
ಆರೋಗ್ಯ (Health) ಚೆನ್ನಾಗಿಲ್ಲದಿದ್ದಾಗ ಮಾತ್ರ ಹಾಲು (Milk) ಅನ್ನ ಸೇವನೆ ಮಾಡಬೇಕು ಎಂಬುದು ಹಲವರ ಯೋಚನೆಯಾಗಿರುತ್ತದೆ. ಆದರೆ ನಿಮಗೆ ಗೊತ್ತಿರಲಿ ಇದರಲ್ಲಿರುವಷ್ಟು ಪೋಷಕಾಂಶಗಳು (Nutrition) ನಿಮಗೆ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ಹಾಲನ್ನ (Milk Rice) ತಯಾರಿಸುವುದು ಕೂಡ ಬಹಳ ಸುಲಭ. ಹಾಗಾಗಿ ದಿನದಲ್ಲಿ ಒಂದು ಬಾರಿಯಾದರೂ ಹಾಲನ್ನು ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಹಾಲು ಮತ್ತು ಅನ್ನದ ಮಿಶ್ರಣವನ್ನು ಸೇವನೆ ಮಾಡಬಹುದು. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು? ಯಾಕಾಗಿ ಸೇವನೆ ಮಾಡಬೇಕು? ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಾಲು ಮತ್ತು ಅನ್ನದ ಮಿಶ್ರಣವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಇದು ದೇಹಕ್ಕೆ ವಿವಿಧ ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ. ಏಕೆಂದರೆ ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ಇರುತ್ತದೆ. ಇವು ಮೂಳೆ, ಹಲ್ಲು, ಸ್ನಾಯು ಮತ್ತು ನರಗಳನ್ನು ಬಲಪಡಿಸುತ್ತವೆ. ಜೊತೆಗೆ ಕೆಂಪು ರಕ್ತ ಕಣಗಳ ಉತ್ಪಾದನೆಗೂ ಸಹ ಸಹಾಯ ಮಾಡುತ್ತದೆ. ಇನ್ನು ಅನ್ನದಲ್ಲಿ ಶಕ್ತಿಯ ಮೂಲವಾಗಿರುವ ಕಾರ್ಬೋಹೈಡ್ರೇಟ್‌ಗಳಿವೆ ಇವೆರಡನ್ನೂ ಒಟ್ಟುಗೂಡಿಸಿ ತಿಂದಾಗ ಇದು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಪೋಷಕಾಂಶಗಳನ್ನು ನೀಡುತ್ತದೆ.
ಸಾಮಾನ್ಯವಾಗಿ ಹಾಲು ಮತ್ತು ಅನ್ನವು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ವಿಶೇಷವಾಗಿ ಬೆಳಗ್ಗಿನ ಸಮಯದಲ್ಲಿ ಇವುಗಳ ಸೇವನೆ ಮಾಡುವುದರಿಂದ ದಿನವಿಡೀ ಒಂದೇ ರೀತಿಯ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಹಾಲು ಮತ್ತು ಅನ್ನ ಸುಲಭವಾಗಿ ಜೀರ್ಣವಾಗುತ್ತವೆ. ಹಾಲು ಸೇವನೆ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆಗಳಿಲ್ಲದಿದ್ದರೆ, ಇದು ಒಳ್ಳೆಯ ಆಹಾರ ಎನ್ನುವುದರಲ್ಲಿ ಸಂಶಯವಿಲ್ಲ. ಇನ್ನು ಹಾಲು ಮತ್ತು ಅನ್ನದ ಮಿಶ್ರಣ ನಿಮಗೆ ದೀರ್ಘಕಾಲದ ವರೆಗೆ ಹೊಟ್ಟೆ ತುಂಬಿದಂತಹ ಅನುಭವವಾಗುವುದರಿಂದ ಅತಿಯಾಗಿ ತಿನ್ನುವ ಅಭ್ಯಾಸ ಕೂಡ ಕಡಿಮೆ ಆಗುತ್ತದೆ.
ಇದನ್ನೂ ಓದಿ: ಬಿಳಿ ರಕ್ತ ಕಣಗಳು ಕಡಿಮೆ ಆಗಿದ್ದರೆ ಚಿಂತೆ ಬೇಡ! ಈ ಹಣ್ಣಿನ ಸೇವನೆ ಮಾಡಿ
ಹಾಲಿನ ಸೇವನೆ ಮಾಡಿದಾಗ ಜೀರ್ಣಕಾರಿ ಸಮಸ್ಯೆ ಆಗುವವರು ಹಾಲು ಮತ್ತು ಅನ್ನವನ್ನು ಬೆರೆಸಿ ಊಟ ಮಾಡುವ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳಿ. ಹಾಲು ಮತ್ತು ಅನ್ನ ಹೆಚ್ಚಿನ ಕ್ಯಾಲೋರಿ ಆಹಾರಗಳಾಗಿವೆ. ಅವು ತೂಕ ಹೆಚ್ಚಾಗಲು ಕಾರಣವಾಗಬಹುದು. ನಿಯಮಿತವಾಗಿ ಸೇವಿಸಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸೇವನೆ ಮಾಡುವಾಗ ನೋಡಿಕೊಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ, ಹಾಲನ್ನ ಸೇವನೆ ಮಾಡುವ ಮೊದಲು ನಿಮ್ಮ ದೈಹಿಕ ಸ್ಥಿತಿ ಮತ್ತು ಆಹಾರ ಪದ್ಧತಿಯನ್ನು ನೋಡಿಕೊಳ್ಳಿ. ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ