AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Red or Green Apple: ಕೆಂಪು ಅಥವಾ ಹಸಿರು ಸೇಬು ಕರುಳಿನ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಪ್ರತಿದಿನ ಒಂದು ಸೇಬು ತಿನ್ನುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ಎರಡು ರೀತಿಯ ಸೇಬು ಹಣ್ಣುಗಳನ್ನು ನೋಡುತ್ತೇವೆ. ಹಾಗಾದರೆ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು? ಇವೆರಡು ಹಣ್ಣುಗಳ ನಡುವೆ ಇರುವ ವ್ಯತ್ಯಾಸವೇನು? ಕರುಳಿನ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

Red or Green Apple: ಕೆಂಪು ಅಥವಾ ಹಸಿರು ಸೇಬು ಕರುಳಿನ ಆರೋಗ್ಯಕ್ಕೆ ಯಾವುದು ಒಳ್ಳೆಯದು?
ಕೆಂಪು ಮತ್ತು ಹಸಿರು ಸೇಬುಹಣ್ಣುImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 12, 2025 | 7:12 PM

Share

ದಿನಕ್ಕೊಂದು ಸೇಬು (Apple) ತಿಂದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತನ್ನು ನೀವು ಕೇಳಿರಬಹುದು. ಇದರರ್ಥ ಪ್ರತಿದಿನ ಒಂದು ಸೇಬು ತಿಂದರೆ ಹಲವಾರು ಆರೋಗ್ಯ (Health) ಸಮಸ್ಯೆಗಳು ಬರುವುದನ್ನು ತಡೆಯಬಹುದು. ಇದರಲ್ಲಿ ಪೋಷಕಾಂಶಗಳು ಮತ್ತು ನಾರಿನಂಶ ಅಧಿಕವಾಗಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸಲು ಬಹಳ ಪ್ರಯೋಜನಕಾರಿಯಾಗಿದೆ. ಆದರೆ ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ಎರಡು ರೀತಿಯ ಸೇಬು ಹಣ್ಣುಗಳನ್ನು ನೋಡುತ್ತೇವೆ. ಒಂದು ಕೆಂಪು ಮತ್ತೊಂದು ಹಸಿರು (Red vs Green Apples). ಹಾಗಾದರೆ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು? ಇವೆರಡು ಹಣ್ಣುಗಳ ನಡುವೆ ಇರುವ ವ್ಯತ್ಯಾಸವೇನು? ಕರುಳಿನ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಹಸಿರು ಸೇಬುಹಣ್ಣು ಅಥವಾ ಗ್ರೀನ್ ಆಪಲ್ ಆರೋಗ್ಯಕ್ಕೆ ಹೇಗೆ ಉಪಯೋಗಕಾರಿ?

ಕೆಂಪಿರುವ ಸೇಬು ಹಣ್ಣುಗಳಿಗೆ ಹೋಲಿಸಿದರೆ ಹಸಿರು ಸೇಬುಗಳು ಸ್ವಲ್ಪ ಹುಳಿಯಾಗಿರುತ್ತದೆ. ನೈಸರ್ಗಿಕ ಸಕ್ಕರೆ ಅಂಶ ಕಡಿಮೆ ಇರುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಯಸುತ್ತಿರುವವರಿಗೆ ಈ ಹಣ್ಣು ಬಹಳ ಒಳ್ಳೆಯದು. ಅದಲ್ಲದೆ ಈ ಹಸಿರು ಬಣ್ಣದ ಸೇಬು ಹಣ್ಣುಗಳಲ್ಲಿ ನಾರಿನ ಅಂಶ ಅಧಿಕವಾಗಿರುವುದರಿಂದ ಕರುಳಿನ ಆರೋಗ್ಯ ಕಾಪಾಡಲು ಪ್ರಯೋಜನಕಾರಿಯಾಗಿದೆ. ಇದು ಒಳ್ಳೆಯ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಜೀರ್ಣಕ್ರಿಯೆ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಇನ್ನು, ಹಸಿರು ಸೇಬುಗಳಲ್ಲಿರುವ ಪಾಲಿಫಿನಾಲ್‌ಗಳು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ತಡೆಯಲು ಸಹಾಯ ಮಾಡುವುದರಿಂದ ನಮ್ಮ ಕರುಳು ಆರೋಗ್ಯವಾಗಿ ಇರುತ್ತದೆ.

ಕೆಂಪು ಸೇಬು ಅಥವಾ ರೆಡ್ ಆಪಲ್ ತಿಂದರೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತೆ!

ಎಲ್ಲಾ ಕಡೆಗಳಲ್ಲಿಯೂ ಸಿಗುವ ಕೆಂಪು ಸೇಬು ಸಾಮಾನ್ಯವಾಗಿ ಸಿಹಿಯಾಗಿರುತ್ತವೆ. ಅವು ಆಂಥೋಸಯಾನಿನ್‌ಗಳು ಎಂಬ ಪ್ರಬಲ ರೀತಿಯ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತವೆ, ಇವು ಸೇಬಿನ ಸಿಪ್ಪೆಗಳಲ್ಲಿ ಕಂಡುಬರುತ್ತವೆ. ಇದು ಕರುಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತವೆ. ಜೊತೆಗೆ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಕೆಂಪು ಸೇಬುಗಳು ಹಸಿರು ಸೇಬುಗಳಿಗಿಂತ ಸ್ವಲ್ಪ ಕಡಿಮೆ ಫೈಬರ್ ಅನ್ನು ಹೊಂದಿರುತ್ತವೆ.

ಇದನ್ನೂ ಓದಿ
Image
ಈ 3 ಮೀನುಗಳನ್ನು ಫ್ರೀ ಕೊಟ್ಟರೂ ತಿನ್ನಬೇಡಿ
Image
ಬೆಲ್ಲದ ಅನ್ನ ಸೇವನೆ ಮಾಡಿದರೆ ಈ ಕಾಯಿಲೆ ಹತ್ತಿರವೂ ಬರಲ್ಲ
Image
ಫಸ್ಟ್ ನೈಟ್ ನಲ್ಲಿ ಮಲ್ಲಿಗೆ ಇಡುವುದು ಇದೆ ಕಾರಣಕ್ಕೆ!
Image
ಪ್ರತಿದಿನ ನೀವು ಮಾಡುವ ಈ ತಪ್ಪುಗಳೇ ರಾತ್ರಿ ನಿದ್ರೆಯನ್ನು ಹಾಳುಮಾಡುತ್ತೆ

ಇದನ್ನೂ ಓದಿ: ಮಲ್ಲಿಗೆ ಸುವಾಸನೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು! ಇದೇ ಕಾರಣಕ್ಕೆ ಫಸ್ಟ್ ನೈಟ್ ನಲ್ಲಿ ಇಡುವುದು

ಯಾವ ಸೇಬು ಆರೋಗ್ಯಕ್ಕೆ ಒಳ್ಳೆಯದು?

ಕೆಂಪು ಮತ್ತು ಹಸಿರು ಎರಡು ರೀತಿಯ ಸೇಬುಗಳು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಹಸಿರು ಸೇಬುಗಳಲ್ಲಿ ಕಡಿಮೆ ಸಕ್ಕರೆ ಅಂಶವನ್ನು ಹೊಂದಿದ್ದು, ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕಾದವರಿಗೆ ಹಸಿರು ಸೇಬುಗಳು ಒಳ್ಳೆಯದು. ಈ ಸೇಬು ಹಣ್ಣಿನ ಹೊರಭಾಗ ಅಂದರೆ ಸಿಪ್ಪೆಯಲ್ಲಿಯೇ ಹೆಚ್ಚಿನ ಪ್ರಯೋಜನಗಳಿರುತ್ತವೆ. ಅದಕ್ಕಾಗಿಯೇ ಸಿಪ್ಪೆ ತೆಗೆದು ಸೇಬು ಹಣ್ಣುಗಳ ಸೇವನೆ ಮಾಡಬೇಡಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!