Health Care Tips:ಹಾಲಿಗೆ ಸಕ್ಕರೆ ಬದಲು ಬೆಲ್ಲ ಹಾಕಿ ಕುಡಿಯಿರಿ ;ಆರೋಗ್ಯದಲ್ಲಾಗುತ್ತೆ ಮ್ಯಾಜಿಕ್!
ದಿನನಿತ್ಯ ಜೀವನದಲ್ಲಿ ಸೇವಿಸುವ ಆಹಾರಗಳು ಆರೋಗ್ಯದ ಮೇಲೆ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳು ಬೀರುತ್ತದೆ. ಆದರೆ ಈ ಬಗ್ಗೆ ಯೋಚಿಸಿ ಆಹಾರ ಸೇವನೆ ಮಾಡುವವರ ಸಂಖ್ಯೆಯು ತೀರಾ ಕಡಿಮೆ. ಕೆಲವರಿಗೆ ಹಾಲಿಗೆ ಸಕ್ಕರೆ ಸೇರಿಸಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಇನ್ನು ಕೆಲವರು ಹಾಲಿಗೆ ಬೆಲ್ಲ ಹಾಕಿ ಕುಡಿಯುತ್ತಾರೆ. ಈ ರೀತಿ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಸಿಹಿ ತಿಂಡಿಗಳಲ್ಲಿ ಸಿಹಿಕಾರಕವಾಗಿ ಬೆಲ್ಲವನ್ನು ಬಳಸುವುದೇ ಹೆಚ್ಚು. ಈ ಮಧುಮೇಹಿಗಳು ಸಕ್ಕರೆಗಿಂತ ಬೆಲ್ಲವೇ ಬೆಸ್ಟ್ ಎನ್ನಬಹುದು. ಈ ಬೆಲ್ಲದಲ್ಲಿ ಜೀವಸತ್ವಗಳು, ಖನಿಜಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳಿವೆ. ಹೀಗಾಗಿ ಈ ಬೆಲ್ಲ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಅಧಿಕ. ಅದಲ್ಲದೇ ಹಾಲಿಗೆ ಬೆಲ್ಲ ಹಾಕಿ ಸೇವಿಸುವುದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದು.
- ಹಾಲಿಗೆ ಬೆಲ್ಲ ಹಾಕಿ ಸೇವಿಸುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬು ಕಡಿಮೆಯಾಗುತ್ತದೆ. ಸ್ಥೂಲಕಾಯ ನಿವಾರಣೆಯಾಗಿ ದೇಹವನ್ನು ಆರೋಗ್ಯಯುತವಾಗಿಸುತ್ತದೆ.
- ಬೆಲ್ಲದ ಹಾಲಿನಲ್ಲಿ ನೈಸರ್ಗಿಕ ಆಂಟಿ ಬಯೋಟಿಕ್ ಮತ್ತು ಆಂಟಿ ವೈರಲ್ ಗುಣಗಳು ಅಧಿಕವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅರೋಗ್ಯ ಸಮಸ್ಯೆಗಳು ಕಾಡದಂತೆ ನೋಡಿಕೊಳ್ಳುತ್ತದೆ.
- ಬೆಲ್ಲದ ಹಾಲಿನ ಸೇವನೆಯಿಂದಾಗಿ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
- ಬೆಲ್ಲದ ಹಾಲಿನಲ್ಲಿರುವ ಪೋಷಕಾಂಶಗಳು ಕೂದಲಿನ ರಕ್ಷಣೆಗೆ ಪ್ರಯೋಜನಕಾರಿ. ಇದು ಕೂದಲಿನ ಹೊಳಪನ್ನು ಹೆಚ್ಚಿಸಿ, ಕೂದಲು ಉದುರುವುದು ಹಾಗೂ ತಲೆಹೊಟ್ಟಿನ ಸಮಸ್ಯೆಯು ನಿವಾರಿಸುತ್ತದೆ.
- ತಿಂಗಳ ಮುಟ್ಟಿನ ಸಮಯದಲ್ಲಿ ಕಾಡುವ ಅತಿಯಾದ ಹೊಟ್ಟೆ ನೋವು, ಬೆನ್ನು ನೋವಿಗೆ ಈ ಬೆಲ್ಲದ ಹಾಲು ಉತ್ತಮವಾದ ಔಷಧಿಯಾಗಿದೆ. ಇದು ನೋವನ್ನು ಕಡಿಮೆ ಮಾಡುತ್ತದೆ.
- ವಯಸ್ಸಾದಾಗ ಕಾಡುವ ಕೀಲು ನೋವು ಸಮಸ್ಯೆ, ಸಂಧಿವಾತದಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.