ಭಾರತದಲ್ಲಿ 2030ರ ವೇಳೆಗೆ ಕಣ್ಣಿನ ಸಮಸ್ಯೆ ಹೆಚ್ಚಳ; ತಡೆಗಟ್ಟಲು ಹೀಗೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 19, 2024 | 3:31 PM

ಬ್ರಿಟಿಷ್ ಜರ್ನಲ್ ಆಫ್ ನೇತ್ರವಿಜ್ಞಾನದಲ್ಲಿನ ನಡೆದ ಸಂಶೋಧನೆಯಲ್ಲಿ, 2030 ರ ವೇಳೆಗೆ ಭಾರತದಲ್ಲಿ 5 ರಿಂದ 15 ವರ್ಷದೊಳಗಿನ ಅದರಲ್ಲಿಯೂ ನಗರ ವಾಸಿಗಳಾಗಿರುವ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಜನರು ಮಯೋಪಿಯಾದಿಂದ ಬಳಲುತ್ತಾರೆ ಎಂಬ ಆಘಾತಕಾರಿ ಹೇಳಿಕೆಯನ್ನು ನೀಡಿದೆ. ಕಳಪೆ ಜೀವನಶೈಲಿ ಮತ್ತು ದೀರ್ಘಕಾಲದ ಮೊಬೈಲ್, ಟಿವಿಯ ಬಳಕೆಯಿಂದಾಗಿ ಈ ಸಮಸ್ಯೆ ಬರುವ ಸಾಧ್ಯತೆಯಿದೆ. ಭಾರತದಲ್ಲಿ 2050 ರ ವೇಳೆಗೆ ಅದರ ದರವು 49% ತಲುಪುವ ನಿರೀಕ್ಷೆಯಿದೆ ಎಂದು ಸಂಶೋಧನೆ ಹೇಳುತ್ತದೆ.

ಭಾರತದಲ್ಲಿ 2030ರ ವೇಳೆಗೆ ಕಣ್ಣಿನ ಸಮಸ್ಯೆ ಹೆಚ್ಚಳ; ತಡೆಗಟ್ಟಲು ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ಅಧ್ಯಯನಗಳು ಮಯೋಪಿಯಾವನ್ನು ಗಂಭೀರ ಕಾಯಿಲೆ ಎಂದು ಪರಿಗಣಿಸಿವೆ. ಬ್ರಿಟಿಷ್ ಜರ್ನಲ್ ಆಫ್ ನೇತ್ರವಿಜ್ಞಾನದಲ್ಲಿ ನಡೆದ ಸಂಶೋಧನೆಯಲ್ಲಿ, 2030 ರ ವೇಳೆಗೆ ಭಾರತದಲ್ಲಿ 5 ರಿಂದ 15 ವರ್ಷದೊಳಗಿನ ಅದರಲ್ಲಿಯೂ ನಗರ ವಾಸಿಗಳಾಗಿರುವ ಮೂರನೇ ಒಂದು ಭಾಗದಷ್ಟು ಮಕ್ಕಳು ಮಯೋಪಿಯಾದಿಂದ ಬಳಲುತ್ತಾರೆ ಎಂಬ ಆಘಾತಕಾರಿ ಹೇಳಿಕೆಯನ್ನು ನೀಡಿದೆ. ಕಳಪೆ ಜೀವನಶೈಲಿ ಮತ್ತು ದೀರ್ಘಕಾಲದ ಮೊಬೈಲ್, ಟಿವಿಯ ಬಳಕೆಯಿಂದಾಗಿ ಈ ಸಮಸ್ಯೆ ಬರುವ ಸಾಧ್ಯತೆಯಿದೆ. ಭಾರತದಲ್ಲಿ 2050 ರ ವೇಳೆಗೆ ಅದರ ದರವು 49% ತಲುಪುವ ನಿರೀಕ್ಷೆಯಿದೆ ಎಂದು ಸಂಶೋಧನೆ ಹೇಳುತ್ತದೆ. ಮಯೋಪಿಯಾ ಮುಂಬರುವ ಸಮಯದಲ್ಲಿ ಗಂಭೀರ ಸಮಸ್ಯೆಯಾಗುತ್ತದೆ ಎಂಬುದು ಈ ಸಂಶೋಧನೆಯಿಂದ ಬಹಿರಂಗವಾಗಿದ್ದು ಸಾಧ್ಯವಾದಷ್ಟು ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸಿ, ಮಕ್ಕಳನ್ನು ಇದರಿಂದ ಪಾರು ಮಾಡುವ ಜವಾಬ್ಧಾರಿ ಪೋಷಕರ ಮೇಲಿದೆ. ಹಾಗಾಗಿ ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಮಕ್ಕಳಿಗೆ ಈ ಸಮಸ್ಯೆ ಬರದಂತೆ ತಡೆಯುವುದು ಅವಶ್ಯವಾಗಿದೆ. ಹಾಗಾದರೆ ಇದನ್ನು ತಡೆಗಟ್ಟುವುದು ಹೇಗೆ? ಯಾವ ರೀತಿಯಲ್ಲಿ ಮುಂಜಾಗ್ರತೆ ವಹಿಸಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ.

ಮಯೋಪಿಯಾ ಎಂಬುದು ಸಾಮಾನ್ಯ ಕಣ್ಣಿನ ಸಮಸ್ಯೆಯಾಗಿದ್ದು, ಇದರಲ್ಲಿ ವ್ಯಕ್ತಿಯು ದೂರದ ವಸ್ತುಗಳನ್ನು ನೋಡಲು ತೊಂದರೆ ಅನುಭವಿಸುತ್ತಾನೆ ಆದರೆ ಆತ ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು. ಮಯೋಪಿಯಾದಲ್ಲಿ, ದೂರದಲ್ಲಿರುವ ವಸ್ತುಗಳು ಮಸುಕಾಗಿ ಕಾಣುತ್ತವೆ. ಕಣ್ಣುಗಳ ಈ ಸಮಸ್ಯೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಕೆಲವು ಸಂದರ್ಭಗಳಲ್ಲಿ, ಈ ರೋಗವು ಆನುವಂಶಿಕ ಕಾರಣಗಳಿಂದಾಗಿಯೂ ಬರಬಹುದು. ಈ ಪರಿಸ್ಥಿತಿಯಲ್ಲಿ, ವೈದ್ಯರು ಕನ್ನಡಕವನ್ನು ಶಿಫಾರಸು ಮಾಡುತ್ತಾರೆ. ಆದರೆ ಆತಂಕದ ವಿಷಯವೆಂದರೆ ಪ್ರತಿ ವರ್ಷ ಮಯೋಪಿಯಾ ಪ್ರಕರಣಗಳು ಹೆಚ್ಚುತ್ತಿವೆ, ಅದರಲ್ಲಿಯೂ ಈ ರೋಗದ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದೆ. ಪೀಡಿಯಾಟ್ರಿಕ್ ನೇತ್ರವಿಜ್ಞಾನ ಸೊಸೈಟಿ ಆಫ್ ಇಂಡಿಯಾ ಮತ್ತು ಇಎನ್ ಟಿ ಫಾರ್ಮಾಸ್ಯುಟಿಕಲ್ಸ್ ಜಂಟಿಯಾಗಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿವೆ. ಇದರಲ್ಲಿ, ಭಾರತದಾದ್ಯಂತ 3 ಕೋಟಿಗೂ ಹೆಚ್ಚು ಪೋಷಕರು, ಶಿಕ್ಷಕರು ಮತ್ತು ಮಕ್ಕಳಿಗೆ ಈ ರೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಡುವುದು ಇದರ ಉದ್ದೇಶವಾಗಿದೆ.

ಮಯೋಪಿಯಾ ಬಗ್ಗೆ ಅರಿವಿನ ಕೊರತೆ

ಮಕ್ಕಳ ನೇತ್ರತಜ್ಞ ಡಾ. ಜಿತೇಂದ್ರ ಜೆಥಾನಿ ಅವರು ಹೇಳುವ ಪ್ರಕಾರ, “ಪೋಷಕರು ತಮ್ಮ ಮಕ್ಕಳ ಕಣ್ಣುಗಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಮಯೋಪಿಯಾವನ್ನು ತಡೆಗಟ್ಟಲು ನಿಯಮಿತ ತಪಾಸಣೆಗಳು, ಪರದೆಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸುವುದು ಮುಖ್ಯವಾಗುತ್ತದೆ. ಮಕ್ಕಳು ದೀರ್ಘಕಾಲದ ವರೆಗೆ ಮೊಬೈಲ್, ಟಿವಿಗಳನ್ನು ನೋಡಿದರೆ, ಮಯೋಪಿಯಾದ ಅಪಾಯ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮಕ್ಕಳು ಫೋನ್ ಬಳಕೆಯನ್ನು ಕಡಿಮೆ ಮಾಡುವಂತೆ ಪೋಷಕರು ಕಾಳಜಿ ವಹಿಸಬೇಕು. ಜೊತೆಗೆ ಕಾರಣವಿಲ್ಲದೆ ಅವರಿಗೆ ಫೋನ್ ಅಥವಾ ಲ್ಯಾಪ್ಟಾಪ್ಗಳನ್ನು ನೀಡಬೇಡಿ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ:Health News: ಡಯಾಲಿಸಿಸ್ ಎಂದರೇನು..? ಯಾವಾಗ ಅಗತ್ಯವಿರುತ್ತದೆ?

ಮಯೋಪಿಯಾವನ್ನು ತಡೆಗಟ್ಟುವುದು ಹೇಗೆ?

ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸುವ ಮೂಲಕ ಮಯೋಪಿಯಾಗೆ ಚಿಕಿತ್ಸೆ ನೀಡಬಹುದು. ಆದರೆ ಇದರಿಂದ ಪರಿಹಾರ ಸಿಗದಿದ್ದರೆ ಲೇಸರ್ ಶಸ್ತ್ರಚಿಕಿತ್ಸೆಯಿಂದ ಮಯೋಪಿಯಾವನ್ನು ಗುಣಪಡಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಕಾರ್ನಿಯಾ ಶಸ್ತ್ರಚಿಕಿತ್ಸೆಯೂ ಅಗತ್ಯವಿರುತ್ತದೆ. ಆದರೆ ಇದಕ್ಕೂ ಮೊದಲು ಮಯೋಪಿಯಾವನ್ನು ನಿಯಂತ್ರಿಸಲು ನಿಯಮಿತವಾಗಿ ಕಣ್ಣಿನ ಪರೀಕ್ಷೆಗಳನ್ನು ಮಾಡಿಸಿ ಮತ್ತು ಮನೆಯಲ್ಲಿ ಟಿವಿ ಮತ್ತು ಮೊಬೈಲ್ ಬಳಕೆ ಕಡಿಮೆ ಮಾಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ