Diabetes Distress: ಮಧುಮೇಹ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ; ಸಂಶೋಧನೆ

ಮಧುಮೇಹವು ದೈಹಿಕವಾಗಿ ಮತ್ತು ಮಾನಸಿಕವಾಗಿ ದೇಹವನ್ನು ಹಾನಿಗೊಳಿಸುತ್ತದೆ. ದೇಹದ ಮೇಲೆ ಮಧುಮೇಹದ ಪರಿಣಾಮದ ಬಗ್ಗೆ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ನಲ್ಲಿ ಇತ್ತೀಚಿನ ಅಧ್ಯಯನವನ್ನು ಪ್ರಕಟಿಸಲಾಗಿದೆ. ಟೈಪ್ -1 ಮತ್ತು ಟೈಪ್ -2 ಮಧುಮೇಹ ಹೊಂದಿರುವ ರೋಗಿಗಳಲ್ಲಿ ಖಿನ್ನತೆಯ ಅಪಾಯವು ಸಾಮಾನ್ಯ ಜನರಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಈ ರೋಗಿಗಳು ಆತಂಕವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ 20% ಹೆಚ್ಚು ಎಂಬುದು ಸಾಬೀತಾಗಿದೆ. ಹಾಗಾದರೆ ಮಧುಮೇಹವು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Diabetes Distress: ಮಧುಮೇಹ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ; ಸಂಶೋಧನೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 6:12 PM

ಈಗೀನ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಅದರಲ್ಲಿಯೂ ಮಧುಮೇಹ ಭಾರತದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದೆ. ರೋಗಿಗಳ ಸಂಖ್ಯೆ 100 ದಶಲಕ್ಷಕ್ಕೂ ಹೆಚ್ಚಾಗಿದೆ. ಈ ರೋಗವು ದೈಹಿಕವಾಗಿ ಮತ್ತು ಮಾನಸಿಕವಾಗಿ ದೇಹವನ್ನು ಹಾನಿಗೊಳಿಸುತ್ತದೆ. ದೇಹದ ಮೇಲೆ ಮಧುಮೇಹದ ಪರಿಣಾಮದ ಬಗ್ಗೆ ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ನಲ್ಲಿ ಇತ್ತೀಚಿನ ಅಧ್ಯಯನವನ್ನು ಪ್ರಕಟಿಸಲಾಗಿದೆ. ಟೈಪ್ -1 ಮತ್ತು ಟೈಪ್ -2 ಮಧುಮೇಹ ಹೊಂದಿರುವ ರೋಗಿಗಳಲ್ಲಿ ಖಿನ್ನತೆಯ ಅಪಾಯವು ಸಾಮಾನ್ಯ ಜನರಿಗಿಂತ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಈ ರೋಗಿಗಳು ಆತಂಕವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ 20% ಹೆಚ್ಚು ಎಂಬುದು ಸಾಬೀತಾಗಿದೆ. ಹಾಗಾದರೆ ಮಧುಮೇಹವು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಧುಮೇಹ ಇರುವ ರೋಗಿಗಳಲ್ಲಿ ಕೆಲವು ರೀತಿಯ ಹಾರ್ಮೋನುಗಳು ತೊಂದರೆಗೊಳಗಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಈ ಕಾರಣದಿಂದಾಗಿ, ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಮಧುಮೇಹ ಬಂದ ನಂತರ ಇತರ ಕಾಯಿಲೆಗಳು ಬರುತ್ತವೆ ಎಂದು ಹೆದರುವ ಕೆಲವು ಜನರಿದ್ದಾರೆ. ಈ ಭಯವು ನಿಮ್ಮ ಆತಂಕವನ್ನು ಹೆಚ್ಚು ಮಾಡುತ್ತದೆ. ಅದಲ್ಲದೆ ದೀರ್ಘಕಾಲದ ವರೆಗೆ ಆತಂಕವಿದ್ದರೆ, ಅದು ಖಿನ್ನತೆಗೆ ಕಾರಣವಾಗುತ್ತದೆ. ದಿ ಲ್ಯಾನ್ಸೆಟ್ ಅಧ್ಯಯನದ ಪ್ರಕಾರ, ಸಕ್ಕರೆ ಮಟ್ಟ ಹೆಚ್ಚಾದಾಗ ಅದರ ಪರಿಣಾಮವು ದೇಹದ ಪ್ರತಿಯೊಂದು ಭಾಗದ ಮೇಲೆ ಅದರಲ್ಲಿಯೂ ಇದು ಮೆದುಳು, ಶ್ವಾಸಕೋಶ, ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಮೆದುಳಿನ ಮೇಲೆ ಅದರ ಪರಿಣಾಮ ಹೆಚ್ಚಾದಾಗ, ಅದು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ.

ಮಧುಮೇಹವು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ದೆಹಲಿಯ ಜಿಟಿಬಿ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಡಾ. ಅಜಿತ್ ಕುಮಾರ್ ಅವರು ಹೇಳುವ ಪ್ರಕಾರ ಹೆಚ್ಚಿನ ಸಕ್ಕರೆ ಮಟ್ಟವು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ದೀರ್ಘಕಾಲದ ವರೆಗೆ ಹೆಚ್ಚಾದರೆ, ಅದು ಮೆದುಳಿನ ಸಮತೋಲನಕ್ಕೆ ತೊಂದರೆ ಮಾಡುತ್ತದೆ ಬಳಿಕ ಇದು ಮಾನಸಿಕ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಮಧುಮೇಹದಲ್ಲಿ ಆಕ್ಸಿಡೇಟಿವ್ ಒತ್ತಡದ ಮಟ್ಟವೂ ಹೆಚ್ಚಾಗುತ್ತದೆ. ಜೊತೆಗೆ ಆತಂಕ ಮತ್ತು ಖಿನ್ನತೆಗೆ ಕಾರಣವಾಗಬಹುದು.

ವಿಶ್ವದಾದ್ಯಂತ ಮಧುಮೇಹದಿಂದ ಬಳಲುತ್ತಿರುವ ಜನಸಂಖ್ಯೆಯ 30 ಪ್ರತಿಶತದಷ್ಟು ಜನರು ಮಾನಸಿಕ ಆರೋಗ್ಯ ಹದಗೆಡುವ ಅಪಾಯದಲ್ಲಿದ್ದಾರೆ ಎಂದು ಡಾ. ಅಜಿತ್ ಕುಮಾರ್ ಹೇಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ವರದಿಯ ಪ್ರಕಾರ, ಭಾರತವು 2022 ರಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ದಾಖಲಿಸಿದೆ, ಇದು ವಿಶ್ವದ 828 ಮಿಲಿಯನ್ ಪ್ರಕರಣಗಳಲ್ಲಿ ಕಾಲು ಭಾಗದಷ್ಟಿದೆ.

ಇದನ್ನೂ ಓದಿ: ಮಲ ಹಿಡಿದಿಟ್ಟುಕೊಳ್ಳುವುದು ಹೃದಯಾಘಾತಕ್ಕೆ ಕಾರಣವಾಗಬಹುದು! ತಜ್ಞರಿಂದ ಎಚ್ಚರಿಕೆ

ಮಧುಮೇಹವನ್ನು ತಡೆಗಟ್ಟುವುದು ಹೇಗೆ?

-ಪ್ರತಿದಿನ ವ್ಯಾಯಾಮ ಮಾಡಿ

-ಆಹಾರದ ಬಗ್ಗೆ ಕಾಳಜಿ ವಹಿಸಿ

-ಮಾನಸಿಕ ಒತ್ತಡಕ್ಕೆ ಒಳಗಾಗಬೇಡಿ

-ಹೆಚ್ಚು ಸಿಹಿತಿಂಡಿಗಳನ್ನು ತಿನ್ನಬೇಡಿ

-ಸ್ಥೂಲಕಾಯತೆಯನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ