ ನಿದ್ರೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸೌತೆಕಾಯಿಯಲ್ಲಿ ನೀರು ಹೇರಳವಾಗಿರುವ ಕಾರಣ ರಾತ್ರಿ ಇದನ್ನು ತಿಂದು ಮಲಗಿದರೆ ಹಲವು ಬಾರಿ ಬಾತ್ ರೂಮ್​ಗೆ ಹೋಗಬೇಕಾಗಬಹುದು.

ಮತ್ತಷ್ಟು ಓದಿ: ಋತುಚಕ್ರದ ಆರೋಗ್ಯ ಸಮಸ್ಯೆಗಳು ಈಶಾನ್ಯದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬಂದಿದೆ:ಸಂಶೋಧನೆ

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರಿಗೆ ಸೌತೆಕಾಯಿ ಹಾನಿಕಾರಕ. ಅವರು ಅದನ್ನು ತಿನ್ನುವುದನ್ನು ತಪ್ಪಿಸಬೇಕು. ಕ್ಯುಕುರ್ಬಿಟಾಸಿನ್ ಎಂಬ ಪ್ರಬಲ ಅಂಶವು ಸೌತೆಕಾಯಿಯಲ್ಲಿ ಕಂಡುಬರುತ್ತದೆ, ಇದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ಸ್ವಲ್ಪ ತೊಂದರೆಯಾದರೆ ಗ್ಯಾಸ್ ಸಮಸ್ಯೆ ಕಾಡುತ್ತದೆ. ಕೆರಳಿಸುವ ಕರುಳಿನ ಸಹಲಕ್ಷಣಗಳು (IBS) ಹೊಂದಿರುವ ಜನರು ತಮ್ಮ ಆಹಾರದಲ್ಲಿ ಸೌತೆಕಾಯಿಯನ್ನು ಸೇರಿಸದಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಸೌತೆಕಾಯಿಯನ್ನು ತಿನ್ನಬೇಡಿ ಎಂದು ನಾವು ನಿಮಗೆ ಹೇಳುತ್ತಿಲ್ಲ, ಬದಲಿಗೆ ನೀವು ರಾತ್ರಿಯ ಊಟಕ್ಕೆ ಮುಂಚಿತವಾಗಿ ಸೌತೆಕಾಯಿಯನ್ನು ತಿನ್ನಬಹುದು . ರಾತ್ರಿ ಊಟಕ್ಕೆ 20-30 ನಿಮಿಷಗಳ ಮೊದಲು ಸೌತೆಕಾಯಿಯನ್ನು ಸೇವಿಸಿ. ರಾತ್ರಿಯಲ್ಲಿ ಲಘು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:01 pm, Fri, 14 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ