International Nurses Day 2025: ದಾದಿಯರು ದೇವರಿದ್ದಂತೆ; ದಾದಿಯರ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಪ್ರಪಂಚದಾದ್ಯಂತ ಕಾಯಿಲೆಯಿಂದ ಬಳಲುತ್ತಿರುವ ಜನರ ಉಪಚಾರ, ಆರೈಕೆ ಯೋಗಕ್ಷೇಮದಲ್ಲಿ ದಾದಿಯರ ಅಂದರೆ ನರ್ಸ್‌ಗಳ ಪಾತ್ರ ಅಪಾರ. ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಹಗಳಿರುಲೆನ್ನದೆ ಆರೈಕೆ ಮಾಡುವ ದಾದಿಯರನ್ನು ಎಷ್ಟು ಶ್ಲಾಘಿಸಿದರೂ ಕಮ್ಮಿಯೇ. ಇವರ ಸೇವೆ, ಪರಿಶ್ರಮಕ್ಕೆ ಗೌರವ ಸಲ್ಲಿಸಲೆಂದೇ ಪ್ರತಿವರ್ಷ ಮೇ 12 ರಂದು ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವ ಏನೆಂಬುದನ್ನು ತಿಳಿಯೋಣ ಬನ್ನಿ.

ವೈದ್ಯರು (Doctors) ಮಾತ್ರವಲ್ಲ ದಾದಿಯರು (Nurses) ಕೂಡ ಜನರ ಪಾಲಿಗೆ ದೇವರಿದ್ದಂತೆ. ಹೌದು ವೈದ್ಯರಂತೆ ನರ್ಸ್‌ಗಳು ಕೂಡಾ ಅತ್ಯಂತ ನಿಷ್ಠೆಯಿಂದ ಪ್ರಾಮಾಣಿಕವಾಗಿ ಜೀವ ರಕ್ಷಣೆ ಮಾಡುವ ಕೆಲಸ ಹಾಗೂ ರೋಗಿಗಳನ್ನು ಹಗಲಿರುಳೆನ್ನದೆ ಆರೈಕೆ ಮಾಡುವ, ಉಪಚಾರ ಮಾಡುವ ಸೇವೆಯನ್ನು ಮಾಡುತ್ತಿದ್ದಾರೆ. ಅಷ್ಟೇ ಯಾಕೆ ವೈದ್ಯರಿಗಿಂತ ಮೊದಲು ರೋಗಿಗಳನ್ನು ಉಪಚರಿಸುವವರು ದಾದಿಯರೇ. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನೇ ತೊರೆದು ಜನರ ಸೇವೆಯನ್ನು ಮಾಡಿದ್ದಾರೆ. ಜಗತ್ತಿನೆಲ್ಲೆಡೆ ಜನರ ಪುನರ್ವಸತಿ ಮತ್ತು ಯೋಗಕ್ಷೇಮಕ್ಕಾಗಿ ದಾದಿಯರು ಪ್ರತಿನಿತ್ಯ ದುಡಿಯುತ್ತಿದ್ದಾರೆ. ಒಟ್ಟಾರೆಯಾಗಿ ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು ಎಂದರೆ ತಪ್ಪಾಗಲಾರದು. ಸಮಾಜದ ಆರೋಗ್ಯ ರಕ್ಷಣೆಗಾಗಿ ದುಡಿಯುವ, ಸೇವೆ ಸಲ್ಲಿಸುವ ದಾದಿಯರಿಗೆ ಹಾಗೂ ಅವರ ಸೇವೆಗೆ ಗೌರ ಸಲ್ಲಿಸಲು ಪ್ರತಿ ವರ್ಷ ಮೇ 12 ರಂದು ಅಂತಾರಾಷ್ಟ್ರೀಯ ದಾದಿಯರ (International Nurses Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವ ಏನೆಂಬುದನ್ನು ತಿಳಿಯೋಣ ಬನ್ನಿ.
ದಾದಿಯರ ದಿನವನ್ನು ಮೇ 12 ರಂದೇ ಏಕೆ ಆಚರಿಸಲಾಗುತ್ತದೆ?
ಪ್ರತಿ ವರ್ಷ ಮೇ 12 ರಂದೇ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತದೆ. 1820 ರ ಮೇ 12 ರಂದು ಆಧುನಿಕ ನರ್ಸಿಂಗ್‌ನ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಜನಿಸಿದರು. ಇವರ ಜನ್ಮ ದಿನದ ಸವಿ ನೆನಪಿಗಾಗಿಯೇ 1974 ರಲ್ಲಿ ಅಂತಾರಾಷ್ಟ್ರೀಯ ದಾದಿಯರ ಮಂಡಳಿಯು ದಾದಿಯರ ದಿನವನ್ನು ಆಚರಿಸಲು ಪ್ರಾರಂಭಿಸಿತು.
ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಅಧಿಕಾ ಡೊರೊಥಿ ಸದರ್ಲ್ಯಾಂಡ್ ಈ ದಿನವನ್ನು ಆಚರಿಸುವ ಕಲ್ಪನೆಯನ್ನು ಬಹು ಹಿಂದೆಯೇ ಪ್ರಸ್ತಾಪಿಸಿದ್ದರು. ನಂತರ 1974 ರಲ್ಲಿ ಸಮಾಜ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದಾದಿಯರ ಕೊಡುಗೆಯನ್ನು ಸ್ಮರಿಸಲು, ಈ ವೃತ್ತಿಯನ್ನು ಉತ್ತೇಜಿಸಲು ಮತ್ತು ದಾದಿಯರನ್ನು ಗೌರವಿಸಲು ಇಂಟರ್‌ನ್ಯಾಶನಲ್ ಕೌನ್ಸಿಲ್ ಆಫ್ ನರ್ಸಸ್ ಮಂಡಳಿ ಈ ದಿನವನ್ನು ಆಚರಿಸಲು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ಆರಂಭಿಕ ಹಂತದಲ್ಲಿರುವ ಅಂಡಾಶಯದ ಕ್ಯಾನ್ಸರ್ ಗುರುತಿಸುವುದು ಹೇಗೆ?
ಅಂತಾರಾಷ್ಟ್ರೀಯ ದಾದಿಯರ ದಿನದ ಮಹತ್ವ:
ಅಂತಾರಾಷ್ಟ್ರೀಯ ದಾದಿಯರ ದಿನವು ಸಮಾಜದಲ್ಲಿ ದಾದಿಯರ ಮಹತ್ವ ಮತ್ತು ಜನರ ಅಂದರೆ ರೋಗಿಗಳ ಜೀವನದಲ್ಲಿ ಬದಲಾವಣೆ, ಹೊಸ ಬೆಳಕು ತರುವಲ್ಲಿ ದಾದಿಯರ ಪಾತ್ರದ ಬಗ್ಗೆ ತಿಳಿಸುತ್ತದೆ. ಅಲ್ಲದೆ ಈ ದಿನ ದಾದಿಯರ ಪ್ರಯತ್ನಗಳು ಮತ್ತು ಕೊಡುಗೆಗಳನ್ನು ಗೌರವಿಸುವ ಸಂದರ್ಭ ಮಾತ್ರವಲ್ಲ, ಇದು ಶುಶ್ರೂಷಾ ವೃತ್ತಿಯ ಮಹತ್ವವನ್ನು ಉತ್ತೇಜಿಸುವ ದಿನವಾಗಿದೆ. ಜೊತೆಗೆ ಈ ದಿನದ ಮೂಲಕ ದಾದಿಯರ ಕಠಿಣ ಪರಿಶ್ರಮ, ಸೇವೆ, ಸಮರ್ಪಣೆಗೆ ಧನ್ಯವಾದ ತಿಳಿಸಬಹದು.
ಈ ವಿಶೇಷ ದಿನ ಪ್ರಪಂಚದಾದ್ಯಂತ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳು ದಾದಿಯರನ್ನು ಅಥವಾ ನರ್ಸಿಂಗ್ ವೃತ್ತಿಪರರನ್ನು ಗೌರವಿಸಲು ಹಲವಾರು ಸನ್ಮಾನ ಕಾರ್ಯಕ್ರಮಗಳು, ಸೆಮಿನಾರ್‌ಗಳು, ಅಭಿಯಾನಗಳನ್ನು ಆಯೋಜಿಸುತ್ತವೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




