ಸಾಮಾನ್ಯವಾಗಿ ಹಣ್ಣುಗಳೆಂದರೆ ಎಲ್ಲರಿಗೂ ಇಷ್ಟ. ಹಸಿದಾಗ ಮೊದಲು ನೆನಪಾಗುವುದೇ ಹಣ್ಣುಗಳು. ಅದರಲ್ಲಿಯೂ ನಮಗಿಷ್ಟವಾದ ಹಣ್ಣುಗಳ ಸಲಾಡ್, ಜ್ಯೂಸ್ ಮಾಡಿ ಸವಿಯುತ್ತೇವೆ. ಆದರೆ ಈ ಒಂದು ವಿಷಯವನ್ನು ಮಾತ್ರ ನೆನಪಿನಲ್ಲಿಡಿ. ಒಂದು ಹಣ್ಣಿನಲ್ಲಿರುವ ಪೋಷಕಾಂಶ ಮತ್ತು ಇನ್ನೊಂದು ಹಣ್ಣಿನಲ್ಲಿರುವ ವಿರುದ್ಧ ಪೋಷಕಾಂಶಗಳು ನಮ್ಮ ದೇಹಕ್ಕೆ ಒಂದೇ ಬಾರಿ ಸೇರಿದಾಗ ಅದು ಆರೋಗ್ಯವನ್ನು ಹಾನಿಗೊಳಿಸುತ್ತದೆ.
ಸಾಮಾನ್ಯವಾಗಿ ಹಣ್ಣುಗಳೆಲ್ಲವನ್ನು ಮಿಶ್ರಣ ಮಾಡಿ ಸಲಾಡ್ ಮಾಡಿ ಸ್ವೀಕರಿಸುತ್ತೇವೆ. ತಿನ್ನಲು ರುಚಿಯಾಗಿರುವುದಂತೂ ಸತ್ಯ. ಆದರೆ ಕೆಲವು ವಿರುದ್ಧ ಪೋಷಕಾಂಶಗಳು ಒಟ್ಟಿಗೆ ಸೇರಿಸಿ ಸೇವಿಸುವುದು ನಮ್ಮ ದೇಹದ ಆರೋಗ್ಯಕ್ಕೆ ಸಮಸ್ಯೆಯನ್ನು ತಂದೊಡ್ಡಬಹುದು. ಹಾಗಿರುವಾಗ ಆಹಾರ ಸೇವನೆಯ ಕುರಿತಾಗಿ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ.
ಈ 5 ವಿಧದ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಬೇಡಿ
ಕಿತ್ತಳೆ ಮತ್ತು ಕ್ಯಾರೆಟ್: ಈ ಎರಡು ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸದಿರಿ. ಇದು ಎದೆಯುರಿ ಮತ್ತು ಮೂತ್ರಪಿಂಡ ಸಮಸ್ಯೆಯನ್ನು ತಂದೊಡ್ಡಬಹುದು.
ಪಪ್ಪಾಯಿ ಮತ್ತು ಲಿಂಬು: ಹುಳಿ ಮತ್ತು ಸಿಹಿ ಅಂಶಗಳನ್ನು ಯಾವಾಗಲೂ ಒಟ್ಟಿಗೆ ಸೇವಿಸಬಾರದು. ಇವುಗಳೆರಡನ್ನು ಒಟ್ಟಿಗೆ ಮಿಶ್ರಣ ಮಾಡಿ ಸೇವಿಸುವುದರಿಂದ ರಕ್ತಹೀನತೆ ಮತ್ತು ಹಿಮೋಗ್ಲೋಬಿನ್ ಅಸಮತೋಲನ ಉಂಟಾಗುತ್ತದೆ.
ಕಿತ್ತಳೆ ಮತ್ತು ಹಾಲು: ಸಾಮಾನ್ಯವಾಗಿ ಹಾಲಿನ ಜತೆ ಹಣ್ಣುಗಳನ್ನು ಮಿಶ್ರಣ ಮಾಡಿ ಸೇವಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಜತೆಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ತರಬಹುದು. ಕಿತ್ತಳೆ ಹಣ್ಣಿನಲ್ಲಿರುವ ಆಮ್ಲವು ಜೀರ್ಣಕ್ರಿಯೆಗೆ ಬೇಕಾದ ಕಿಣ್ವಗಳನ್ನು ನಾಶ ಪಡಿಸುತ್ತದೆ.
ಪೇರಲ ಮತ್ತು ಬಾಳೆ ಹಣ್ಣು: ಇವೆರಡು ಹಣ್ಣುಗಳನ್ನು ಒಟ್ಟಿಗೆ ಸೇವಿಸಿದಾಗ ವಾಕರಿಗೆ, ಹೊಟ್ಟೆ ಉಬ್ಬುವುದು, ನಿರಂತರ ತಲೆನೋವಿನ ಸಮಸ್ಯೆಗಳು ಕಂಡು ಬರುತ್ತವೆ. ಹಾಗಾಗಿ ಈ ಎರಡು ಹಣ್ಣುಗಳನ್ನು ಒಟ್ಟಿಗೆ ಸೇವಿಸದಿರುವುದು ಒಳಿತು.
ಅನಾನಸ್ ಮತ್ತು ಹಾಲು: ಅನಾನಸ್ ಹಣ್ಣಿನಲ್ಲಿ ಬ್ರೊಮೆಲೇನ್ ಸಂಯುಕ್ತ ಸಮೃದ್ಧಯವಾಗಿರುತ್ತದೆ. ಇದು ಹಾಲಿನೊಂದಿಗೆ ಬೆರೆತಾಗ ದೇಹದಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಇದು ಹೊಟ್ಟೆನೋವು, ವಾಕರಿಕೆ, ತಲೆನೋವು ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಇದನ್ನೂ ಓದಿ:
ಹಾಲಿನ ಜತೆ ಬಾಳೆಹಣ್ಣು ಮಿಶ್ರಣ ಸೇವಿಸುತ್ತಿದ್ದೀರಾ? ಆರೋಗ್ಯಕ್ಕೆ ಹಾನಿ ಎಂಬುದನ್ನು ಮರೆಯದಿರಿ!
Health Tips: ಬಾಳೆಹಣ್ಣು ಸೇವಿಸುವ ಅಭ್ಯಾಸ ಇದೆಯೇ? ಖಾಯಿಲೆಗಳಿಂದ ದೂರವಿರಲು ಹಣ್ಣುಗಳ ಸೇವನೆ ಉತ್ತಮ