ಮಲ ಹಿಡಿದಿಟ್ಟುಕೊಳ್ಳುವುದು ಹೃದಯಾಘಾತಕ್ಕೆ ಕಾರಣವಾಗಬಹುದು! ತಜ್ಞರಿಂದ ಎಚ್ಚರಿಕೆ
ಬೆಳಿಗ್ಗೆ ಎದ್ದ ತಕ್ಷಣ ಮಲವಿಸರ್ಜನೆ ಮಾಡುವುದು ಎಷ್ಟು ಮುಖ್ಯ? ಅದು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಕೆಲವರಿಗೆ ತಿಳಿದಿಲ್ಲದಿರಬಹುದು ಇನ್ನು ಕೆಲವರಿಗೆ ತಿಳಿದಿದ್ದರೂ ಅದಕ್ಕಾಗಿ ಸರಿಯಾದ ಸಮಯ ಕೊಡದೆಯೇ ಸ್ವಯಂಪ್ರೇರಿತವಾಗಿ ತಡೆ ಹಿಡಿಯುವ ಅಭ್ಯಾಸ ಬೆಳೆಸಿಕೊಂಡಿರಬಹುದು. ಇದು ಮಲವಿಸರ್ಜನೆಗೆ ಹೋಗುವ ನೈಸರ್ಗಿಕ ಪ್ರಚೋದನೆಯನ್ನು ನಿರ್ಲಕ್ಷಿಸುವುದಾಗಿದೆ. ಒಂದು ಅಥವಾ ಎರಡು ಸಂದರ್ಭಗಳಲ್ಲಿ ಮಲವನ್ನು ಹಿಡಿದಿಟ್ಟುಕೊಳ್ಳುವುದು ಹಾನಿಕಾರಕವಲ್ಲ, ಆದರೆ ಇದನ್ನು ಆಗಾಗ ಮಾಡುವುದರಿಂದ ಮಲಬದ್ಧತೆ, ಉರಿಯೂತ ಮತ್ತು ತೀವ್ರವಾದ ತೊಡಕುಗಳಿಗೆ ಕಾರಣವಾಗಬಹುದು, ಇದು ಅಂತಿಮವಾಗಿ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಬಿಡುವಿಲ್ಲದ ಜೀವನದಲ್ಲಿ ಬೆಳಿಗ್ಗೆ ಶೌಚಾಲಯದಲ್ಲಿಯೂ ಸಾಕಷ್ಟು ಸಮಯ ಕಳೆಯಲು ಆಗದವರಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ ಮಲವಿಸರ್ಜನೆ ಮಾಡುವುದು ಎಷ್ಟು ಮುಖ್ಯ? ಅದು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಕೆಲವರಿಗೆ ತಿಳಿದಿಲ್ಲದಿರಬಹುದು ಇನ್ನು ಕೆಲವರಿಗೆ ತಿಳಿದಿದ್ದರೂ ಅದಕ್ಕಾಗಿ ಸರಿಯಾದ ಸಮಯ ಕೊಡದೆಯೇ ಸ್ವಯಂಪ್ರೇರಿತವಾಗಿ ತಡೆ ಹಿಡಿಯುವ ಅಭ್ಯಾಸ ಬೆಳೆಸಿಕೊಂಡಿರಬಹುದು. ಇದು ಮಲವಿಸರ್ಜನೆಗೆ ಹೋಗುವ ನೈಸರ್ಗಿಕ ಪ್ರಚೋದನೆಯನ್ನು ನಿರ್ಲಕ್ಷಿಸುವುದಾಗಿದೆ.
ನೈರ್ಮಲ್ಯ ಕಾಳಜಿಯಿಂದಾಗಿ ಕಚೇರಿ ಶೌಚಾಲಯಗಳನ್ನು ಬಳಸಲು ಬಯಸದ ಕಚೇರಿ ಕೆಲಸಗಾರರು, ಅದರಲ್ಲಿಯೂ ವಿಶೇಷವಾಗಿ ಯುವತಿಯರಲ್ಲಿ ಇದು ಸಾಮಾನ್ಯವಾಗಿದ್ದರೂ, ಇದು ಅವರ ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುತ್ತದೆ ಎಂದು ಹಲವಾರು ತಜ್ಞರು ಹೇಳಿದ್ದಾರೆ. ಅದಲ್ಲದೆ ಸಂಶೋಧನೆಗಳಿಂದ ಇದು ಸಾಬೀತಾಗಿದೆ. ಹಾಗಾದರೆ ಮಲವನ್ನು ಹಿಡಿದಿಟ್ಟುಕೊಳ್ಳುವುದು ಆರೋಗ್ಯದ ಮೇಲೆ ಯಾವ ರೀತಿಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಲ ಹಿಡಿದಿಟ್ಟುಕೊಳ್ಳುವುದು ಆರೋಗ್ಯ ಸಮಸ್ಯೆಗಳಿಗೆ ಹೇಗೆ ಕಾರಣವಾಗುತ್ತದೆ?
ಸಾಮಾನ್ಯವಾಗಿ ಮಲ ಹಿಡಿದಿಟ್ಟುಕೊಳ್ಳುವುದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವು ವ್ಯಕ್ತಿಗಳು ನೈರ್ಮಲ್ಯ ಕಾರಣದಿಂದ ಹೊರಗಡೆಯ ಶೌಚಾಲಯಗಳನ್ನು ಬಳಕೆ ಮಾಡುವುದಿಲ್ಲ. ಅಂತವರು ಮನೆಯ ವಾತಾವರಣದಲ್ಲಿ ಅವರಿಗೆ ಅನುಕೂಲಕರವಾದ ಶೌಚಾಲಯ ಬಳಸುವ ಮೂಲಕ ಕರುಳನ್ನು ಖಾಲಿ ಮಾಡಬೇಕು ಅಥವಾ ಬೆಳಗ್ಗಿನ ಸಮಯದಲ್ಲಿ ಆದಷ್ಟು ಮಲವನ್ನು ತಳ್ಳಲು ಪ್ರಯತ್ನಿಸಬೇಕು. ಸಮಯ ಕಳೆದಂತೆ ಇದು ನಿಮಗೆ ರೂಢಿಯಾಗುತ್ತದೆ. ಈ ರೀತಿ ಪ್ರಯತ್ನಿಸದೆಯೇ ಹೆಚ್ಚಿನ ಜನರು ತಮ್ಮ ಕರುಳಿನ ಅಭ್ಯಾಸಕ್ಕೆ ಅಡ್ಡಿಪಡಿಸಿಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳುತ್ತವೆ. ಹೊಟ್ಟೆ ಉಬ್ಬರ, ಹೊಟ್ಟೆ ತುಂಬುವಿಕೆ ಮತ್ತು ಮಲಬದ್ಧತೆಯ ಹೊರತಾಗಿ, ಮಲವನ್ನು ಹಿಡಿದಿಟ್ಟುಕೊಳ್ಳುವುದು ಗುದನಾಳದ ಹಿಗ್ಗುವಿಕೆಗೆ ಕಾರಣವಾಗುತ್ತದೆ.
ಗುದನಾಳದ ಹಿಗ್ಗುವಿಕೆ ಎಂದರೇನು?
ತಜ್ಞರ ಪ್ರಕಾರ, ಜೀರ್ಣಾಂಗವ್ಯೂಹದ ಕೊನೆಯಲ್ಲಿ ದೊಡ್ಡ ಕರುಳಿನ ಕೆಳಭಾಗವಾದ ಗುದನಾಳದ ಭಾಗವು ಸ್ನಾಯುವಿನ ತೆರೆಯುವಿಕೆಯ ಹೊರಗೆ ಜಾರಿದಾಗ ಗುದನಾಳದ ಪ್ರೊಲ್ಯಾಪ್ಸ್ ಎಂದೂ ಕರೆಯಲ್ಪಡುವ ಗುದನಾಳದ ಹಿಗ್ಗುವಿಕೆ ಸಂಭವಿಸುತ್ತದೆ. ಇದು ತೀವ್ರವಾದ ನೋವು ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಮಲವನ್ನು ಪದೇ ಪದೇ ಹಿಡಿದಿಟ್ಟುಕೊಳ್ಳುವುದರಿಂದ ಈ ಅಭ್ಯಾಸ ಬಳಿಕ ಮಲ ಅಸಂಯಮಕ್ಕೂ ಕಾರಣವಾಗಬಹುದು, ಅಂದರೆ ನಿಮ್ಮ ಮಲವನ್ನು ಹಿಡಿದಿಟ್ಟುಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಋತುಚಕ್ರ ತಡವಾಗಲು ಇದೆ ಕಾರಣ! ಯಾವ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು
ಮೂಲವ್ಯಾಧಿ ಮತ್ತು ಹೃದಯಾಘಾತ
ಮಲವನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವುದರಿಂದ ಮೂಲವ್ಯಾಧಿಯ ಜೊತೆಗೆ ಗುದದ್ವಾರದ ಸುತ್ತಲೂ ಬಿರುಕುಗಳನ್ನು ಉಂಟುಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅದರಲ್ಲಿಯೂ ವಯಸ್ಸಾದವರಲ್ಲಿ, ಹೆಚ್ಚಿನ ಒತ್ತಡವು ರಕ್ತದೊತ್ತಡವನ್ನು ಹೆಚ್ಚಿಸುವುದರಿಂದ ಇದು ಮತ್ತಷ್ಟು ಅಪಾಯಕಾರಿಯಾಗಬಹುದು. ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೂ ಕಾರಣವಾಗಬಹುದು. ಏಕೆಂದರೆ ಮೂಲವ್ಯಾಧಿ ರೋಗಿಗಳಲ್ಲಿ ಹೃದ್ರೋಗದ ಅಪಾಯವು ಕನಿಷ್ಠ 27 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಹೇಳುತ್ತದೆ. ಹೃದ್ರೋಗದ ಬೆಳವಣಿಗೆಗೆ ಕಾರಣವಾಗುವ ಅಂಶಗಳು ಮೂಲವ್ಯಾಧಿ ರೋಗಿಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎಂಬುದು ತಿಳಿದು ಬಂದಿದೆ.
ಶುದ್ಧ ಕರುಳನ್ನು ಕಾಪಾಡಿಕೊಳ್ಳಲು ಈ ವಿಧಾನವನ್ನು ಅನುಸರಿಸಿ;
ಕೆಲವು ವಿಷಯಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸುವ ಮೂಲಕ ನೀವು ಸ್ವಚ್ಛ ಕರುಳನ್ನು ಕಾಪಾಡಿಕೊಳ್ಳಬಹುದು.
ಅವುಗಳೆಂದರೆ:
ನಾರಿನಂಶ, ಹಣ್ಣು ಮತ್ತು ತರಕಾರಿಗಳು ಹೆಚ್ಚಿರುವ ಆಹಾರದ ಮೂಲಕ ಮಲ ಗಟ್ಟಿಯಾಗದಂತೆ ನೋಡಿಕೊಳ್ಳಿ.
ಡೈರಿ, ಪಾಸ್ತಾ, ಬ್ರೆಡ್ ಮತ್ತು ಬಾಳೆಹಣ್ಣುಗಳನ್ನು ಮಿತಿಗೊಳಿಸಿ.
ಪ್ರತಿದಿನ ಕನಿಷ್ಠ 7- 8 ಲೋಟ ನೀರು ಕುಡಿಯುವುದನ್ನು ಮರೆಯಬೇಡಿ.
ಪ್ರಚೋದನೆ ಇಲ್ಲದಿದ್ದರೂ ಶೌಚಾಲಯಕ್ಕೆ ಹೋಗಿ ಬನ್ನಿ.
ನಿಯಮಿತವಾಗಿ ವ್ಯಾಯಾಮ ಮಾಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ