
ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ (TNBC- Triple Negative Breast Cancer) ಸ್ತನದಲ್ಲಿ ಸಂಭವಿಸುವ ಅಪಾಯಕಾರಿ ಕ್ಯಾನ್ಸರ್ ಆಗಿದೆ. ಈ ಕ್ಯಾನ್ಸರ್ ಒಂದು ಅಂಗದಿಂದ ಇನ್ನೊಂದು ಅಂಗಕ್ಕೆ ವೇಗವಾಗಿ ಹರಡುತ್ತದೆ. ಅದನ್ನು ನಿಯಂತ್ರಿಸುವುದು ಸುಲಭವಲ್ಲ. ಈ ಕ್ಯಾನ್ಸರ್ ಮೇಲೆ ಮೈಕ್ರೋಆರ್‌ಎನ್‌ಎ (MicroRNA) ಪಾತ್ರದ ಕುರಿತು ಪತಂಜಲಿ ರಿಸರ್ಚ್ ಸಂಸ್ಥೆ (Patanjali Research) ಸಂಶೋಧನೆ ಮಾಡಿದೆ. ಟಿಎನ್‌ಬಿಸಿಯಲ್ಲಿ ಮೆಟಾಸ್ಟಾಸಿಸ್ (Metastasis) ಅನ್ನು ಉತ್ತೇಜಿಸುವಲ್ಲಿ ಅಥವಾ ತಡೆಗಟ್ಟುವಲ್ಲಿ ಮೈಕ್ರೋಆರ್‌ಎನ್‌ಎಗಳು ಪ್ರಮುಖ ಪಾತ್ರ ವಹಿಸಬಹುದು ಎಂದು ಸೂಚಿಸಲಾಗಿದೆ. ಕೆಲವು ಮೈಕ್ರೋಆರ್‌ಎನ್‌ಎಗಳು ಕ್ಯಾನ್ಸರ್ ಟ್ಯೂಮರ್ಗಳ ಮೇಲೆ ನಿಗ್ರಹಕಗಳಾಗಿ (Suppressors) ಕಾರ್ಯನಿರ್ವಹಿಸುತ್ತವೆ ಮತ್ತು ಅವು ಬೆಳೆಯದಂತೆ ತಡೆಯಲು ಸಹಾಯ ಮಾಡುತ್ತವೆ.
ಮೈಕ್ರೋಆರ್‌ಎನ್‌ಎ ಆಧಾರಿತ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ಪರಿಣಾಮಕಾರಿ ವಿಧಾನಗಳು ಬೇಕಾಗುತ್ತವೆ ಎಂದು ಸಂಶೋಧನೆ ತೋರಿಸಿದೆ. ನ್ಯಾನೊಪಾರ್ಟಿಕಲ್-ಆಧಾರಿತ ತಂತ್ರಜ್ಞಾನವನ್ನು ಮೈಕ್ರೋಆರ್‌ಎನ್‌ಎಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ಟಿಎನ್‌ಬಿಸಿ ಸೆಲ್ಗಳಿಗೆ ತಲುಪಿಸಲು ಬಳಸಬಹುದು. ಇದು ಅದರ ಬೆಳವಣಿಗೆಯ ವೇಗವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ಉರಿಯೂತ ತಗ್ಗಿಸಲು ಈ ಸಸ್ಯ ಪ್ರಯೋಜನಕಾರಿ: ಪತಂಜಲಿ ಸಂಶೋಧನೆ
ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಎಂಬುದು ಈಸ್ಟ್ರೊಜೆನ್ ಗ್ರಾಹಕಗಳು (Oestrogen Receptors), ಪ್ರೊಜೆಸ್ಟರಾನ್ ಗ್ರಾಹಕಗಳು ಮತ್ತು HER2 ಗ್ರಾಹಕಗಳನ್ನು ಹೊಂದಿರದ ಸ್ತನ ಕ್ಯಾನ್ಸರ್. ಈ ಕ್ಯಾನ್ಸರ್ ಅಧಿಕ ಮಟ್ಟದ ಹಿಸ್ಟೋಲಾಜಿಕಲ್ ಗ್ರೇಡ್ ಹೊಂದಿದೆ. ರೋಗ ಮರುಕಳಿಸುವ ಹೆಚ್ಚಿನ ಅಪಾಯ ಇರುತ್ತದೆ. ಸಾಮಾನ್ಯ ಕ್ಯಾನ್ಸರ್‌ಗಳಿಗಿಂತ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ. ಮೈಕ್ರೋಆರ್‌ಎನ್‌ಎಗಳು ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಇತರ ಅಂಗಗಳಿಗೆ ಹರಡುವುದನ್ನು ತಡೆಯಬಹುದು. ಮೈಕ್ರೋಆರ್‌ಎನ್‌ಎ ಆಧಾರಿತ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು, ಮೈಕ್ರೋಆರ್‌ಎನ್‌ಎಗಳನ್ನು ಜೀವಕೋಶಗಳಿಗೆ ಪರಿಣಾಮಕಾರಿಯಾಗಿ ತಲುಪಿಸುವುದು ಮುಖ್ಯ.
ಈ ಕ್ಯಾನ್ಸರ್ ಮೇಲೆ ಮೈಕ್ರೋಆರ್‌ಎನ್‌ಎ ಆಂಕೊಜೀನ್ (oncogene) ಅಥವಾ ಗೆಡ್ಡೆ ನಿರೋಧಕವಾಗಿ (Tumour suppressor) ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಅಂದರೆ ಇದು ಕ್ಯಾನ್ಸರ್ ಕೋಶಗಳು ಹರಡುವುದನ್ನು ನಿಲ್ಲಿಸುತ್ತದೆ ಮತ್ತು ಸಾಮಾನ್ಯ ಕೋಶಗಳನ್ನು ಆರೋಗ್ಯವಾಗಿರಿಸುತ್ತದೆ. ಎಪಿಥೇಲಿಯಲ್‌ನಿಂದ ಮೆಸೆಂಕಿಮಲ್ ಪರಿವರ್ತನೆ, ಇಂಟ್ರಾವಾಸೇಶನ್, ಎಕ್ಸ್ಟ್ರಾವಾಸೇಶನ್ನಂತಹ ಪ್ರಕ್ರಿಯೆಗಳನ್ನು ನಿಯಂತ್ರಿಸುವ ಮೂಲಕ ಮೈಕ್ರೋಆರ್‌ಎನ್‌ಎಗಳು ಟಿಎನ್‌ಬಿಸಿ ಪ್ರಗತಿಯನ್ನು ಪ್ರತಿಬಂಧಿಸಬಹುದು.
ಇದನ್ನೂ ಓದಿ: ಯಜ್ಞದಿಂದ ರೋಗ ನಿವಾರಣೆ ಸಾಧ್ಯವಾ? ಹೌದೆನ್ನುತ್ತಿದೆ ಪತಂಜಲಿ ಸಂಶೋಧನೆ
ಮೈಕ್ರೋಆರ್‌ಎನ್‌ಎಗಳು ಟಿಎನ್‌ಬಿಸಿಯನ್ನು ತಡೆಗಟ್ಟುವಲ್ಲಿ ಸಹಾಯಕವಾಗಬಹುದು ಎಂದು ಸಂಶೋಧನೆ ಸ್ಪಷ್ಟಪಡಿಸಿದೆ. ಆದರೆ ಇದರಲ್ಲಿ ಕೆಲ ಸಮಸ್ಯೆಗಳೂ ಇವೆ. TNBC ಯಲ್ಲಿ ಮೈಕ್ರೋಆರ್‌ಎನ್‌ಎಗಳ ಪಾತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳ ಚಿಕಿತ್ಸಕ ಮತ್ತು ಮುನ್ನರಿವಿನ ಸಾಮರ್ಥ್ಯವನ್ನು ಬಹಿರಂಗಪಡಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಇದರಿಂದ, ಈ ಕ್ಯಾನ್ಸರ್ ಮೇಲೆ ಮೈಕ್ರೋಆರ್‌ಎನ್‌ಎಗಳು ಎಷ್ಟು ಪರಿಣಾಮಕಾರಿ ಮತ್ತು ಅವುಗಳನ್ನು ಎಷ್ಟು ಮತ್ತು ಯಾವ ರೀತಿಯಲ್ಲಿ ಬಳಸಬಹುದು ಎಂಬುದು ತಿಳಿಯುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ