Health Tips: ಮಗುವಿನ ಆರೋಗ್ಯ ಕಾಪಾಡಲು ಹಾಗೂ ಎದೆ ಹಾಲನ್ನು ಹೆಚ್ಚಿಸಲು ತಾಯಂದಿರಿಗಿಲ್ಲಿದೆ ಉಪಯುಕ್ತ ಮಾಹಿತಿ

| Updated By: ಅಕ್ಷತಾ ವರ್ಕಾಡಿ

Updated on: Oct 24, 2022 | 5:37 PM

ಹುಟ್ಟಿದ ಮಗು ಪ್ರಾರಂಭದ 6ತಿಂಗಳುಗಳ ಕಾಲ ತಾಯಿಯ ಎದೆ ಹಾಲನ್ನೇ ಅವಲಂಬಿಸಿರುವುದರಿಂದ ಪೌಷ್ಟಿಕ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಜೊತೆಗೆ ಉತ್ತಮವಾದ ಆಹಾರ ಪದ್ಧತಿಯೂ ನಿಮ್ಮ ಎದೆ ಹಾಲಿನ ಉತ್ಪಾದನೆಯ ಮಟ್ಟವನ್ನು ಹೆಚ್ಚಿಸುತ್ತದೆ.

Health Tips: ಮಗುವಿನ ಆರೋಗ್ಯ ಕಾಪಾಡಲು ಹಾಗೂ ಎದೆ ಹಾಲನ್ನು ಹೆಚ್ಚಿಸಲು ತಾಯಂದಿರಿಗಿಲ್ಲಿದೆ ಉಪಯುಕ್ತ ಮಾಹಿತಿ
Breastfeeding
Follow us on

ಪ್ರಸವದ ನಂತರದ ದಿನಗಳಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಗಮನಹರಿಸುವುದು ಅತ್ಯಂತ ಅಗತ್ಯವಾಗಿದೆ. ಈ ಸಮಯದಲ್ಲಿ ತಾಯಿ ಮತ್ತು ಮಗುವಿನ ಸ್ವಚ್ಚತೆಯ ವಿಷಯದಲ್ಲಿ ಕಾಳಜಿ ವಹಿಸದಿದ್ದಲ್ಲಿ ಸೋಂಕು ಹರಡಲು ಎಲ್ಲಾ ಸಾಧ್ಯತೆಗಳಿವೆ. ಆದ್ದರಿಂದ ಸ್ವಚ್ಚತೆಯ ವಿಷಯದಲ್ಲಿ ಎಚ್ಚರದಿಂದಿರುವುದು ಅಗತ್ಯವಾಗಿದೆ.

ತಾಯಿ ಯಾವ ರೀತಿಯ ಆಹಾರ ಪದ್ದತಿಯನ್ನು ರೂಢಿಸಿಕೊಳ್ಳುತಾಳೋ ,ಆದೇ ನೇರವಾಗಿ ಎದೆ ಹಾಲಿನ ಮೂಲಕ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ ರೂಢಿಸಿಕೊಳ್ಳಬೇಕಾಗಿದೆ.

ಮಗುವಿನ ಉತ್ತಮ ಆರೋಗ್ಯವನ್ನು ಪಡೆಯಬೇಕಾದರೆ ಹಾಲುಣಿಸುವ ಹಂತದಲ್ಲಿ ತಾಯಂದಿರು ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು ಎಂದು ಪೌಷ್ಟಿಕತಜ್ಞರಾದ ಡಾ ರಚನಾ ಅಗರ್ವಾಲ್ ಸಲಹೆ ನೀಡಿದ್ದಾರೆ.

ಹುಟ್ಟಿದ ಮಗು ಪ್ರಾರಂಭದ 6ತಿಂಗಳುಗಳ ಕಾಲ ತಾಯಿಯ ಎದೆ ಹಾಲನ್ನೇ ಅವಲಂಬಿಸಿರುವುದರಿಂದ ಪೌಷ್ಟಿಕ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಜೊತೆಗೆ ಉತ್ತಮವಾದ ಆಹಾರ ಪದ್ಧತಿಯೂ ನಿಮ್ಮ ಎದೆ ಹಾಲಿನ ಉತ್ಪಾದನೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮಗು ಆರೋಗ್ಯಕರವಾಗಿರುತ್ತದೆ ಎಂದು ಪೌಷ್ಟಿಕತಜ್ಞರಾದ ಲವ್ನೀತ್ ಬಾತ್ರಾ ಸಲಹೆಯನ್ನು ಇಂಡಿಯನ್ ಎಕ್ಸ್ ಪ್ರೆಸ್ಸ್ ನಲ್ಲಿ ಪ್ರಕಟಿಸಲಾಗಿದೆ.

ತಾಯಂದಿರು ಹಾಲುಣಿಸುವ ಹಂತದಲ್ಲಿ ಸಮತೋಲಿತ ಆಹಾರವನ್ನು ಸೇವಿಸಬೇಕು. ಪ್ರಸವದ ನಂತರ ಸಾಕಷ್ಟು ತಾಯಂದಿರು ತಮ್ಮ ದೇಹದ ಕಡೆ ಹೆಚ್ಚಿನ ಆಸಕ್ತಿಯನ್ನು ವಹಿಸುವುದ್ದರಿಂದ ತೂಕ ಇಳಿಸಲು ಮುಂದಾಗುತ್ತಾರೆ. ಇದ್ದರಿಂದಾಗಿ ತಮ್ಮ ಆಹಾರಕ್ರಮದಲ್ಲಿ ಸಾಕಷ್ಷು ಬದಲಾವಣೆಯನ್ನು ಮಾಡಿಕೊಳ್ಳುತ್ತಾರೆ. ಇದು ಮಹಿಳೆಯರಲ್ಲಿ ಸಾಮಾನ್ಯವಾಗಿ ಅಪೌಷ್ಟಿಕತೆಗೆ ಕಾರಣವಾಗಬಹುದು ಮತ್ತು ಅವರ ಹಾಲು ಉತ್ಪಾದನೆಗೆ ಅಡ್ಡಿಯಾಗಬಹುದು, ಅಲ್ಲದೇ ತಾಯಿಯು ಪ್ರಮುಖ ಪೋಷಕಾಂಶಗಳನ್ನು ಕಳೆದುಕೊಳ್ಳಲು ಕಾರಣವಾಗಬಹುದು ಎಂದು ಪೌಷ್ಟಿಕತಜ್ಞರಾದ ಡಾ.ರಚನಾ ಅಗರ್ವಾಲ್ ಅಭಿಪ್ರಾಯಪಟ್ಟಿದ್ದಾರೆ.

ಬೆಳ್ಳುಳ್ಳಿ, ದವಸ ಧಾನ್ಯಗಳು ,ಬೀಜಗಳು, ಹೆಸರು ಬೇಳೆ ಕಾಳು, ತುಪ್ಪ , ಮತ್ತು ಅಂಜೀರ ಮುಂತಾದ ಆಹಾರಗಳನ್ನು ಈ ಹಂತದಲ್ಲಿ ಸೇವಿಸುವುದು ಒಳ್ಳೆಯದು. ಆಲ್ಕೋಹಾಲ್, ಡ್ರಗ್ಸ್ ಅಥವಾ ಜಂಕ್ ಫುಡ್‌ ಮುಂತಾದವುಗಳು ಹಾಲು ಉತ್ಪಾದನೆಗೆ ಅಡ್ಡಿಯಾಗಬಹುದುಎಂದು ತಿಳಿಸಿದ್ದಾರೆ.

ಇದನ್ನು ಓದಿ:

ಲವ್ನೀತ್ ಬಾತ್ರಾರವರು ಈ ಸಮಯದಲ್ಲಿ ತಾಯಂದಿರಿಗೆ ನೀಡಿರುವ ಸಲಹೆಗಳು ಈ ಕೆಳಗಿನಂತಿವೆ:

ಆದಷ್ಟು ಕಾಫಿಯಿಂದ ದೂರವಿರಿ:

ಹೌದು, ಪ್ರಸವದ ನಂತರದ ಆದಷ್ಟು ತಿಂಗಳುಗಳ ಕಾಲ ಕಾಫಿಯಿಂದ ದೂರವಿರುವುದು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಅತ್ಯಂತ ಸೂಕ್ತವಾಗಿದೆ. ಕೆಫೀನ್ ಗಳು ಮಕ್ಕಳ ದೇಹಕ್ಕೆ ಸೂಕ್ತವಲ್ಲ. ಮಕ್ಕಳ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದ ಕೆಫೀನ್, ಕಾಲಾನಂತರದಲ್ಲಿ ನಿಮ್ಮ ಮಗುವಿಗೆ ಕಿರಿಕಿರಿ ಮತ್ತು ನಿದ್ರೆಗೆ ತೊಂದರೆ ಉಂಟುಮಾಡುತ್ತದೆ.


ಪುದೀನಾ:

ಕೆಲವು ಗಿಡಮೂಲಿಕೆಗಳು ಹಾಲು ಪೂರೈಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇವುಗಳನ್ನು ಆಂಟಿಗ್ಯಾಲಕ್ಟಾಗೋಗ್ಸ್ ಎಂದು ಕರೆಯಲಾಗುತ್ತದೆ ಮತ್ತು ಪುದೀನಾ ಅವುಗಳಲ್ಲಿ ಒಂದು. ಆದ್ದರಿಂದ ಮಗುವಿಗೆ ಹಾಲುಣಿಸುವಂತಹ ಇಂತಹ ಸಮಯದಲ್ಲಿ ಪುದೀನಾ ಸೇವನೆಯಿಂದ ದೂರವಿರಿ.

ಮದ್ಯಪಾನ:

ಮಹಿಳೆಯರು ಹಾಲುಣಿಸುವ ಸಮಯದಲ್ಲಿ ಮದ್ಯಪಾನದಿಂದ ದೂರವಿರಬೇಕು. ಇದಲ್ಲದೆ, ಆಲ್ಕೋಹಾಲ್ ಸೇವನೆಯು ಶಿಶುವಿನ ಹಾಲಿನ ಸೇವನೆಯನ್ನು ಶೇಕಡಾ 20 ರಿಂದ 23 ರಷ್ಟು ಕಡಿಮೆ ಮಾಡುತ್ತದೆ ಮತ್ತು ಶಿಶುಗಳ ದಿನದ ಚಟುವಟಿಕೆಗಳಲ್ಲಿ ಮತ್ತು ನಿದ್ರೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 5:13 pm, Mon, 24 October 22